ETV Bharat / state

ಸೋಲಿನ ಭೀತಿಯಿಂದ ಹೊಸ ನಾಟಕ ಸೃಷ್ಟಿ ಮಾಡೋದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸ್ಪರ್ಧೆಗಿಳಿದಿವೆ: ಕುಮಾರಸ್ವಾಮಿ ವ್ಯಂಗ್ಯ

ಪರಮೇಶ್ವರ್ ಮೇಲೆ ಕಲ್ಲು ಎಸೆತ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಹೆಚ್​ ಡಿ ಕುಮಾರಸ್ವಾಮಿ ಇದೆಲ್ಲ ಡ್ರಾಮಾ ಎಂದು ಟೀಕಿಸಿದ್ದಾರೆ.

ಹೆಚ್​ ಡಿ ಕುಮಾರಸ್ವಾಮಿ
ಹೆಚ್​ ಡಿ ಕುಮಾರಸ್ವಾಮಿ
author img

By

Published : Apr 29, 2023, 2:40 PM IST

ಬೆಂಗಳೂರು: ಕೊರಟಗೆರೆ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾಜಿ ಡಿಸಿಎಂ ಡಾ‌. ಜಿ. ಪರಮೇಶ್ವರ್ ಮೇಲೆ ಕಲ್ಲು ಎಸೆತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು, ಇದೆಲ್ಲ ಡ್ರಾಮಾ ಎಂದು ಟೀಕಿಸಿದ್ದಾರೆ. ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರು ಕಲ್ಲು ಎಸೆದಿದ್ದಾರೆ?. ಬಿಜೆಪಿಯವರು ಕಲ್ಲು ಹೊಡೆದಿದ್ದಾರಾ ಕೇಳಬೇಕು. ನಮ್ಮ ಪಕ್ಷದಲ್ಲಿ ಕಲ್ಲು ಹೊಡಿಯೋರು ಯಾರೂ ಇಲ್ಲ. ಯಾವುದೇ ರೀತಿಯ ತನಿಖೆ ಮಾಡಲಿ, ಸತ್ಯಾಸತ್ಯಾತೆ ಹೊರಬರಲಿ ಎಂದು ಒತ್ತಾಯಿಸಿದರು.

ಅತ್ಯಂತ ಸೂಕ್ಷ್ಮವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಪ್ರಚಾರ, ಮೆರವಣಿಗೆ ಭರಾಟೆಯಲ್ಲಿ ಆಗಿದೆ. ಧ್ವಜದ ಕಡ್ಡಿಯಿಂದ ಏಟಾಗಿದೆ ಅಂತ ಪತ್ರಿಕೆಯಲ್ಲಿ ಬರೆದಿದ್ದಾರೆ. ಮೆರವಣಿಗೆ ನೂಕುನುಗ್ಗಲಿನಲ್ಲಿ ಆಗಿರಬಹುದು. ನಮಗೂ ಎಷ್ಟೋ ಸಲ ಆಗಿದೆ. ಹೊಲಿಗೆ ಏನು ಹಾಕಿಲ್ಲ ಅಂತಿದ್ದಾರೆ. ಅದಕ್ಕೆ ರಕ್ತ ಚೆಲ್ಲಾಡ್ತಿದೆ, ಚಿಮ್ಮುತ್ತಿದೆ ಅಂತ ಹೇಳುತ್ತಾರೆ. ಈ ಡ್ರಾಮಾಗಳು ರಾಷ್ಟ್ರೀಯ ಪಕ್ಷಗಳಿಂದ ನಡೆಯುತ್ತಿದೆ. ಸೋಲಿನ ಭೀತಿಯಿಂದ ಈ ರೀತಿ ಹೊಸ ನಾಟಕ ಸೃಷ್ಟಿ ಮಾಡೋದ್ರಲ್ಲಿ ಎರಡು ಪಕ್ಷಗಳು ಸ್ಪರ್ಧೆಗೆ ಇಳಿದಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಇದನ್ನೂ ಓದಿ: ಕೂತುಹಲ ಮೂಡಿಸುತ್ತಿದೆ ದಾವಣಗೆರೆ ದಕ್ಷಿಣ.. ಶಿವಶಂಕರಪ್ಪ ಅವರಿಗೆ ಟಕ್ಕರ್​ ಕೊಡಲು ಬಿಜೆಪಿ ರಣತಂತ್ರ!

