ETV Bharat / state

ಬೆಂಗಳೂರಿನಲ್ಲಿ ಭಾರಿ ಮಳೆ : ಪರದಾಡಿದ ಜನ - ಬಿಬಿಎಂಪಿ ಪಿಯು ಕಾಲೇಜಿನ ಕಾಂಪೌಂಡ್ ಗೇಟ್ ಜಖಂ

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲೆಲ್ಲ ನೀರು ನುಗ್ಗಿದೆ. ಪರಿಣಾಮ ರಾತ್ರಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ.

ಕಾರು ಜಖಂ
ಕಾರು ಜಖಂ
author img

By

Published : Sep 5, 2022, 10:58 PM IST

ಬೆಂಗಳೂರು: ಎಡೆ ಬಿಡದೆ ಸುರಿಯುತ್ತಿರುವ ಮಹಾಮಳೆಗೆ ಸಿಲಿಕಾನ್ ಸಿಟಿ ಅಕ್ಷರಶಃ ತತ್ತರಿಸುತ್ತಿದೆ. ಭಾಗಶಃ ತಗ್ಗು ಪ್ರದೇಶಗಳು ಮುಳುಗಡೆ ಆಗಿವೆ. ಇದರ ಪರಿಣಾಮ ಅನೇಕ ಪ್ರದೇಶಗಳಲ್ಲಿ ಜನರು ಪರದಾಡುವಂತಾಗಿದೆ.

ನಿನ್ನೆ ರಾತ್ರಿ ಸುರಿದ ಮತ್ತು ಇಂದು ಸಂಜೆಯ ಮಳೆ ಬೆಂಗಳೂರಿಗರನ್ನು ಹಿಂಡಿ ಹಿಪ್ಪೆ ಮಾಡಿದೆ. ಸತತವಾಗಿ ಸರಿಯುತ್ತಿರುವ ಮಳೆ ಬರೋಬ್ಬರಿ 131.6 ಮಿಲಿ ಮೀಟರ್ ಗಿಂತ ಹೆಚ್ಚಿನ ಮಳೆಯಾಗಿದ್ದು, ರಾಜಧಾನಿಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಭಾಗ ಸೇರಿದಂತೆ ಎಲ್ಲ ಕಡೆ ವರುಣ ಅಬ್ಬರಿಸಿದ್ದಾನೆ. ಪರಿಣಾಮ ಮನೆ ಒಳಕ್ಕೆ ಮಳೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲೆಲ್ಲ ನೀರು ನುಗ್ಗಿದ್ದು, ರಾತ್ರಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಸಂಕಷ್ಟಪಡುವಂತಾಗಿದೆ. ಪ್ರಮುಖವಾಗಿ ಮೆಜೆಸ್ಟಿಕ್, ಕೆ. ಆರ್ ಮಾರ್ಕೆಟ್‌, ವಿಧಾನಸೌಧ, ಕೆ ಆರ್ ಸರ್ಕಲ್, ಶಾಂತಿನಗರ, ಮಹಾಲಕ್ಷ್ಮಿ ಲೇಔಟ್, ಬ್ರಿಗೇಡ್ ರೋಡ್ , ಹಲಸೂರು ರಸ್ತೆ, ಬನಶಂಕರಿ ಸೇರಿದಂತೆ ಬಹುತೇಕ ರಸ್ತೆಗಳು ಜಲಾವೃತವಾಗಿವೆ.

ರಸ್ತೆಗಳು ಸಂಪೂರ್ಣ ಜಲಾವೃತ: ಸರ್ಜಾಪುರ ರಸ್ತೆಯ ರೈನ್ಬೋ ಲೇಔಟ್ ಸಂಪೂರ್ಣ ರಸ್ತೆಗಳು ಜಲಾವೃತವಾಗಿದೆ. ವಿಪ್ರೋ ಕಂಪನಿ ರಸ್ತೆಯೂ ನೀರಿನಿಂದ ತುಂಬಿದೆ. ಕಳೆದ ಹತ್ತು ದಿನಗಳಿಂದ ರೈಂಬೋ ಲೇಔಟ್ ಜನರ ಗೋಳಾಟ ಮುಂದುವರೆದಿದೆ.

ಕೆರೆಯಾದ ಎಕೋ ಸ್ಪೇಸ್: ಸಿಲಿಕಾನ್ ಸಿಟಿಯಲ್ಲಿ‌ ಸುರಿಯುತ್ತಿರುವ ಮಳೆಗೆ ಎಲ್ಲಿ ನೋಡಿದರೂ ನೀರು ಕಾಣಿಸಿಕೊಳ್ಳುತ್ತಿದೆ. ಹಾಗೆಯೇ ಬೆಳ್ಳಂದೂರು ಬಳಿಯ ಎಕೋ ಸ್ಪೇಸ್ ಬಳಿಯಲ್ಲಿ ಆಟೋ ಸಂಪೂರ್ಣ ಮುಳುಗಡೆ ಆಗಿದೆ. ಜತೆಗೆ ಬಹುತೇಕರು ತಮ್ಮ ವಾಹನಗಳನ್ನು ನಿಂತಲ್ಲೆ ಬಿಟ್ಟು ಹೋಗಿದ್ದಾರೆ. ವಿಂಗರ್ ಟಾಟಾಯೆಸ್ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಎರಡು ವಾಹನ ಜಖಂ ಆಗಿದೆ. ಅದೇ ರೀತಿಯಲ್ಲಿ ಮಹಾಲಕ್ಷ್ಮೀ ಲೇಔಟ್ ಸೋಮೇಶ್ವರ ನಗರದ ತರಕಾರಿ ಮಾರ್ಕೆಟ್ ಬಳಿ ಮರ ಬಿದ್ದಿದೆ.

