ಬೆಂಗಳೂರು: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಫೆಬ್ರವರಿ 6 ರಂದು ಮಂಗಳೂರಿನಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ಕರೆತರಲಾಗಿದ್ದ 40 ದಿನಗಳ ಮಗು ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಮಾಡಲಾಗಿದೆ.
ಡಾ. ಜಯಂತ್ ಕುಮಾರ್, ಡಾ. ಆನಂದ್, ಡಾ. ಜಯಂತ್ ಸೇರಿದಂತೆ ಒಟ್ಟು 12 ವೈದ್ಯರ ತಂಡ ಮಗುವಿಗೆ ಸುಮಾರು 8 ಗಂಟೆಗಳ ಕಾಲ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದು ಮರು ಜೀವ ನೀಡಿದ್ದಾರೆ.
ಹೆಚ್ಚಿನ ಓದಿಗಾಗಿ: 40 ದಿನದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ: ಜೀರೊ ಟ್ರಾಫಿಕ್ ಮೂಲಕ ಆಸ್ಪತ್ರೆ ತಲುಪಿದ ಮಗು
ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಮಾತಾನಾಡಿ, ಫೆಬ್ರವರಿ 6ರಂದು 40 ದಿನದ ಮಗುವನ್ನ ಕರೆದುಕೊಂಡು ಬರಲಾಗಿತ್ತು. 7ನೇ ತಾರೀಖು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಗುವಿಗೆ ಓಪನ್ ಹಾರ್ಟ್ ಸರ್ಜರಿ ಮಾಡುವುದೆಂದರೆ ಸವಾಲಿನ ಕೆಲಸವಾಗಿತ್ತು. ಇದನ್ನ ಯಶಸ್ವಿಯಾಗಿ ನಮ್ಮ ವೈದ್ಯರ ತಂಡ ಮಾಡಿದೆ.. ಚಿಕಿತ್ಸೆಗೆ 1,50,000 ಖರ್ಚಾಗಿದೆ. ಇದರಲ್ಲಿ ಬಿಪಿಎಲ್ ಕ್ಯಾಟಗರಿ ಇಂದ 1,20,000 ಸಿಕ್ಕಿದೆ. ಉಳಿದ ಹಣವನ್ನು ಜಯದೇವ ಆಸ್ಪತ್ರೆಯ ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದೆ ಎಂದು ಮಾಹಿತಿ ನೀಡಿದರು.