ETV Bharat / state

ಸರ್ಕಾರದಿಂದ ಬೋಗಸ್ ಪ್ಯಾಕೇಜ್ ಘೋಷಣೆ: ಹೆಚ್.ಡಿ. ಕುಮಾರಸ್ವಾಮಿ ಟೀಕೆ

ಕೋವಿಡ್​ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

HD Kumaraswamy
HD Kumaraswamy
author img

By

Published : May 19, 2021, 3:07 PM IST

ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದಾಗಿ ಲಾಕ್​​ಡೌನ್​ ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್​ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ ಕೇವಲ ಜನರ ಕಣ್ಣೋರೆಸುವ ತಂತ್ರ, ಇದೊಂದು ಬೋಗಸ್ ಪ್ಯಾಕೇಜ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ವಿಶೇಷ ಪ್ಯಾಕೇಜ್​ ಬಗ್ಗೆ ಹೆಚ್​​ಡಿಕೆ ಟೀಕೆ

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಚ್​​ಡಿಕೆ, ಸರ್ಕಾರ ಜನರ ಜೀವನ ನಿರ್ವಹಣೆಗೂ ಸಾಲದಂತಹ ಪ್ಯಾಕೇಜ್ ನೀಡಿರುವುದು ಅವೈಜ್ಞಾನಿಕ ಹಾಗೂ ಬೋಗಸ್ ಪ್ಯಾಕೇಜ್. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನಿಜವಾದ ಪ್ಯಾಕೇಜ್​ ನೀಡಬೇಕಾಗಿತ್ತು. ಕಳೆದ ವರ್ಷ ಹೂವಿನ ಬೆಳಗಾರರಿಗೆ ಹೆಕ್ಟೇರ್​ಗೆ 25,000 ರೂ. ಘೋಷಣೆ ಮಾಡಲಾಗಿತ್ತು. ಈ ವರ್ಷ 10 ಸಾವಿರ ರೂ.ಗೆ ಇಳಿಸಿದ್ದಾರೆ. ಮಾವು, ಬಾಳೆ, ದ್ರಾಕ್ಷಿ, ಟೊಮೇಟೊ ಸೇರಿದಂತೆ ವಿವಿಧ ಬೆಳೆಗಾರರ ಪೂರ್ಣ ಮಾಹಿತಿಯನ್ನು ಸರ್ಕಾರ ಕಲೆಹಾಕಿ ವೈಜ್ಞಾನಿಕ ರೀತಿಯಲ್ಲಿ ಪ್ಯಾಕೇಜ್ ಘೋಷಿಸಬೇಕಿತ್ತು. ಗೊಬ್ಬರ, ಬಿತ್ತನೆ ಬೀಜದ ಬೆಲೆಯೂ ದುಬಾರಿಯಾಗಿದೆ.

ರೈತರು ಖರ್ಚು ಮಾಡಿರುವ ಶೇ. 25ರಷ್ಟು ನೀಡಿಲ್ಲ

ರೈತರು ಮಾಡಿರುವ ಖರ್ಚಿನ ಶೇ.25 ರಷ್ಟಾದರೂ ಕೊಡಬೇಕಿತ್ತು. ಆದರೆ, ಸರ್ಕಾರ ಇದರ ಬಗ್ಗೆ ಗಮನಹರಿಸಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಅರೆ ಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಸರ್ಕಾರ ಪ್ಯಾಕೇಜ್ ನೀಡುವ ನಾಟಕವಾಡಿದೆ ಎಂದು ವಾಗ್ದಾಳಿ ನಡೆಸಿದ ಹೆಚ್​ಡಿಕೆ, ಎಲ್ಲ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ನೀಡಬೇಕಿತ್ತು. ಇದಕ್ಕಾಗಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ನೀಡಿದ್ದರೆ ಸಾಕಾಗುತ್ತಿತ್ತು. ಜನರೇ ಮುಂದಿನ ದಿನಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಆ ಹಣವನ್ನು ತುಂಬಿಸುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ: ₹1,250 ಕೋಟಿ ವೆಚ್ಚದ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಬಿಎಸ್‌ವೈ.. ಅಸಂಘಟಿತ ಕಾರ್ಮಿಕರು, ರೈತರಿಗೆ ಸಿಕ್ಕಿದ್ದು,ದಕ್ಕಿದ್ದೆಷ್ಟು?

ಜೀವನ ನಿರ್ವಹಣೆ ಅಸಾಧ್ಯ

ಕೇವಲ ಎರಡು, ಮೂರು ಸಾವಿರ ರೂಪಾಯಿ ಪ್ಯಾಕೇಜ್ ನೀಡುವುದರಿಂದ ಜನರ ಜೀವನ ನಿರ್ವಹಣೆ ಸಾಧ್ಯವಿಲ್ಲ. ಬಡವರಿಗೆ ದುಡ್ಡು ಕೊಡಲು ಆರ್ಥಿಕ ಸಂಕಷ್ಟವೇ ಎಂದು ಪ್ರಶ್ನಿಸಿದರು. ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಸಂಕಷ್ಟದಲ್ಲಿರುವ ಜನರಿಗೆ ಕೊಡಲು ಕಷ್ಟ ಏನು ಎಂದು ಅವರು ಪ್ರಶ್ನಿಸಿದರು. ಐದು ಜನರಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ಮಾಹಿತಿ ಇದೆ‌. ಇಂತಹ ಸಂಕಷ್ಟದಲ್ಲಿ ಸುಮಾರು 5,000 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿ ಎಲ್ಲ ವರ್ಗದವರಿಗೂ ಪರಿಹಾರ ಕೊಡಬೇಕಿತ್ತು ಎಂದರು. ರಾಜ್ಯ ಸರ್ಕಾರದ ಈ ಪ್ಯಾಕೇಜ್​​ನಿಂದ ಯಾರಿಗೂ ಲಾಭವಿಲ್ಲ.

ಆಟೋ ಚಾಲಕರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಇಳಿಕೆಯಾಗಿದೆ. ಕೇವಲ ಮೂರು ಸಾವಿರ ರೂಪಾಯಿಯಲ್ಲಿ ಹೇಗೆ ಬದುಕು ಸಾಗಿಸುವುದು? ಯಾವ ರೀತಿ ಹಂಚಿಕೆ ಮಾಡುತ್ತಾರೆ? ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಲಾಗುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದಾರೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ಐದು ಕೆ.ಜಿ.ಅಕ್ಕಿ ಕೊಡುವುದಾಗಿ ಹೇಳುತ್ತಾರೆ‌‌. ಕಾರ್ಮಿಕ ವರ್ಗಕ್ಕೆ 494 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಸರ್ಕಾರದಿಂದ ನೀಡುವ ಹಣವಲ್ಲ. ಅವರ ಕ್ಷೇಮಾಭಿವೃದ್ಧಿ ನಿಧಿಯಲ್ಲಿಟ್ಟಿರುವ ಎಫ್​ಡಿ ಹಣವಾಗಿದೆ ಎಂದರು. ಜನರ ದುಡ್ಡನ್ನು ಜನರಿಗೇ ಕೊಡಲು ನಿಮಗೇನು ಕಷ್ಟ? ಬಡವರಿಗೆ ಸಹಾಧನ ಕೊಡಲು ಆರ್ಥಿಕ ಸಂಕಷ್ಟ ಇದೆಯೇ? ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.