ETV Bharat / state

ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕ ವಾತಾವರಣ: ಸಿಎಂ ಬಿಎಸ್​ವೈ

author img

By

Published : Dec 18, 2019, 2:42 PM IST

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪ್ರವಾಸೋದ್ಯಮ ನೀತಿ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಬಿಎಸ್​ವೈ, ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವುದಾಗಿ ಭರವಸೆ ನೀಡಿದರು.

cm yadiyurappa
ಬಿಎಸ್​ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

'ಕರ್ನಾಟಕ ಪ್ರವಾಸೋದ್ಯಮ ನೀತಿ 2020-25' ಬಗ್ಗೆ ಎರಡು ದಿನಗಳ ಕಾರ್ಯಾಗಾರ ಉದ್ಫಾಟಿಸಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರವಾಸೋದ್ಯಮ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಈಗಾಗಲೇ 144 ಕಾಮಗಾರಿಗಳಿಗೆ 105 ಕೋಟಿ ರೂ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಫುಲ ಅವಕಾಶವಿದ್ದು ಶೇ.14ರಷ್ಟು ಇರುವ ಆರ್ಥಿಕ ವೃದ್ಧಿ ದರವನ್ನು ಹೆಚ್ಚಿಸಲು ಅವಕಾಶವಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಪ್ರವಾಸೋದ್ಯಮ ಕಾರ್ಯಪಡೆ ಅಧ್ಯಕ್ಷೆ ಸುಧಾಮೂರ್ತಿ ಇದ್ದರು.

Intro:

ಬೆಂಗಳೂರು:ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಗೆ ನಮ್ಮ ಸರ್ಕಾರ ಬದ್ದವಾಗಿದೆ,
ಆರು ಏಳು ತಿಂಗಳಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಬರಲಿದೆ ಎಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕರ್ನಾಟಕ  ಪ್ರವಾಸೋದ್ಯಮ ನೀತಿ 2020-25 ಎರಡು ದಿನಗಳ ಕಾರ್ಯಾಗಾರ ಉದ್ಫಾಟಿಸಿ ಮಾತನಾಡಿದ ಸಿಎಂ,
ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರವಾಸೋದ್ಯಮ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಆಧ್ಯತೆ ನೀಡಿದ್ದು 144 ಕಾಮಗಾರಿಗಳಿಗೆ 105 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿದೆ.ಹೊಸ ಪ್ರವಾಸೋದ್ಯಮ ನೀತಿ ರಚಿಸಲಾಗುತ್ತಿದೆ,
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದ್ದು ಶೇ.14 ರಷ್ಟು ಇರುವ ಜಿಡಿಪಿ ದರವನ್ನು ಹೆಚ್ಚಿಸಲು ಅವಕಾಶವಿದೆ.ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪ್ರವಾಸೋದ್ಯಮ‌ಸಚಿವ ಸಿ.ಟಿ ರವಿ ಮಾತನಾಡಿ, ಪ್ರವಾಸೀ ತಾಣಗಳ ಶ್ರೀಮಂತ ರಾಜ್ಯವಾದರೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರೀಕ್ಷಿತ ಗುರಿ ಸಾಧಿಸಿಲ್ಲ, ಹಾಗಾಗಿ ಪ್ರವಾಸೋದ್ಯಮ ವಲಯಕ್ಕೆ ಪ್ರತ್ಯೇಕ ನೀತಿ ಜಾರಿಗೆ ತಂದು ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ ಅದಕ್ಕಾಗಿ ಪ್ವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರ ಎಲ್ಲರ ಸಲಹೆ ಪಡೆದು ಉತ್ತಮ ನೀತಿ ರಚಿಸುತ್ತೇವೆ ಎಂದರು.

ಸ್ವಾತಂತ್ರ್ಯಾ ನಂತರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಾವು ಏನೂ ಮಾಡಿಲ್ಲ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಿ ಹೊಸ ನೀತಿ ತರಲು ಹೊರಟಿದ್ದೇವೆ,ಏನು ಮಾಡಲು ಸಾಧ್ಯವೋ ಅದನ್ನೇ ಪಾಲಿಸಿ ಮಾಡುತ್ತೇವೆ, ಪಾಲಿಸಿ ಮಾಡಿದ್ದನ್ನು ಅನುಷ್ಟಾನ ಮಾಡುತ್ತೇವೆ ಎಂದರು.

ಪ್ರಕೃತಿ ಕೊಡುಗೆ, ಪೂರ್ವಿಕರ ಕೊಡುಗೆ ಪ್ರಮೋಟ್ ಮಾಡುವುದು, ಯುವ ಪೀಳಿಗೆ ನಿರೀಕ್ಷೆ ಏನು ಎಂದು ಅರ್ಥೈಸಿಕೊಂಡು ಹೊಸ ನೀತಿ ರೂಪಿಸಲಿದ್ದೇವೆ.ಈ ಸಂಬಂಧ ಹಿಂದಿನ‌ ಸಚಿವರಾದ ಮಲ್ಲಿಕಾರ್ಜುನ ಖರ್ಗೆ,ದೇಶಪಾಂಡೆ, ಸಾ.ರಾ.ಮಹೇಶ್ ಜೊತೆಯೂ ಮಾತುಕತೆ ನಡೆಸುತ್ತೇನೆ, ಮೋಹನ್ ದಾಸ್ ಪೈ ನೇತೃತ್ವದ ವಿಜನ್ ಗ್ರೂಪ್ ವರದಿಯ ಒಳ್ಳೆಯ ಅಂಶಗಳನ್ನೂ ತೆಗೆದುಕೊಳ್ಳಲಿದ್ದೇವೆ ಒಟ್ಟಾರೆಯಾಗಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪ್ರವಾಸೋದ್ಯಮ ಕಾರ್ಯಪಡೆ ಅಧ್ಯಕ್ಷೆ ಸುಧಾ ಮೂರ್ತಿ ಮಾತನಾಡಿ, ಹೇಳಿಕೆ ವಾಸ್ತವಯುತ ನೀತಿ ಮಾಡಬೇಕು ಅದಕ್ಕಾಗಿ ಫೀಡ್ ಬ್ಯಾಕ್ ಅಗತ್ಯವಿದೆ, ಪ್ರವಾಸ ಆಯೋಜನೆ ಮಾಡುವವರಿಗೆ ಎಲ್ಲಾ ಮಾಹಿತಿ ಇರಲಿದೆ ಹಾಗಾಗಿ ಅವರಿಂದ ಮಾಹಿತಿ ಸಂಗ್ರಹಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ಬೇಕಾದಷ್ಟು ಪ್ರವಾಸೀ ತಾಣಗಳಿವೆ, ಆದರೆ ಸಂಕಷ್ಟ ಸಮಸ್ಯೆ ಇವೆ ಅದನ್ನ ಪರಿಹರಿಸುವ ನಿಟ್ಟಿನಲ್ಲಿ ನೀತಿ ರಚಿಸಲಾಗುತ್ತದೆ ಎಂದರು.

 Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.