ಬೆಂಗಳೂರು: ಮುಂಬೈನಲ್ಲಿ ರಾತ್ರಿ ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಬೈ ಏರ್ಪೋರ್ಟ್ ರನ್‌ವೇನಲ್ಲಿ ನೀರು ತುಂಬಿದೆ. ಈ ಹಿನ್ನೆಲೆಯಲ್ಲಿ ಮುಂಬೈನಿಂದ ಕೆಲವು ವಿಮಾನಗಳು ಕೆಐಎಎಲ್ಗೆ ಡೈವರ್ಟ್ ಮಾಡಲಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ.
ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾನಗಳನ್ನು ಮಾತ್ರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ. ಇನ್ನೂ ಕಡಿಮೆ ಪ್ರಯಾಣಿಕರನ್ನು ಸಾಗಿಸುವ ವಿಮಾನಗಳನ್ನು ಮುಂಬೈ ಹತ್ತಿರದ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ.