ಬೆಂಗಳೂರು: ಹೈದರಾಬಾದ್ನಲ್ಲಿ ನಡೆದ ಬಿಆರ್ಎಸ್ (ಭಾರತ್ ರಾಷ್ಟ್ರ ಸಮಿತಿ ) ಪಕ್ಷದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರಿಗೆ ಶುಭ ಹಾರೈಸಿದರು. ಈ ಕುರಿತು ಟ್ವೀಟ್ ನಲ್ಲಿ ಹೆಚ್ ಡಿಕೆ, ತೆಲಂಗಾಣದ ಟಿಆರ್ಎಸ್ ಪಕ್ಷವು 'ಬಿಆರ್ಎಸ್' ಹೆಸರಿನಲ್ಲಿ ರಾಷ್ಟ್ರೀಯ ಪಕ್ಷವಾದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದೆ ಎಂದು ಹೇಳಿದರು.
ಭಾರತದ ರಾಜಕಾರಣದಲ್ಲಿ ಬಿಆರ್ಎಸ್ ಆರಂಭ ಮಹೋನ್ನತ ಮೈಲಿಗಲ್ಲು. ಶೋಷಿತರ, ದಮನಿತರ, ಕೃಷಿ ಕಾರ್ಮಿಕರ ದನಿಯಾಗಿ ಈ ಪಕ್ಷ ಕೆಲಸ ಮಾಡಲಿದೆ. ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪರಿಪೂರ್ಣ ಸಹಕಾರ ನೀಡುವುದಾಗಿ ಘೋಷಣೆ ಮಾಡಿದ ಕೆಸಿಆರ್ ಅವರಿಗೆ ನಾನು ಆಭಾರಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕರ್ನಾಟಕದಲ್ಲಿ ಬಿಆರ್ಎಸ್ ಸ್ಪರ್ಧೆ, ಕುಮಾರಸ್ವಾಮಿ ಸಿಎಂ ಆಗಬೇಕು: ಕೆಸಿಆರ್