ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಅರ್ಧ-ಮುಕ್ಕಾಲು ಗಂಟೆ ಸುರಿದ ಮಳೆಗೆ ಯಶವಂತಪುರದ ಮೈಸೂರು ಲ್ಯಾಂಪ್ ರಸ್ತೆಯಲ್ಲಿ ಒಣಗಿದ ಮರ ಧರೆಗುರುಳಿ ಅವಾಂತರ ಸೃಷ್ಟಿಯಾಗಿದೆ.
ಇನ್ನೊಂದೆಡೆ ವರುಣನ ಆರ್ಭಟಕ್ಕೆ ಲಗ್ಗೆರೆಯ ಪ್ರೀತಿ ನಗರದಲ್ಲಿ ರಸ್ತೆ ಕುಸಿದಿದೆ. ಚರಂಡಿ ಪೈಪ್ ಒಡೆದದ್ದರಿಂದ ರಸ್ತೆ ಕುಸಿದಿದ್ದು, ಬಿರುಕು ಬಿಟ್ಟ ಜಾಗದಲ್ಲಿ ಕಾರು, ಬೈಕ್, ಆಟೋ ಸೇರಿ ಹಲವು ವಾಹನಗಳು ಸಿಲುಕಿವೆ.
ಫ್ರೇಜರ್ ಟೌನ್ನಲ್ಲೂ ಸಹ ಧಾರಾಕಾರ ಮಳೆ ಸುರಿದಿದೆ. ನಗರದ ಬಹುತೇಕ ಎಲ್ಲಾ ಕಡೆ ಸಾಧಾರಣ ಮಳೆಯಾಗಿದೆ.