ರಿಚ್ಮಂಡ್ ರಸ್ತೆಯಲ್ಲಿ ನೀರು: ಸತತವಾಗಿ ಸುರಿಯುತ್ತಿರುವ ಮಳೆಯಿಂದ ರಿಚ್ಮಂಡ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತಿದೆ. ಅದು‌ ಅಲ್ಲದೇ, ಸ್ಮಾರ್ಟ್ ಸಿಟಿ‌ ಯೋಜನೆ ಅಡಿ ನಿರ್ಮಾಣವಾಗಿರುವ ರಸ್ತೆಯಲ್ಲಿ‌ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಬೆಂಗಳೂರು ಮಾತ್ರವಲ್ಲದೇ ಕಳೆದ ರಾತ್ರಿ ಮತ್ತು ಇಂದು ಸುರಿದ ಭಾರೀ ಮಳೆಗೆ ನೆಲಮಂಗಲದ ಮುಕ್ತನಾತೇಶ್ವರ ದೇವಾಲಯದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಮಾನಿಕೆರೆ ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎಂ ಜಿ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ ಹಾಗೂ ಜನಪ್ರಿಯ ಅಪಾರ್ಟ್‍ಮೆಂಟ್ ರಸ್ತೆ ಕೂಡ ಜಲಾವೃತಗೊಂಡಿದೆ.

ಸರ್ವೀಸ್ ರಸ್ತೆ ಬಂದ್: ಅಮಾನಿಕೆರೆ ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಬಿದ್ದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗೆ ಕೆರೆಯ ನೀರು ನುಗ್ಗಿದ್ದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೇ ನೂರಾರು ವಾಹನಗಳು ಮಳೆಯ ನೀರಿನಲ್ಲಿ ಮುಳುಗಡೆಯಾಗಿದೆ. ನೆಲಮಂಗಲ ಬೆಂಗಳೂರು ಸರ್ವಿಸ್ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮತ್ತೊಂದೆಡೆ ಅಡಕಮಾರನಹಳ್ಳಿಯ ಜೈನ್ ಟೆಂಪಲ್ ಕೂಡ ನಾಲ್ಕೈದು ಅಡಿ ನೀರಿನಿಂದ ಜಲಾವೃತವಾಗಿದೆ.

ಧರೆಗೆ ಉರುಳಿದ ಮರ: ಮತ್ತೀಕೆರೆಯಲ್ಲಿ ಮರ ಉರುಳಿ ಬಿದ್ದಿದೆ. ಬಿಬಿಎಂಪಿ ಪಿಯು ಕಾಲೇಜಿನ ಕಾಂಪೌಂಡ್ ಗೇಟ್ ಜಖಂ ಆಗಿದೆ. ಜೊತೆಗೆ ಮರ ಬಿದ್ದು 4 ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಿಬಿಎಂಪಿ ಸಹಾಯವಾಣಿ: ಮಳೆ ಬಿಡುವ ಯಾವ ಲಕ್ಷಣ ಕಾಣುತ್ತಿಲ್ಲವಾದ್ದರಿಂದ ಈ ಮಧ್ಯೆ ನಗರದ ನಾಗರಿಕ ಸಂಸ್ಥೆ ಬಿಬಿಎಂಪಿ ಕೂಡ ಸಹಾಯವಾಣಿ ತೆರೆದಿದೆ. ಟೋಲ್ ಫ್ರೀ ಸಂಖ್ಯೆ 1533 ಸಹ ಮಳೆ ಸಹಾಯವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ಉಳಿದಂತೆ 24×7 ಸಹಾಯವಾಣಿ (2266 0000) ಮತ್ತು ವಾಟ್ಸಪ್ ಸಹಾಯವಾಣಿ (94806 85700) ಜೊತೆಗೆ ವಲಯ ಸಹಾಯವಾಣಿ ಕೂಡ ತೆರೆಯಲಾಗಿದೆ.

ಭದ್ರತಾ ಸಿಬ್ಬಂದಿಯಿಂದ ವ್ಯಕ್ತಿಯ ರಕ್ಷಣೆ: ಮಾರತ್ತಹಳ್ಳಿ ಸಿಲ್ಕ್​ ಬೋರ್ಡ್​ ಜಂಕ್ಷನ್ ರಸ್ತೆ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯ ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹಲವು ಕಡೆ ಬೋಟ್ ಸೇವೆ: ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವಾರು ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಪಾಲಿಕೆ ಅಧಿಕಾರಿಗಳು ಬೋಟ್​ಗಳಲ್ಲಿ ಜನರನ್ನು ಸ್ಥಳಾಂತರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಓದಿ: ಬೆಂಗಳೂರಲ್ಲಿ ಭಾರಿ ಮಳೆ: ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಬಂದ್.. ಅಪಾರ್ಟ್​ಮೆಂಟ್​​ಗಳು ಜಲಾವೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.