ETV Bharat / state

ನಟ ಸುದೀಪ್ ಜೊತೆ ಸಿಎಂ ಮಾಧ್ಯಮಗೋಷ್ಟಿ: ಜೆಡಿಎಸ್​, ಕಾಂಗ್ರೆಸ್​ ಹೇಳಿದ್ದೇನು? - HD Kumaraswamy reaction to Sudeep

ಸಿನಿಮಾ ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ ಎಂದು ಹೆಚ್​ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರು ಚಿತ್ರನಟರ ಮುಂದೆ ಶರಣಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

Etv Bharathd-kumaraswamy-reaction-on-sudeep
ನಟ ಸುದೀಪ್ ಜೊತೆ ಸಿಎಂ ಮಾಧ್ಯಮಗೋಷ್ಟಿ:ಜೆಡಿಎಸ್​,ಕಾಂಗ್ರೆಸ್​ ಹೇಳಿದ್ದೇನು?
author img

By

Published : Apr 5, 2023, 4:27 PM IST

Updated : Apr 5, 2023, 7:35 PM IST

ಬೆಂಗಳೂರು: ಸಿನಿಮಾ ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ. ಅಂದರೆ ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ ಅನ್ನುವುದು ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಗಾಂಧಿನಗರ ಕ್ಷೇತ್ರದಲ್ಲಿ ಇಂದು ನಡೆಯುತ್ತಿರುವ ಪಂಚರತ್ನ ರಥಯಾತ್ರೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿನಿಮಾ ಸ್ಟಾರ್​ಗಳನ್ನು ಬಿಜೆಪಿಯವರು ಕರೆಸಿ ಪ್ರಚಾರ ಮಾಡಿಸುತ್ತಿದ್ದಾರೆ. ಆದರೆ, ನಮಗೆ ನಮ್ಮ ಕಾರ್ಯಕರ್ತರು, ನನ್ನ ಜನರೇ ಸ್ಟಾರ್ ಪ್ರಚಾರಕರು ಎಂದರು.

ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಸೋತಿದ್ದು ಒಳ ಒಪ್ಪಂದದಿಂದ - ಹೆಚ್​ಡಿಕೆ.. ನಟ ಸುದೀಪ್ ಯಾವುದೇ ಪಕ್ಷ ಸೇರಲಿ ಅಥವಾ ಪ್ರಚಾರ ಮಾಡಲಿ, ಅದು ಅವರ ವೈಯಕ್ತಿಕ ವಿಷಯ. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗುವುದಿಲ್ಲ. ಸಿನಿಮಾ ನಟರ ಪ್ರಚಾರದಿಂದ ಮತದಾರ ಪ್ರಭಾವಕ್ಕೊಳಗಾಗುವುದಿಲ್ಲ. ನಟರು ಪ್ರಚಾರ ಮಾಡಿದ ಕೆಲವು ಕಡೆ ಸೋಲು ಆಗಿದೆ. ಮಂಡ್ಯದಲ್ಲಿ ಸಿನಿಮಾ ಸ್ಟಾರ್​ಗಳಿಂದ ಲೋಕಸಭೆಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಸೋತಿದ್ದಾರೆ ಅನ್ನುತ್ತಾರೆ. ಆದ್ರೆ ಅದು ಸುಳ್ಳು, ನಿಖಿಲ್ ಸೋತಿದ್ದು ಬಿಜೆಪಿ, ಕಾಂಗ್ರೆಸ್, ರೈತ ಸಂಘಟನೆಯ ಒಳ ಒಪ್ಪಂದದಿಂದ ಎಂದು ಹೆಚ್​ಡಿಕೆ ಹೇಳಿದರು.

ಇದಕ್ಕೂ ಮುನ್ನ ಬಿನ್ನಿಪೇಟೆ, ಓಕಳಿಪುರಂ ಸರ್ಕಲ್, ಬೆಟ್ಟಮ್ಮ ಸರ್ಕಲ್, ಸನ್ ರೈಸ್ ಸರ್ಕಲ್ ನಲ್ಲಿ ರಥಯಾತ್ರೆ ನಡೆಸಿ ಜನರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತಾವಧಿಯಲ್ಲಿ ಏನೂ ಮಾಡಿಲ್ಲ. ಜನರನ್ನು ಕಷ್ಟಕ್ಕೆ ದೂಡಿರುವ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು. ಈ ಬಾರಿ ಜೆಡಿಎಸ್​ಗೆ ಬೆಂಬಲ ನೀಡಿ ಗಾಂಧಿನಗರ ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಬೆಲ್ಲದ ಹಾರ, ಹೂಮಾಲೆ ಹಾಕಿ ಅಭಿಮಾನಿಗಳಿಂದ ಸ್ವಾಗತ.. ಇನ್ನು ಗಾಂಧೀನಗರ ವಿಧಾನಸಭೆ ಕ್ಷೇತ್ರದ ಶ್ರೀರಾಮಪುರದಲ್ಲಿ ಪಂಚರತ್ನ ರಥಯಾತ್ರೆಯ ವೇಳೆ ಬೆಲ್ಲದ ಹಾರ ಹಾಗೂ ಬೃಹತ್ ಹೂಮಾಲೆ ಹಾಕಿ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು.

  • ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ @BSBommai ಅವರು ಚಿತ್ರನಟರ ಮುಂದೆ ಶರಣಾಗಿದ್ದಾರೆ.

    ಬಿಜೆಪಿಗೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ!

    BSY ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ವಿ ನಾಯಕರಿಲ್ಲದಿರುವುದು ದುರಂತ!

    — Karnataka Congress (@INCKarnataka) April 5, 2023 " class="align-text-top noRightClick twitterSection" data=" ">

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಪರ ನಾನು ನಿಲ್ಲುತ್ತೇನೆ, ಆದರೆ ಪಕ್ಷ ಸೇರಲ್ಲ: ಸುದೀಪ್ ಸ್ಪಷ್ಟನೆ

ಸಿಎಂ ಬೊಮ್ಮಾಯಿ ಚಿತ್ರ ನಟರ ಮುಂದೆ ಶರಣಾಗಿದ್ದಾರೆ- ಕಾಂಗ್ರೆಸ್​ ಟ್ವೀಟ್..​ ಇನ್ನು ನಟ ಸುದೀಪ್ ಜೊತೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್, ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ @BSBommai ಅವರು ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ! BSY ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ವಿ ನಾಯಕರಿಲ್ಲದಿರುವುದು ದುರಂತ! ಎಂದು ಟ್ವೀಟ್​ ಮಾಡಿದೆ.

ಶ್ರೀರಾಮುಲು ತಿರುಗೇಟು: ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಸಚಿವ ಶ್ರೀರಾಮುಲು, " 'ಫಿಲ್ಮ್ ಸ್ಟಾರ್' ನಿಮಗಾಗಿ 'ಕಾಂಗ್'ಗೈಸ್​ @rssurjewala, @ಕಿಚ್ಚ ಸುದೀಪ್ ಕರ್ನಾಟಕದ ಹೆಮ್ಮೆ- ಕಿಚ್ಚ ಯುದ್ಧಭೂಮಿಗೆ ಪ್ರವೇಶಿಸಿದ್ದಾರೆ. ಪೀಕ್ಚರ್​ ಅಭಿ ಬಾಕಿ ಹೈ ಎಂದು ಟ್ವೀಟ್​ ಮಾಡಿದ್ದಾರೆ.

Last Updated : Apr 5, 2023, 7:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.