ETV Bharat / state

ಸರ್ಕಾರ ಪಾಪರ್ ಚಿಟ್ ಆಗಿದ್ದರೆ ಹೇಳಲಿ, ಬೋಧಕ ಸಿಬ್ಬಂದಿಗೆ ನಾನೇ ವೇತನ ನೀಡುವೆ: ಹೆಚ್.ಡಿ ರೇವಣ್ಣ - ಶಾಸಕ ಹೆಚ್​ಡಿ ರೇವಣ್ಣ

ನನ್ನ ಕ್ಷೇತ್ರದ ಶೈಕ್ಷಣಿಕ ಹಿತದೃಷ್ಟಿಯಿಂದ ಇದನ್ನು ಪ್ರತಿಭಟಿಸುವ ಸಲುವಾಗಿ ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣಾದ ಆವರಣದಲ್ಲಿ ಕೊರೊನಾ ನಿಯಮ ಪಾಲಿಸಿ ಏಕಾಂಗಿಯಾಗಿ ಧರಣಿ ನಡೆಸಲು ನಿರ್ಧರಿಸಿದ್ದೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೋರ್ಸ್​ಗಳನ್ನು ಕೇಳುತ್ತಿದ್ದೇನೆ, ನಾನೇನು ನನ್ನ ಕ್ಷೇತ್ರದ ಗುತ್ತಿಗೆ ಕಾಮಗಾರಿಗಳಿಗೆ ಬಂದಿಲ್ಲ, ನಮ್ಮ ಮಕ್ಕಳೇನು ಅಲ್ಲಿ ಓದಬೇಕಿಲ್ಲ, ಬಡ ಮಕ್ಕಳು ಓದುತ್ತಾರೆ ಅವರ ಅನುಕೂಲಕ್ಕೆ ಕೋರ್ಸ್ ಕೇಳುತ್ತಿದ್ದೇನೆ..

HD Revanna
ಹೆಚ್​ ಡಿ ರೇವಣ್ಣ
author img

By

Published : Jan 18, 2022, 7:50 PM IST

ಬೆಂಗಳೂರು : ಹೊಳೆನರಸೀಪುರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊಸದಾಗಿ ಎಂ.ಎಸ್ಸಿ ಸೈಕಾಲಜಿ ಮತ್ತು ಎಂಎಸ್ಸಿ ಫುಡ್ ಅಂಡ್​ ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸ್​ಗಳನ್ನು ಮಂಜೂರು ಮಾಡುವ ಬೇಡಿಕೆ ಈಡೇರಿಕೆ ಕುರಿತು ಶುಕ್ರವಾರ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಧರಣಿ ನಡೆಸುವುದನ್ನು ಮಾಜಿ ಸಚಿವ ಹೆಚ್.ಡಿ ರೇವಣ್ಣ ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ.

ಕೃಷ್ಣಾಗೆ ಆಗಮಿಸಿದ ರೇವಣ್ಣ ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿಗೆ 2022-23ನೇ ಶೈಕ್ಷಣಿಕ ಸಾಲಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊಸದಾಗಿ ಎಂ.ಎಸ್ಸಿ ಸೈಕಾಲಜಿ ಮತ್ತು ಎಂಎಸ್ಸಿ ಫುಡ್ ಅಂಡ್​ ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸಗಳನ್ನು ಮಂಜೂರು ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಉನ್ನತ ಶಿಕ್ಷಣ ಸಚಿವರಿಗೆ ಶಿಫಾರಸು ಮಾಡಿದ್ದರೂ ಸಹಾ ಉನ್ನತ ಶಿಕ್ಷಣ ಸಚಿವರು ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಧರಣಿಗೆ ಮುಂದಾಗಿದ್ದರು ರೇವಣ್ಣ.

