ಆನೇಕಲ್ (ಬೆಂಗಳೂರು): ತಾಲೂಕಿನಾದ್ಯಂತ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹೆಬ್ಬಗೋಡಿ, ಚಂದಾಪುರ, ಅತ್ತಿಬೆಲೆ, ಆನೇಕಲ್, ಸರ್ಜಾಪುರ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.
ಮನೆಗಳಿಗೆ ನೀರು ನುಗ್ಗಿದ್ದರಿಂದ ನೀರು ಹೊರಹಾಕಲು ನಿವಾಸಿಗಳು ಪರದಾಡಿದರು.