ETV Bharat / state

ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ, ದಾಖಲೆ ಇಟ್ಟಿದ್ದಕ್ಕೆ ಈಗ ಜಾತಿ ಬಣ್ಣ ಕಟ್ಟಿದ್ದಾರೆ: ಕುಮಾರಸ್ವಾಮಿ - ಚೆಲುವರಾಯಸ್ವಾಮಿ ಹೇಳಿ

ಹೆಚ್​ಡಿಕೆ ಬಿಡುಗಡೆ ಮಾಡಿದ ರೇಟ್​ ಕಾರ್ಡ್​ ಅವರ ಅಧಿಕಾರಾವಧಿಯಲ್ಲಿ ಆಗಿತ್ತೇನೋ ಎಂದು ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದರು.

Former CM HD Kumaraswamy
ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ
author img

By

Published : Jul 13, 2023, 3:49 PM IST

ಬೆಂಗಳೂರು: ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರದ ದಾಖಲೆ ಇಟ್ಟಿದ್ದಕ್ಕೆ ಜಾತಿ ಬಣ್ಣ ಕಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಈ ಭ್ರಷ್ಟಾಚಾರ ನಿಲ್ಲಿಸುವ ಎದೆಗಾರಿಕೆ ಇದ್ದರೆ, ನಿಲ್ಲಿಸಿ ಅಂತ ಒಂದು ಉದಾಹರಣೆ ಹೇಳಿದೀನಿ ಅಷ್ಟೇ. ಅಧಿಕಾರಿಗಳಿಂದ ಮಾಹಿತಿ ಸೋರಿಕೆ ಆಗಿದೆ. ಅದಕ್ಕೇ ನಾನು ಸಚಿವರ, ಇಲಾಖೆ ಹೆಸರು ಹೇಳಲಿಲ್ಲ. ಇದನ್ನು ನಾನು ರೆಡಿ ಮಾಡಿಲ್ಲ. ವಾಸ್ತವಾಂಶ ಸದನದ ಮುಂದೆ ಇಟ್ಟಿದ್ದೇನೆ. ಭ್ರಷ್ಟಾಚಾರ ನಿಲ್ಲಿಸಬೇಕು ಅಂದ್ರೆ, ಧೈರ್ಯವಿದ್ರೆ ಕ್ರಮ ವಹಿಸಲಿ. ಈ ದರಪಟ್ಟಿ ಅವರೇ ಕೊಟ್ಟಿದ್ದ ಜಾಹೀರಾತಿನ ಮುಂದುವರೆದ ಭಾಗ ಇರಬಹುದು. ಈ ದರಪಟ್ಟಿ ಈಗ ಇವರ ಅವಧಿಯಲ್ಲೇ ಮಾಡಿರೋದು ಅಂತಿದ್ದಾರೆ‌ ಎಂದು ತಿಳಿಸಿದರು.

ನಾನು ಒಕ್ಕಲಿಗ ಸಮಾಜದಲ್ಲಿ ಯಾರನ್ನೂ ಬೆಳೆಯಲು ಅಡ್ಡಿ ಮಾಡಿಲ್ಲ. ನಾನು ಮಾಡಿರುವ ಆರೋಪದಲ್ಲಿ ಜಾತಿ ಪ್ರಶ್ನೆ ಇಲ್ಲ. ಅಧಿಕಾರಿಗಳನ್ನು ಹಣ ಪಡೆದು ವರ್ಗ ಮಾಡಿದ್ರೆ, ಆ ಅಧಿಕಾರಿಗಳು ಜನರು ಕೆಲಸ ಮಾಡ್ತಾರಾ..?. ಜಾತಿಯ ಹೆಸರಲ್ಲಿ ಅವರು ರಕ್ಷಣೆ ಪಡೆಯುತ್ತಿದ್ದಾರೆ. ನನಗೆ ಯಾರ ಮೇಲೂ ದ್ವೇಷ, ಅಸಮಾಧಾನ ಇಲ್ಲ. ಚೆಲುವರಾಯಸ್ವಾಮಿ ಅವರು ನಮ್ಮ ಪಕ್ಷ ಬಿಟ್ಟು ಹೋದ ನಂತರ ಅವರ ಬಗ್ಗೆ ಚರ್ಚೆನೇ ಮಾಡಿಲ್ಲ. ನಿನ್ನೆಯೂ ಅವರ ಹೆಸರು ಹೇಳಲಿಲ್ಲ ಎಂದರು.