ಈ ವೇಳೆ ಸಿಎಂ ಕಚೇರಿ ಸಿಬ್ಬಂದಿ ಧರಣಿಗೆ ಅವಕಾಶ ನೀಡದೆ ಕಚೇರಿಯೊಳಗೆ ಕರೆದೊಯ್ದು ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆಗೆ ವ್ಯವಸ್ಥೆ ಕಲ್ಪಿಸಿದರು. ನಂತರ ಶುಕ್ರವಾರ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಕುರಿತು ಸಿಎಂ ಭರವಸೆ ನೀಡಿದ್ದರಿಂದ ಇಂದು ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ರೇವಣ್ಣ ತಾತ್ಕಾಲಿಕವಾಗಿ ಕೈಬಿಟ್ಟರು.

ಈ ವೇಳೆ ಮಾತನಾಡಿದ ರೇವಣ್ಣ ಅವರು, ನನ್ನ ಕ್ಷೇತ್ರದ ಶೈಕ್ಷಣಿಕ ಹಿತದೃಷ್ಟಿಯಿಂದ ಇದನ್ನು ಪ್ರತಿಭಟಿಸುವ ಸಲುವಾಗಿ ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣಾದ ಆವರಣದಲ್ಲಿ ಕೊರೊನಾ ನಿಯಮ ಪಾಲಿಸಿ ಏಕಾಂಗಿಯಾಗಿ ಧರಣಿ ನಡೆಸಲು ನಿರ್ಧರಿಸಿದ್ದೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೋರ್ಸ್​ಗಳನ್ನು ಕೇಳುತ್ತಿದ್ದೇನೆ, ನಾನೇನು ನನ್ನ ಕ್ಷೇತ್ರದ ಗುತ್ತಿಗೆ ಕಾಮಗಾರಿಗಳಿಗೆ ಬಂದಿಲ್ಲ, ನಮ್ಮ ಮಕ್ಕಳೇನು ಅಲ್ಲಿ ಓದಬೇಕಿಲ್ಲ, ಬಡ ಮಕ್ಕಳು ಓದುತ್ತಾರೆ ಅವರ ಅನುಕೂಲಕ್ಕೆ ಕೋರ್ಸ್ ಕೇಳುತ್ತಿದ್ದೇನೆ ಎಂದರು.

ನಾನೇ ವೇತನ ನೀಡುತ್ತೇನೆ : ಸರ್ಕಾರದ ಬಳಿ ಹೊಸ ಕೋರ್ಸ್ ಆರಂಭಿಸಲು ಬೋಧಕ, ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲಾಗದ ಸ್ಥಿತಿ ಇದ್ದರೆ, ಸರ್ಕಾರವೇನಾದರೂ ಪಾಪರ್ ಚಿಟ್ ಆಗಿದ್ದರೆ ತಾತ್ಕಾಲಿಕವಾಗಿ ನಾನೇ ವೇತನ ನೀಡಲು ಸಿದ್ದನಿದ್ದೇನೆ, ನಮಗೆ ಎಂ.ಎಸ್ಸಿ ಸೈಕಾಲಜಿ ಮತ್ತು ಎಂ.ಎಸ್ಸಿ ಫುಡ್ ನ್ಯೂಟ್ರಿಷನ್ ಕೋರ್ಸ್ ಕೊಡಿ. ಮುಖ್ಯಮಂತ್ರಿಗಳ ಭರವಸೆ ಹಿನ್ನೆಲೆಯಲ್ಲಿ ಇಂದಿನ ಧರಣಿ ಕೈಬಿಟ್ಟಿದ್ದೇನೆ, ಸಿಎಂ ಸಮಯ ಕೇಳಿದಾಗ ಇಲ್ಲ‌ ಎನ್ನಲು ಸಾಧ್ಯವಿಲ್ಲ, ಒಂದು ವೇಳೆ ಬೇಡಿಕೆ ಈಡೇರಿಕೆಯಾಗದೇ ಇದ್ದಲ್ಲಿ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುತ್ತದೆ ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ ಟೆಸ್ಲಾ ಘಟಕ ಆರಂಭಿಸುವಂತೆ ಜಗತ್ತಿನ ನಂ.1 ಶ್ರೀಮಂತ ಉದ್ಯಮಿಗೆ ಆಹ್ವಾನ ; ಸಚಿವ ನಿರಾಣಿ ಟ್ವೀಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.