ETV Bharat / state

ಹಾಸನದ ರಾಜಕೀಯ ಎದುರಾಳಿಗಳು ಸಿಎಂ ಬೊಮ್ಮಾಯಿ ನಿವಾಸದಲ್ಲಿ ಮುಖಾಮುಖಿ

ರಾಜ್ಯಸಭೆ ಸದಸ್ಯ ಜಗ್ಗೇಶ್ ಆರ್.ಟಿ‌ ನಗರದಲ್ಲಿ ಸಿಎಂ ಖಾಸಗಿ ನಿವಾಸಕ್ಕೆ ಭೇಟಿ-ಬೊಮ್ಮಾಯಿ ಜೊತೆ ಕೆಲಕಾಲ ಮಾತುಕತೆ - ಹಾಸನ ಜಿಲ್ಲೆಯ ಶಾಸಕರಾದ ಪ್ರೀತಂ ಗೌಡ- ಹೆಚ್​ ಡಿ ರೇವಣ್ಣ ಮುಖಾಮುಖಿ

hd-revanna-and-preetam-gouda-visited-cm-bommai-house
ಸಿಎಂ ಬೊಮ್ಮಾಯಿ ನಿವಾಸದಲ್ಲಿ ಮುಖಾಮುಖಿಯಾದ ಹಾಸನ ವಾರಿಯರ್ಸ್
author img

By

Published : Jul 14, 2022, 2:08 PM IST

ಬೆಂಗಳೂರು: ಹಾಸನ ಜಿಲ್ಲೆಯ ರಾಜಕೀಯ ಎದುರಾಳಿ ಶಾಸಕರಾದ ಬಿಜೆಪಿಯ ಪ್ರೀತಂ ಗೌಡ ಹಾಗೂ ಜೆಡಿಎಸ್​​ನ ಹೆಚ್.ಡಿ ರೇವಣ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಮುಖಾಮುಖಿಯಾದರು. ಪರಸ್ಪರ ವಾಗ್ದಾಳಿ ನಡೆಸಿಕೊಂಡು ಬರುತ್ತಿರುವ ಉಭಯ ಶಾಸಕರು ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು.

ಆರ್‌ ಟಿ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಖಾಸಗಿ ನಿವಾಸದಲ್ಲಿ ಮೊದಲು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ ಪ್ರೀತಂಗೌಡ ಕ್ಷೇತ್ರದ ಯೋಜನೆಗಳ ಕುರಿತು ಚರ್ಚಿಸಿದರು. ಇದೇ ವೇಳೆ ಸಿಎಂ ಭೇಟಿಗೆ ಹೆಚ್.ಡಿ ರೇವಣ್ಣ ಆಗಮಿಸಿದರು. ಈ ಸಂದರ್ಭದಲ್ಲಿ ಶಾಸಕರಿಬ್ಬರೂ ಮುಖಾಮುಖಿಯಾದರು. ಆದರೆ ಸಿಎಂ ಜೊತೆ ಇಬ್ಬರೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು‌. ಹಾಸನದಲ್ಲಿ ಹೆಚ್.ಡಿ ರೇವಣ್ಣ ಮತ್ತು ಪ್ರೀತಂ ಗೌಡ ಇಬ್ಬರಿಗೂ ಹಲವು ವಿಚಾರಗಳಲ್ಲಿ ಜಿದ್ದಾಜಿದ್ದಿ ಇದ್ದು, ರಾಜಕೀಯ ವಿರೋಧಿಗಳಾಗಿದ್ದಾರೆ.

ಸಿಎಂ ನಿವಾಸಕ್ಕೆ ಜಗ್ಗೇಶ್ ಭೇಟಿ: ರಾಜ್ಯಸಭೆ ಸದಸ್ಯ ಜಗ್ಗೇಶ್ ಕೂಡ ಬೆಳಗ್ಗೆ ಆರ್.ಟಿ‌ ನಗರದ ನಿವಾಸದಲ್ಲಿನ ಸಿಎಂ ಖಾಸಗಿ ನಿವಾಸಕ್ಕೆ ಭೇಟಿ ನೀಡಿದ್ದರು. ಸಿಎಂ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ರಾಜ್ಯಕ್ಕೆ ಮರಳಿರುವ ಜಗ್ಗೇಶ್ ಮುಖ್ಯಮಂತ್ರಿಗಳ ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು.

ಸಿಎಂ ಭೇಟಿ ಮಾಡಿದ ರತ್ನಪ್ರಭಾ: ನಿಗಮ ಮಂಡಳಿಗಳ ನಾಮನಿರ್ದೇಶನ ರದ್ದು ಮಾಡಿ ಆದೇಶ ಹೊರಡಿಸಿದ ನಂತರ ರಾಜ್ಯ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕಳೆದುಕೊಂಡಿರುವ ಕೆ. ರತ್ನಪ್ರಭಾ ಇಂದು ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ತೆರಳಿದ್ದರು. ಕೆಲಕಾಲ ಮಾತುಕತೆ ನಡೆಸಿದರು. ರಾಜ್ಯ ಸರ್ಕಾರದ ಮುಖ್ಯ‌ಕಾರ್ಯದರ್ಶಿಯಾಗಿದ್ದ ಕೆ. ರತ್ನಪ್ರಭ ನಿವೃತ್ತಿ ನಂತರ ಬಿಜೆಪಿ ಸೇರಿ ಯಡಿಯೂರಪ್ಪ ಅವಧಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರಾಗಿ‌ ನೇಮಕಗೊಂಡಿದ್ದರು. ಆದರೆ ಈಗ ಆಪರೇಷನ್ ನಿಗಮ ಮಂಡಳಿ ವೇಳೆ ಅಧಿಕಾರ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಚೇಲಾ, ಚಮಚ, ಭ್ರಷ್ಟ, ಜುಮ್ಲಾಜೀವಿ..ಸಂಸತ್ತಿನಲ್ಲಿ ಇಂಥ ಪದಬಳಕೆಗೆ ಕಡಿವಾಣ: ಪಟ್ಟಿ ದೊಡ್ಡದಿದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.