ETV Bharat / state

ತಿರುಪತಿ ವಸತಿ ಸಮುಚ್ಛಯ ನಿರ್ಮಾಣ ಯೋಜನೆ ನಿಲ್ಲಿಸಿ: ಹೆಚ್​​ಡಿಕೆ ಆಗ್ರಹ - ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪ

ಕೇವಲ 26 ಕೋಟಿ ರೂ. ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ ವೆಚ್ಚ, ಬಿಜೆಪಿ ಸರ್ಕಾರದಲ್ಲಿ ಒಂದೇ ವರ್ಷದಲ್ಲಿ 200 ಕೋಟಿ ರೂ.ಗೆ ಏರಿಕೆಯಾಗಿದೆ. ಕೋವಿಡ್​ ಸಂದರ್ಭದಲ್ಲಿ ಸರ್ಕಾರ ಯೋಜನೆಯ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

HDK urges stop of Tirupati housing Project
ತಿರುಪತಿ ವಸತಿ ಸಮುಚ್ಛಯ ನಿರ್ಮಾಣ ಯೋಜನೆ ನಿಲ್ಲಿಸಲು ಹೆಚ್​​ಡಿಕೆ ಆಗ್ರಹ
author img

By

Published : Jul 12, 2020, 3:15 PM IST

ಬೆಂಗಳೂರು : ತಿರುಪತಿ ವಸತಿ ಸಮುಚ್ಚಯ ಯೋಜನೆಯನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, "ನಾನು ಸಿಎಂ ಆಗಿದ್ದಾಗ ಕೇವಲ 26 ಕೋಟಿ ರೂ. ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ, ಬಿಜೆಪಿ ಸರ್ಕಾರದಲ್ಲಿ ಒಂದೇ ವರ್ಷದಲ್ಲಿ 200 ಕೋಟಿ ರೂ.ಗೆ ಏರಿಕೆಯಾಗಿದೆ. ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ. ಆದರೆ ಕೋವಿಡ್ ಕಾಲದ ಈ ಲೂಟಿಗಲ್ಲ. ಸರ್ಕಾರ ಕೂಡಲೇ ಈ ಯೋಜನೆಯನ್ನು ನಿಲ್ಲಿಸಲಿ" ಎಂದು ಆಗ್ರಹಿಸಿದ್ದಾರೆ.

  • ನಾನು ಸಿಎಂ ಆಗಿದ್ದಾಗ ಕೇವಲ ₹26 ಕೋಟಿ ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ,@BSYBJP ಸರ್ಕಾರದಲ್ಲಿ, ಒಂದೇ ವರ್ಷದಲ್ಲಿ 200 ಕೋಟಿಗೆ ಏರಿಕೆಯಾಗಿದೆ. ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ. ಆದರೆ ಕೋವಿಡ್ ಕಾಲದ ಈ ಲೂಟಿಗಲ್ಲ. ಸರ್ಕಾರ ಕೂಡಲೇ ಈ ಯೋಜನೆಯನ್ನು ನಿಲ್ಲಿಸಲಿ.
    1/2https://t.co/uKXO6Fqvvg

    — H D Kumaraswamy (@hd_kumaraswamy) July 12, 2020 " class="align-text-top noRightClick twitterSection" data=" ">

ಈ ಯೋಜನೆಗೆ ರಾಜ್ಯ ಸರ್ಕಾರ ಟಿಟಿಡಿಗೆ 200 ಕೋಟಿ ರೂ. ನೀಡುತ್ತಿದೆ. ವಿನ್ಯಾಸ, ವಾಸ್ತುಶಿಲ್ಪಕ್ಕಾಗಿ ಖಾಸಗಿ ಸಂಸ್ಥೆಗೆ ಯೋಜನೆಯ ಶೇ.5 (10 ಕೋಟಿ ) ನ್ನು ನೀಡಲಿದೆ. ಈ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯದ ಲೋಕೋಪಯೋಗಿ ಇಲಾಖೆ ಶಕ್ತವಲ್ಲವೇ. ವಿನ್ಯಾಸ ರೂಪಿಸಲು ಇಲಾಖೆಯಲ್ಲಿ ಯಾರೂ ಇಲ್ಲವೇ. ಕೋವಿಡ್‌ ಸಂಕಷ್ಟ ಕಾಲದಲ್ಲಿ ಈ ಯೋಜನೆಯ ಅಗತ್ಯವಾದರೂ ಏನು ಎಂದು ಕಿಡಿ ಕಾರಿದ್ದಾರೆ.

  • ಈ ಯೋಜನೆಗೆ ರಾಜ್ಯ ಸರ್ಕಾರ ಟಿಟಿಡಿಗೆ 200 ಕೋಟಿ, ವಿನ್ಯಾಸ, ವಾಸ್ತುಶಿಲ್ಪಕ್ಕಾಗಿ ಖಾಸಗಿ ಸಂಸ್ಥೆಗೆ ಯೋಜನೆಯ ಶೇ.5 (10 ಕೋಟಿ) ಅನ್ನು ನೀಡುತ್ತಿದೆ. ಈ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯದ ಲೋಕೋಪಯೋಗಿ ಇಲಾಖೆ ಶಕ್ತವಲ್ಲವೇ? ವಿನ್ಯಾಸ ರೂಪಿಸಲು ಇಲಾಖೆಯಲ್ಲಿ ಯಾರೂ ಇಲ್ಲವೇ? ಕೋವಿಡ್‌ ಸಂಕಷ್ಟ ಕಾಲದಲ್ಲಿ ಈ ಯೋಜನೆ ಅಗತ್ಯವಾದರೂ ಏನು?
    2/2

ETV Bharat Logo

Copyright © 2025 Ushodaya Enterprises Pvt. Ltd., All Rights Reserved.