ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಇದೀಗ ಅದರ ಪರಿಣಾಮ ರಾಜಧಾನಿ ಬೆಂಗಳೂರಿನಲ್ಲೂ ಮಳೆ ಸುರಿಯುತ್ತಿದೆ.
ಹಗಲು-ರಾತ್ರಿ ಬಿಡುವು ಕೊಡದೆ ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇಂದು ಸಂಜೆ ಕೂಡಾ ಸುರಿದ ಜೋರು ಮಳೆಗೆ ಜನಜೀವನ ಆಸ್ತವ್ಯಸ್ಥಗೊಂಡಿತು.
ನಗರದ ಹೆಬ್ಬಾಳ, ಮಲ್ಲೇಶ್ವರಂ, ಮೆಜೆಸ್ಟಿಕ್, ಜಯನಗರ, ಕೆ.ಆರ್.ಮಾರ್ಕೆಟ್, ಕತ್ರಿಗುಪ್ಪೆ, ಬಿಟಿಎಮ್ ಲೇಔಟ್, ಕೋರಮಂಗಲ, ಸದಾಶಿವನಗರ, ಇಂದಿರಾನಗರದಲ್ಲೂ ಗುಡುಗು ಮಿಂಚುಸಹಿತ ಮಳೆ ಬಿತ್ತು. ಇದರಿಂದ ನಗರದ ತಗ್ಗುಪ್ರದೇಶಗಳು, ಅಂಡರ್ ಪಾಸ್‌ಗಳಲ್ಲಿ ನೀರು ನಿಂತಿದ್ದು ಕಂಡುಬಂತು.
ನಾಳೆಯಿಂದ ನವೆಂಬರ್ 17ರವರೆಗೂ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.