ETV Bharat / state

ಕೊರೊನಾ ರೂಪಾಂತರಿ AY 4.2 ಕುರಿತು ಟಾಸ್ಕ್ ಫೋರ್ಸ್ ಟೀಂ ಸಲಹೆ ಬಂದರೆ ನಿರ್ಬಂಧ ಹೇರಿಕೆ: ಆಯುಕ್ತ ರಂದೀಪ್

ರಾಜ್ಯದಲ್ಲಿ AY 4.2 ಪ್ರಕರಣಗಳು ಹೆಚ್ಚಳ‌ ಕಂಡರೆ ಮಾತ್ರ ಐಸೋಲೇಷನ್, ಟೆಸ್ಟಿಂಗ್, ಕಂಟೈನ್ಮೆಂಟ್ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ. ಆದರೆ, ಸದ್ಯಕ್ಕೆ ಕೋವಿಡ್ ಪ್ರಕರಣಗಳು ಕಮ್ಮಿ ಇದ್ದು, ರೇಟ್ ಆಫ್ infection ಕೂಡ ಕಡಿಮೆ ಇರುವ ಕಾರಣ ಯಥಾ ಸ್ಥಿತಿ ನಿಯಮಗಳ ಪಾಲನೆ ಮಾಡಲಾಗುತ್ತದೆ ಅಂತ ಆಯುಕ್ತ ರಂದೀಪ್ ಹೇಳಿದರು.

ಆರೋಗ್ಯ ಇಲಾಖೆ ಆಯುಕ್ತ ರಂದೀಪ್
ಆರೋಗ್ಯ ಇಲಾಖೆ ಆಯುಕ್ತ ರಂದೀಪ್
author img

By

Published : Oct 26, 2021, 3:13 PM IST

Updated : Oct 26, 2021, 3:42 PM IST

ಬೆಂಗಳೂರು: ಕೊರೊನಾ ಸೋಂಕು ತೀವ್ರತೆ ಕಡಿಮೆ ಆಯ್ತು ಅಂತ ನಿಟ್ಟುಸಿರುವ ಬಿಡುವ ವೇಳೆಗೆ ಇದೀಗ, ರೂಪಾಂತರಿ ಕಾಟ ಶುರುವಾಗಿದೆ. ಯುಕೆ, ರಷ್ಯಾ, ಇಸ್ರೆಲ್ ದೇಶಗಳಲ್ಲಿ AY.4.2 ರೂಪಾಂತರಿ ವೈರಸ್ ಹೆಚ್ಚು ಪತ್ತೆಯಾಗಿದೆ.

ಈ ಸೋಂಕು ನಮ್ಮ ರಾಜ್ಯದಲ್ಲಿ ಮೂರನೇ ಅಲೆಗೆ ಕಾರಣವಾಗುತ್ತಾ ಅನ್ನೋ ಭೀತಿ ಇದ್ದೇ ಇದೆ. ಯಾಕೆಂದರೆ ಆರೋಗ್ಯ ಇಲಾಖೆ ಕಳೆದ ಜೂನ್ ನಲ್ಲಿ ನಡೆಸಿರುವ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ AY 4.2 ಸೋಂಕು ಪತ್ತೆಯಾಗಿರುವುದು ಸದ್ಯಕ್ಕೆ ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆ ಆಯುಕ್ತ ರಂದೀಪ್

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, AY 4.2 ಸೋಂಕು ಕುರಿತು ಟೆಕ್ನಿಕಲ್ ಅಡ್ವೈಸರಿ ಕಮಿಟಿ ಸಾಕಷ್ಟು ಸುದೀರ್ಘವಾಗಿ ಚರ್ಚಿಸಿದೆ. ಸೋಂಕಿತರ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಯುಕೆ , ರಷ್ಯಾ, ಇಸ್ರೆಲ್ ದೇಶಗಳಲ್ಲಿ ಈ ರೂಪಾಂತರಿತ ವೈರಸ್ ಹೆಚ್ಚು ಪತ್ತೆಯಾಗಿದ್ದು, ರೇಟ್ ಆಫ್ ಸ್ಪ್ರೆಡ್ ಹೆಚ್ಚಿದೆ.

