ಬೆಂಗಳೂರು: ಯುಕೆ ಯಿಂದ ರಾಜ್ಯಕ್ಕೆ ಬಂದಿರುವ 211 ಜನರ ಲಿಸ್ಟ್ ಅನ್ನು ಆರೋಗ್ಯ ಇಲಾಖೆಯು ಬಿಬಿಎಂಪಿಗೆ ನೀಡಿದ್ದು, ಇದರಲ್ಲಿ ಬಹುತೇಕ ಮಂದಿಯ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಬಿಬಿಎಂಪಿ ಅಧಿಕಾರಿಗಳು ಪರೀಕ್ಷೆಗೆ ಕಳಿಸಿದ್ದಾರೆ.
ಬಿಬಿಎಂಪಿ ಪೂರ್ವ, ಮಹಾದೇವಪುರ, ಬೊಮ್ಮನಹಳ್ಳಿಯಲ್ಲೇ ಅತೀ ಹೆಚ್ಚು ಮಂದಿ ಯುಕೆಯಿಂದ ವಾಪಸ್ ಆಗಿದ್ದಾರೆ. ಯಾವ್ಯಾವ ವಲಯದಲ್ಲಿ ಎಷ್ಟು ಮಂದಿ ಆಗಮಿಸಿದ್ದಾರೆ ಎಂಬುದರ ವಿವರ ಈ ಕೆಳಗಿನಂತಿದೆ.
ಯುಕೆಯಿಂದ ಬಂದಿರುವವರ ವಲಯವಾರು ವಿವರ:
- ಬಿಬಿಎಂಪಿ ಪೂರ್ವ ವಲಯ - 48 ಜನ
- ಬಿಬಿಎಂಪಿ ಪಶ್ಚಿಮ ವಲಯ - 27 ಜನ
- ಬಿಬಿಎಂಪಿ ದಕ್ಷಿಣ ವಲಯ - 29 ಜನ
- ಬೊಮ್ಮನಹಳ್ಳಿ ವಲಯ - 38 ಜನ
- ಆರ್ ಆರ್ ನಗರ ವಲಯ - 13 ಜನ
- ದಾಸರಹಳ್ಳಿ ವಲಯ - ಇಬ್ಬರು
- ಮಹಾದೇವಪುರ ವಲಯ - 42 ಮಂದಿ
- ಯಲಹಂಕ ವಲಯ - 14 ಮಂದಿ