ವರ್ಗಾವಣೆಯನ್ನು ಮಾರುಕಟ್ಟೆ ದಂಧೆ ಮಾಡಿದ್ದಾರೆ, ದರಪಟ್ಟಿ ಬಗ್ಗೆ ತನಿಖೆಯಾಗಬೇಕು- ಬಸವರಾಜ ಬೊಮ್ಮಾಯಿ: ವರ್ಗಾವಣೆಯನ್ನು ಮಾರುಕಟ್ಟೆ ದಂಧೆ ಮಾಡಿದ್ದಾರೆ. ದರ ಪಟ್ಟಿ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, HDK ರೇಟ್ ಕಾರ್ಡ್ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ರೇಟ್ ಕಾರ್ಡ್ ನೀಡಿದ್ದಾರೆ. ಅದರ ಪೂರ್ವದಲ್ಲೇ ನಾನು ಹೇಳಿದ್ದೆ. ವಿಧಾನಸೌಧಲ್ಲಿ, ಕೆ. ಕೆ. ಗೆಸ್ಟ್ ಹೌಸ್​ನಲ್ಲಿ ಜನಜಾತ್ರೆ ಇದೆ ಅಂತ. ಸದನದಲ್ಲಿ ವಿಷಯ ಎತ್ತಿ ಮಾತನಾಡುತ್ತೇವೆ. ಆ ದಾಖಲೆ ಬಗ್ಗೆ ಸರ್ಕಾರ ಕೂಡಲೇ ಉತ್ತರ ಕೊಡಬೇಕು. ಆ ದರ ಪಟ್ಟಿ ಸರಿ ಇದೆಯಾ, ಜಾಸ್ತಿ ಇದೆಯಾ?. ದರ ಪಟ್ಟಿ ಇದೆಯಾ, ಇಲ್ವಾ ಅಂತ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಅನ್ನ ಭಾಗ್ಯದಲ್ಲಿ ಕಡಿತ ಮಾಡಿದೆ: ಅನ್ನಭಾಗ್ಯದಲ್ಲಿ ಈ ತಿಂಗಳು ಕೇಂದ್ರ ಕೊಡುವ ಐದು ಕೆಜಿಯಲ್ಲಿ 2kg ಕಡಿತ ಮಾಡಿದೆ. ಈ ಬಗ್ಗೆ ಆದೇಶ ಕೂಡ ಹೊರಡಿಸಿದೆ. 3kg ಅಕ್ಕಿ 2 ಕೆಜಿ ಧಾನ್ಯ ಕೊಡಲು ಮುಂದಾಗಿದೆ. ಕೇಂದ್ರದ 5 ಕೆ ಜಿ ಅಕ್ಕಿ ಅಲ್ಲದೆ 10kg ಅಕ್ಕಿ ಕೊಡ್ತೀನಿ ಅಂದ್ರು. ಆದ್ರೆ ಕೇಂದ್ರ ಕೊಡುವ 5ರಲ್ಲಿ 3kg ಮಾತ್ರ ಕೊಡ್ತಿದ್ದಾರೆ ಎಂದು ಕಿಡಿಕಾರಿದರು. ಇದು ಬಡವರ ಹೊಟ್ಟೆ ಮೇಲೆ ಹೊಡೆದಂತೆ. ಇದನ್ನು ನಾವೂ ನಿರೀಕ್ಷೆ ಮಾಡಿರಲಿಲ್ಲ. ನಾವು ಕೊಡುವಾಗ ಕಡಿಮೆ ಆದಾಗ ಹಾರಾಡಿದ್ರು. ಇದು ಜನರಿಗೆ ಮಾಡಿರೋ ದೋಖಾ. ಗ್ಯಾರಂಟಿ ಬದಲು ದೋಖಾ ನಡೆದಿದೆ. ಸ್ಪಷ್ಟ ಉತ್ತರವನ್ನು ಸದನದಲ್ಲಿ ಕೊಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.

ಇದನ್ನೂ ಓದಿ: ಹೆಚ್​ಡಿಕೆ ಬಿಡುಗಡೆ ಮಾಡಿದ ರೇಟ್ ಕಾರ್ಡ್ ಅವರ ಅಧಿಕಾರಾವಧಿಯಲ್ಲಿ ಆಗಿತ್ತೇನೋ: ಸಚಿವ ಚೆಲುವರಾಯಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.