ಆದರೆ, ಇದು ನಮ್ಮ ದೇಶಕ್ಕೆ ಮತ್ತು ಕರ್ನಾಟಕ ಮುಖ್ಯವಾಗಿ ಬೆಂಗಳೂರಿನಲ್ಲಿ ಹರಡುವಿಕೆ ಪ್ರಮಾಣ ‌ಕಮ್ಮಿ ಇದೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಎರಡನೇ ಅಲೆಯಲ್ಲಿ ಡೆಲ್ಟಾ ವೈರಸ್ ಆರ್ಭಟ ಹೆಚ್ಚಿತ್ತು. ಸದ್ಯಕ್ಕೆ ರಾಜ್ಯಕ್ಕೆ AY 4.1 ಆತಂಕ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.‌‌

ವೆರಿಯೆಂಟ್ ಅಂಡರ್ ಇನ್ವೆಸ್ಟಿಗೇಷನ್ :

ಇನ್ನು ವೆರಿಯೆಂಟ್ ಅಂಡರ್ ಇನ್ವೆಸ್ಟಿಗೇಷನ್​​ನಲ್ಲಿ ಇದ್ದು, ಇದಕ್ಕೆ ಮತ್ತಷ್ಟು ತನಿಖೆ ನಡೆಯಬೇಕಿದೆ. ಗ್ರೌಂಡ್ ಲೆವೆಲ್ ಎವಿಡೆನ್ಸ್ ಪ್ರಕಾರ ಡೆಲ್ಟಾ ಗಿಂತ ವೇಗವಾಗಿ ಈ ರೂಪಾಂತರಿ ಹರಡಬಹುದಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಯಾಕೆಂದರೆ ಕಂಟೇನ್ಮೆಂಟ್ ಝೋನ್ ಗಳಲ್ಲೂ ಈ ವೇರಿಯೆಂಟ್ ಪತ್ತೆಯಾಗಿಲ್ಲ. AY 4.2 ನಿಂದ ಮೂರನೇ ಅಲೆ ಬರುತ್ತದೆ ಎಂಬುದು ಖಚಿತತೆ ಇಲ್ಲ ಅಂತ ವಿವರಿಸಿದರು.

ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್ ಹೆಚ್ಚಳ :

ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಯಥಾ ಪ್ರಕಾರ ನಡೆಯುತ್ತಿದೆ. ಸದ್ಯಕ್ಕೆ ಶೇಕಡಾ 10 ರಷ್ಟು ಜಿನೋಮಿಕ್ ಸೀಕ್ವೆನ್ಸ್ ನಡೆಯುತ್ತಿದ್ದು, ತಜ್ಞರ ಸಲಹೆ ಮೇರೆಗೆ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಲಾಗುವುದು. ಒಂದು ವೇಳೆ, AY 4.2 ಪ್ರಕರಣಗಳು ಹೆಚ್ಚಳವಾದರೆ ಮಾತ್ರ ಕಠಿಣ ಕ್ರಮ ಜಾರಿ ಮಾಡಲಾಗುತ್ತೆ.

ರಾಜ್ಯದಲ್ಲಿ AY 4.2 ಪ್ರಕರಣಗಳು ಹೆಚ್ಚಳ‌ ಕಂಡರೆ ಮಾತ್ರ ಐಸೋಲೇಷನ್, ಟೆಸ್ಟಿಂಗ್, ಕಂಟೇನ್ಮೆಂಟ್ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ. ಆದರೆ, ಸದ್ಯಕ್ಕೆ ಕೋವಿಡ್ ಪ್ರಕರಣಗಳು ಕಮ್ಮಿ ಇದ್ದು, ರೇಟ್ ಆಫ್ infection ಕೂಡ ಕಡಿಮೆ ಇರುವ ಕಾರಣ ಯಥಾ ಸ್ಥಿತಿ ನಿಯಮಗಳ ಪಾಲನೆ ಮಾಡಲಾಗುತ್ತದೆ ಅಂತ ಆಯುಕ್ತ ರಂದೀಪ್ ಹೇಳಿದರು.