ಪ್ರಧಾನಿ ನರೇಂದ್ರ ಮೋದಿ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, 10-20 ಕ್ಷೇತ್ರದಿಂದ ಜನ ತರುತ್ತಾರೆ. ನಂತರ ನರೇಂದ್ರ ಮೋದಿ ಅವರು ಟಾಟಾ ಮಾಡಿ ಹೋಗ್ತಾರೆ ಅಷ್ಟೇ ತಾನೆ?. ಅದರಿಂದ ಅವರ ಮುಖ ನೋಡಿ ಜನ ವೋಟು ಹಾಕುತ್ತಾರೆ ಅನ್ನುವ ಭ್ರಮೆ ಅವರಿಗೆ. ನೋಡೋಣ ಯಾವ ರೀತಿ ವರ್ಕೌಟ್ ಆಗುತ್ತದೆ. ಚನ್ನಪಟ್ಟಣದಲ್ಲಿ ನಡೆಯುವ ಬಿಜೆಪಿ ಸಮಾವೇಶಕ್ಕೆ ಮೋದಿಯವರು ಬರಲಿ ಸಂತೋಷ. ನಮ್ಮ ಕ್ಷೇತ್ರನೂ ನೋಡ್ಕೊಂಡು ಹೋಗಲಿ. ಅವರು ಬರೋದು, ತಪ್ಪೇನಿಲ್ಲ ಎಂದು ಮೋದಿಯವರ ಆಗಮನಕ್ಕೆ ಕುಮಾರಸ್ವಾಮಿ ಸ್ವಾಗತಿಸಿದರು.

ಇದನ್ನೂ ಓದಿ: ಇದು ಕರ್ನಾಟಕ ನಂಬರ್​ 1 ರಾಜ್ಯ ಮಾಡುವ ಚುನಾವಣೆ : ಪ್ರಧಾನಿ ಮೋದಿ ಬಣ್ಣನೆ

ರಾಮನಗರದಲ್ಲಿ ಕಾಂಗ್ರೆಸ್ - ಬಿಜೆಪಿ ಒಳಮೈತ್ರಿ ಕುರಿತು ನಿಖಿಲ್ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ರಾಮನಗರ ಮಾತ್ರ ಅಲ್ಲ, ಇನ್ನೂ ಹಲವು ಕಡೆ ಒಳ ಒಪ್ಪಂದಗಳೇ. ಶಿಕಾರಿಪುರ, ವರುಣಾ ಎಲ್ಲ ಕಡೆ ಒಳ ಒಪ್ಪಂದವೇ ನಡೆಯುತ್ತಿರುವುದು. ಚುನಾವಣೆಯಲ್ಲಿ ಗುಮ್ಮ ಬಂತು, ಗುಮ್ಮ ಬಂತು ಎಂದು ತೋರಿಸಿ, ಮತ ಪರಿವರ್ತನೆ ಮಾಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಹಲವೆಡೆ ರಸ್ತೆ ನಿರ್ಬಂಧ.. ಇಲ್ಲಿದೆ ಪರ್ಯಾಯ ಮಾರ್ಗಗಳ ವಿವರ

ಇದನ್ನೂ ಓದಿ: ಕಾರಿನಲ್ಲಿ ಕೂರುವ ವೇಳೆ ಸ್ಲಿಪ್​​​ ಆದ ಸಿದ್ದರಾಮಯ್ಯ: ನೀರು ಕೊಟ್ಟು ಆರೈಕೆ ಮಾಡಿದ ಸಹಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.