ETV Bharat / state

ಅಧಿವೇಶನದ ನಂತರ 31 ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ.. ಬರ ಪರಿಸ್ಥಿತಿ ಅಧ್ಯಯನಕ್ಕೆ ತಂಡ ರಚನೆ : ಹೆಚ್​ಡಿಕೆ ಭರವಸೆ

ಜೆಡಿಎಸ್​​ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಡಿಸೆಂಬರ್​ನಲ್ಲಿ ಅಧಿವೇಶನ ಮುಗಿದ ನಂತರ 31 ಜಿಲ್ಲೆಯಲ್ಲಿ 'ರೈತ ಸಾಂತ್ವನ ಯಾತ್ರೆಗೆ' ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
author img

By ETV Bharat Karnataka Team

Published : Nov 4, 2023, 9:42 PM IST

Updated : Nov 4, 2023, 10:31 PM IST

ಸುದ್ದಿಗೋಷ್ಠಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು: ಡಿಸೆಂಬರ್​ನಲ್ಲಿ ನಡೆಯುವ ಅಧಿವೇಶನ ಮುಗಿದ ನಂತರ 31 ಜಿಲ್ಲೆಯಲ್ಲಿ 'ರೈತ ಸಾಂತ್ವನ ಯಾತ್ರೆಗೆ' ಚಾಲನೆ ನೀಡಲಾಗುವುದು ಎಂದು ಮಾಜಿ ಸಿಎಂ, ಜೆಡಿಎಸ್​​ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಜೆಡಿಎಸ್​​ ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ನಡೆದ ಬರ ಅಧ್ಯಯನ ತಂಡಗಳ ರಚನೆ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಧಿವೇಶನ ಮುಗಿದ ನಂತರ ಬಸ್ ವ್ಯವಸ್ಥೆ ಮಾಡಿ 20 ರಿಂದ 25 ಮಂದಿ ನಾಯಕರ ಜೊತೆ 31 ಜಿಲ್ಲೆಗಳಲ್ಲೂ ರೈತ ಸಾಂತ್ವನ ಯಾತ್ರೆ ಮಾಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. .

ರೈತ ಕುಟುಂಬ ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ನಾಡಿನ ಜನತೆಗೆ ಮನವಿ ಮಾಡಿದ ಅವರು, ಜನರ ಪರ, ರೈತರ ಪರವಾಗಿ ಜೆಡಿಎಸ್ ಇದೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಯಾತ್ರೆ ರೂಪಿಸಲಾಗಿದೆ ಎಂದರು. ಈ ಸರ್ಕಾರ ಜನಪರ ಸರ್ಕಾರ ಅಲ್ಲ. ಇದೊಂದು ಲೂಟಿ ಸರ್ಕಾರವೆಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸರ್ಕಾರದ ಪಾಪದ ಕೊಡ ತುಂಬಿದೆ ಎಂದ ಹೆಚ್ ಡಿಕೆ, ಯಾಕೆ ಕುಮಾರಸ್ವಾಮಿ ಮೇಲೆ ವಾಗ್ದಾಳಿ ಮಾಡ್ತಾರೆ ಅಂತ‌ ಅವರನ್ನೆ ಕೇಳಬೇಕು. ಜೋಡೆತ್ತು ಎಷ್ಟು ದಿನ‌ ಇರುತ್ತದೆಂದು ನೋಡೋಣ. ಎತ್ತು ಏರಿಗೆ ಏರಿಗೆಳೆದರೆ, ಕೋಣ ನೀರಿಗೆ ಎಳೆದಂತೆ ಎಂಬ ಗಾದೆ ಮಾತಿನಂತೆ ನಾಯಕರಿಬ್ಬರು ಉತ್ತರ ದಿಕ್ಕಿಗೆ ಒಬ್ಬರು, ದಕ್ಷಿಣ ದಿಕ್ಕಿಗೆ ಒಬ್ಬರು ಇದ್ದರಲ್ಲವೇ?. ನೋಡೋಣ ಎಷ್ಟು ದಿನ ಇರುತ್ತಾರೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಜೆಡಿಎಸ್​ನಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಜೆಡಿಎಸ್​​ನಿಂದ ತಂಡ ರಚನೆ ಮಾಡಲಾಗಿದೆ. ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸಂಕಷ್ಟದಲ್ಲಿರುವ ರೈತರನ್ನು ಭೇಟಿ ಮಾಡಿ ಧೈರ್ಯ ತುಂಬಲು ಹಾಗೂ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಕ್ತ ಸಲಹೆ ನೀಡಲು ಪಕ್ಷದ ವತಿಯಿಂದ ಪಕ್ಷದ ಮುಖಂಡರನ್ನು ಒಳಗೊಂಡ ಬರ ಅಧ್ಯಯನ ತಂಡಗಳನ್ನು ರಚಿಸಲಾಗಿದೆ. 30 ಜಿಲ್ಲೆಗಳಿಗೆ 30 ತಂಡಗಳನ್ನು ರಚನೆ ಮಾಡಿದ್ದೇವೆ. ಹತ್ತು ದಿನಗಳಲ್ಲಿ ಎಲ್ಲೆಡೆ ಪ್ರವಾಸ ಮಾಡಿ ವರದಿ ಕೊಡುತ್ತೇವೆ. ಸರ್ಕಾರಕ್ಕೆ 15 ದಿನಗಳು ಗಡುವು ಕೊಡುತ್ತಿದ್ದೇವೆ. ರೈತರಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೆಚ್​ಡಿಕೆ ಆಗ್ರಹಿಸಿದರು.