AY 4.2 ಚೈನ್ ಲಿಂಕ್ ಇಲ್ಲ :

ಇನ್ನೂ ಬೆಂಗಳೂರಿನಲ್ಲಿ ಒಟ್ಟು 3 AY 4.2 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ ನಂದಿನಿ ಲೇಔಟ್​​​​ನಲ್ಲಿ 2 ಪ್ರಕರಣಗಳು ಪತ್ತೆಯಾಗಿದೆ. ಸೋಂಕಿಗೆ ತುತ್ತಾದವರು ಈಗಾಗಲೇ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ. ಇವರ ಸಂಪರ್ಕದಲ್ಲಿದ್ದವರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ಚೈನ್ ಲಿಂಕ್ ಕೂಡ ಪತ್ತೆಯಾಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ : ಕೋವಿಡ್ ದಿಢೀರ್‌ ಹೆಚ್ಚಳ: ಚೀನಾದ ಎರಡು ನಗರಗಳು ಲಾಕ್‌ಡೌನ್

ರಾಜ್ಯದಲ್ಲಿ ಸೋಂಕಿನ ತೀವ್ರತೆ ಅಂಡರ್ ಕಂಟ್ರೋಲ್ ಇದ್ದು, ಯಾವುದೇ ಭಯ ಬೇಡ. AY 4.2 ರೂಪಾಂತರಿ ಬಗ್ಗೆ ಟಾಸ್ಕ್ ಫೋರ್ಸ್ ಕಮಿಟಿ ಕೂಡ ಆತಂಕ ಬೇಡ ಎಂದಿದ್ದಾರೆ. ರಷ್ಯಾ, ಬ್ರಿಟನ್ ನಲ್ಲಿ ಎರಡನೇ ಅಲೆಯಲ್ಲಿ ಡೆಲ್ಟಾ ವೈರಸ್ ಕಂಡು ಬಂದಿಲ್ಲ, ಹೀಗಾಗಿ ಈ ಹೊಸ ಪ್ರಭೇದ ಹೆಚ್ಚು ಸ್ಪ್ರೆಡ್ ಆಗುತ್ತಿದೆ. ಆದರೆ, ಡೆಲ್ಟಾ ದಿಂದ ರೂಪಾಂತರಿ ಆಗಿ ತಳಿ ಹುಟ್ಟಿದರೆ ಆಗ ಮೂರನೇ ಅಲೆ ಸಾಧ್ಯತೆ ಇದೆ ಎಂಬುದು ಟಾಸ್ಕ್ ಫೋರ್ಸ್ ಟೀಂ ಎಚ್ಚರಿಕೆ ಕೊಟ್ಟಿದೆ. ಈ ಕುರಿತು ತೀವ್ರ ನಿಗಾ ವಹಿಸಲು ನಿರ್ಧರಿಸಿದ್ದೇವೆ ಅಂದರು.

ಒಂದು ವೇಳೆ, ಟಾಸ್ಕ್ ಫೋರ್ಸ್ ಟೀಂ ತಜ್ಞರು ಎಚ್ಚರಿಕೆಯ ಸಲಹೆ ನೀಡಿದರೆ ಅದರ ಮೇರೆಗೆ ನಿರ್ಬಂಧ ಹೇರಲಾಗುತ್ತದೆ. ಸದ್ಯಕ್ಕೆ AY 4.2 ವೈರಸ್ ಬಗ್ಗೆ ಯಾವುದೇ ಸೂಚನೆಗಳು ಬಂದಿಲ್ಲ ಹೀಗಾಗಿ ಯಥಾಸ್ಥಿತಿ ನಿಯಮ ಮುಂದುವರೆಯಲಿದೆ ಎಂದರು.‌

Last Updated : Oct 26, 2021, 3:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.