ETV Bharat / state

ವೈದ್ಯರ ಸಂಬಳ ಹೆಚ್ಚಿಸುವ ಬಗ್ಗೆ ಸಿಎಂ ಜೊತೆ ಚರ್ಚೆ: ಸಚಿವ ಶ್ರೀರಾಮುಲು ಆಶ್ವಾಸನೆ - ಸಚಿವ ಶ್ರೀರಾಮುಲು ಲೇಟೆಸ್ಟ್​ ನ್ಯೂಸ್​

ಯಾವುದೇ ಕಾರಣಕ್ಕೂ ವೈದ್ಯರು ಮುಷ್ಕರ ಮಾಡಬಾರದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.

Minister Sriramulu
ಸಚಿವ ಶ್ರೀರಾಮುಲು
author img

By

Published : Sep 15, 2020, 12:34 PM IST

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಎಲ್ಲಾ ವೈದ್ಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಮುಷ್ಕರಕ್ಕೆ ಹೋದರೆ ಜನರಿಗೆ ಸಮಸ್ಯೆ ಆಗುತ್ತದೆ. ಹಾಗಾಗಿ ವೈದ್ಯರು ಮುಷ್ಕರ ಕೈ ಬಿಡಬೇಕೆಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ವೈದ್ಯರ ಸಂಘದ ಅಧ್ಯಕ್ಷರ ಜೊತೆ ಮಾತಾಡಿದ್ದೇನೆ. ಸಂಬಳ ಹೆಚ್ಚು ಮಾಡಬೇಕೆಂಬ ಪ್ರಮುಖ ಬೇಡಿಕೆ ಇದೆ. ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ಇದನ್ನು ತಂದಿದ್ದೇನೆ ಎಂದರು. ಇಂದು ಮಧ್ಯಾಹ್ನ 3 ಗಂಟೆಗೆ ಸಂಘದ ಪ್ರಮುಖರ ಜೊತೆ ಸಭೆ ಮಾಡುತ್ತೇನೆ. ವೈದ್ಯರ ಎಲ್ಲಾ ಬೇಡಿಕೆ ಸರ್ಕಾರ ಈಡೇರಿಸುತ್ತದೆ ಎಂದರು.

ಸಂಬಳ ಹೆಚ್ಚಳ ಮಾಡುವ ವಿಚಾರ ಇಂದು ಸಂಘದ ಸದಸ್ಯರ ಜೊತೆ ಸಭೆ ಮಾಡಿ ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ವೈದ್ಯರು ಮುಷ್ಕರ ಮಾಡಬಾರದು ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.