ಬರ ಅಧ್ಯಯನ ಜಿಲ್ಲೆಗಳು: ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ ಮತ್ತು ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ ಮತ್ತು ಬೀದರ್​, ವಿಜಯಪುರ ಮತ್ತು ಬಾಗಲಕೋಟೆ, ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಬೆಂಗಳೂರು ನಗರ.

ಪಕ್ಷದ ಅಧ್ಯಯನ ತಂಡ ಈ ಕೆಳಕಂಡ ಅಂಶಗಳನ್ನು ಪರಿಶೀಲಿಸಿ, ಅಧ್ಯಯನ ನಡೆಸಿ, ಅಧ್ಯಯನ ವರದಿಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಯವರ ಮುಖೇನ ರಾಜ್ಯ ಸರ್ಕಾರಕ್ಕೆ ಕಳುಹಿಸಲು ಮತ್ತು ಮತ್ತೊಂದು ಪ್ರತಿಯನ್ನು ಪಕ್ಷದ ಕೇಂದ್ರ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.

1. ತಾಲೂಕುಗಳಲ್ಲಿ ಸತತವಾಗಿ ತಲೆದೋರಿರುವ ಬರ ಪರಿಸ್ಥಿತಿಯಿಂದ ಹಾನಿಗೊಳಗಾಗಿರುವ ಬೆಳೆವಾರು ಮತ್ತು ತಾಲೂಕುವಾರು ನಷ್ಟವನ್ನು ಸಂಬಂಧಿಸಿದ ಇಲಾಖೆಯಿಂದ ಪಡೆದು ರೈತರೊಂದಿಗೆ ಚರ್ಚಿಸಿ, ಸರ್ಕಾರ ನಡೆಸಿರುವ ಸಮೀಕ್ಷೆ ಬಗ್ಗೆ ತುಲನೆ ಮಾಡುವುದು.
2. ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಲಿದ್ದು, ಗ್ರಾಮೀಣಾವೃದ್ಧಿ ಇಲಾಖೆ, ನಗರ ಸಭೆ ಮತ್ತು ಪುರಸಭೆಗಳಿಂದ ನಿರ್ಮಿತವಾಗಿರುವ ಕುಡಿಯುವ ನೀರಿನ ಯೋಜನೆಗಳಿಂದ ಸಮರ್ಪಕ ನೀರು ಸರಬರಾಜು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖೆಯವರೊಂದಿಗೆ ಚರ್ಚಿಸಿ, ವಿಮರ್ಶಿಸುವುದು.
3. ಜಾನುವಾರುಗಳಿಗೆ ಮಳೆ ಅಭಾವದಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಮತ್ತು ಮೇವು ಪೂರೈಕೆ ಬಗ್ಗೆ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದು.
4. ರಾಜ್ಯದಲ್ಲಿ ತೀವ್ರತರನಾದ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಲೋಡ್ ಶೆಡ್ಡಿಂಗ್ ನೆಪದಲ್ಲಿ ಕೃಷಿ ಚಟುವಟಿಕೆಗಳಿಗೆ ಸತತವಾದ ಮತ್ತು ಸಮರ್ಪಕವಾದ ವಿದ್ಯುತ್ ಪೂರೈಕೆ ಇರುವುದಿಲ್ಲ, ಕುಡಿಯುವ ನೀರು ಪೂರೈಕೆಗೆ ಘಟಕಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ತೊಡಕಾಗುತ್ತಿದೆ, ಲೋಡ್‌ಶೆಡ್ಡಿಂಗ್‌ನಿಂದ ರೈತರು, ಸಣ್ಣ ಮತ್ತು ಅತೀ ಸಣ್ಣ ಕಾರ್ಖಾನೆ ಮಾಲೀಕರು ಮತ್ತು ಕಾರ್ಮಿಕರು, ಹೋಟೆಲ್, ಅಂಗಡಿ ಮಳಿಗೆಯ ವರ್ತಕಲಿಗೆ ಹಲವು ರೀತಿ ತೊಂದರೆ ಉಂಟಾಗಿರುವುದನ್ನು ಪರಿಶೀಲಸುವುದು.
5. ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಕೆಲಸವಿಲ್ಲದೇ ಗುಳೆ/ವಲಸೆ ಹೋಗುವುದನ್ನು ತಪ್ಪಿಸಲು ಇಲಾಖಾವಾರು ರೂಪಿಸಿ, ಕೈಗೊಂಡಿರುವ ಬರ ಪರಿಹಾರ ಕಾಮಗಾರಿ ಕ್ರಿಯಾಯೋಜನೆ ಬಗ್ಗೆ ಚರ್ಚಿಸಿ, ವರದಿಯಲ್ಲಿ ಅಳವಡಿಸುವುದು.
6. ಗ್ರಾಮಾಂತರದ ಕೂಲಿ- ಕಾರ್ಮಿಕರಿಗೆ ನರೇಗಾ ಯೋಜನೆಯಡಿ ರೂಪಿತವಾಗಿರುವ ಕ್ರಿಯಾಯೋಜನೆ ಅನುಷ್ಠಾನದ ಬಗ್ಗೆ ಚರ್ಚಿಸುವುದು.
7. ಬೆಂಗಳೂರು ನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಗುಂಡಿಗಳನ್ನು ಮುಚ್ಚದೆ ಇರುವುದು, ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಅಭ್ಯಸಿಸುವುದು.
8. ಬರ ಅಧ್ಯಯನ ವರದಿಯನ್ನು ನವೆಂಬರ್ ತಿಂಗಳ 18ನೇ ದಿನಾಂಕದೊಳಗೆ ಸಲ್ಲಿಸಲು ಕೋರಲಾಗಿದೆ.

ಇದನ್ನೂ ಓದಿ: ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ಮಹತ್ವದ ಸಭೆ

Last Updated : Nov 4, 2023, 10:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.