ಬೆಂಗಳೂರು : ವಿದ್ಯಾಗಮ ತರಗತಿಗಳಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ. ಮುಖ್ಯಮಂತ್ರಿಗಳೇ ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ. ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಹನ್ನೆರಡನೆಯ ತರಗತಿವರೆಗಿನ ಎಲ್ಲ ಮಕ್ಕಳಿಗೂ ಮುಂದಿನ ತರಗತಿಗೆ ಅವರ ಹಿಂದಿನ ಫಲಿತಾಂಶ ಹಾಗೂ ಸಾಮರ್ಥ್ಯ ಪರಿಗಣಿಸಿ ಬಡ್ತಿ ನೀಡಿ ಎಂದು ಸಲಹೆ ನೀಡಿದ್ದಾರೆ.
-
ಮುಖ್ಯಮಂತ್ರಿಗಳೇ ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ.
— H D Kumaraswamy (@hd_kumaraswamy) October 9, 2020 " class="align-text-top noRightClick twitterSection" data="
ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಹನ್ನೆರಡನೆಯ ತರಗತಿವರಗೆ ಎಲ್ಲ ಮಕ್ಕಳಿಗೂ ಮುಂದಿನ ತರಗತಿಗೆ ಅವರ ಹಿಂದಿನ ಫಲಿತಾಂಶ ಹಾಗೂ ಪರ್ಫಾರ್ಮೆನ್ಸ್ ಪರಿಗಣಿಸಿ ಬಡ್ತಿ ನೀಡಿ.
2/4
">ಮುಖ್ಯಮಂತ್ರಿಗಳೇ ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ.
— H D Kumaraswamy (@hd_kumaraswamy) October 9, 2020
ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಹನ್ನೆರಡನೆಯ ತರಗತಿವರಗೆ ಎಲ್ಲ ಮಕ್ಕಳಿಗೂ ಮುಂದಿನ ತರಗತಿಗೆ ಅವರ ಹಿಂದಿನ ಫಲಿತಾಂಶ ಹಾಗೂ ಪರ್ಫಾರ್ಮೆನ್ಸ್ ಪರಿಗಣಿಸಿ ಬಡ್ತಿ ನೀಡಿ.
2/4ಮುಖ್ಯಮಂತ್ರಿಗಳೇ ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ.
— H D Kumaraswamy (@hd_kumaraswamy) October 9, 2020
ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಹನ್ನೆರಡನೆಯ ತರಗತಿವರಗೆ ಎಲ್ಲ ಮಕ್ಕಳಿಗೂ ಮುಂದಿನ ತರಗತಿಗೆ ಅವರ ಹಿಂದಿನ ಫಲಿತಾಂಶ ಹಾಗೂ ಪರ್ಫಾರ್ಮೆನ್ಸ್ ಪರಿಗಣಿಸಿ ಬಡ್ತಿ ನೀಡಿ.
2/4
ಮಕ್ಕಳ ಓದುವಿಕೆ ಆಧಾರದಲ್ಲಿ ಎಲ್ಲ ಮಕ್ಕಳಿಗೂ ಎ,ಬಿ,ಸಿ,ಡಿ ಎಂಬ ದರ್ಜೆಯನ್ನು ಸಂಬಂಧಿಸಿದ ಶಾಲೆಗಳೆ ನಿರ್ಧರಿಸಿ ನೀಡಲಿ. 10 ಮತ್ತು 12 ನೇ ತರಗತಿಗೆ ಇದು ಸಂಪೂರ್ಣವಾಗಿ ಅನ್ವಯವಾಗಲಿ. 1 ರಿಂದ 9 ನೇ ತರಗತಿಯವರಿಗೆ ಸಮಾನ ದರ್ಜೆ ನೀಡಿ ಬಡ್ತಿ ನೀಡಲಿ. 2021 ರ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿ ಎಂದು ಹೇಳಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಬಾರದೇ ಸೋಂಕು ವಿಪರೀತವಾಗುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳ ಆರಂಭ ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದು ಎಚ್ಚರಿಸುತ್ತೇನೆ ಎಂದು ಹೇಳಿದ್ದಾರೆ.