ಬೆಂಗಳೂರು : ಇಂಧನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಖಂಡಿಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಅರೆ ಇಷ್ಟೇನಾ ಪೆಟ್ರೋಲ್ ಬಂದಿದ್ದು ಅಂತಾ ಕೋಟ್ಯಂತರ ಜನರು ಅದರಲ್ಲೂ ಮಧ್ಯಮ ವರ್ಗದ ಜನರು ಕೊರಗುತ್ತಲೇ ಇದ್ದಾರೆ ಎಂದಿದ್ದಾರೆ.
ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 100 ಡಾಲರ್ ಇದ್ದಾಗ ಯುಪಿಎ ಸರ್ಕಾರ 70 ರಿಂದ 75 ರೂಪಾಯಿಯಲ್ಲಿ ತೈಲ ಪೂರೈಕೆ ಮಾಡುತ್ತಿತ್ತು. ಆದರೆ, ಈಗ ಬ್ಯಾರಲ್ ಒಂದಕ್ಕೆ 52 ಡಾಲರ್ ಇದ್ದರೂ ಕೂಡ ಪೆಟ್ರೋಲ್ ಬೆಲೆ 100 ರೂ. ನತ್ತ ಮುಖ ಮಾಡಿದೆ. ಈ ಸಂಪತ್ತಿಗೇನಾ ಪ್ರಧಾನಿ ಚೌಕೀದಾರ..?, 18 ಗಂಟೆ ಕೆಲಸ ಮಾಡುತ್ತಾರೆ ಎಂದು ಬಿಂಬಿಸುವುದು? ಎಂದಿದ್ದಾರೆ.
-
ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಅರೆ ಇಷ್ಟೇನಾ ಪೆಟ್ರೋಲ್ ಬಂದಿದ್ದು ಅಂತ ಕೋಟ್ಯಾಂತರ ಜನರು ಅದರಲ್ಲೂ ಮಧ್ಯಮ ವರ್ಗದ ಜನರು ಕೊರಗುತ್ತಲೇ ಇದ್ದಾರೆ.
— Dr H.C.Mahadevappa (@CMahadevappa) January 29, 2021 " class="align-text-top noRightClick twitterSection" data="
ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 100 ಡಾಲರ್ ಇದ್ದಾಗ ಯುಪಿಎ ಸರ್ಕಾರ 70 ರಿಂದ 75 ರೂಪಾಯಿಯಲ್ಲಿ ತೈಲ ಪೂರೈಕೆ ಮಾಡುತ್ತಿತ್ತು.
1/2 pic.twitter.com/h5ikDK17QJ
">ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಅರೆ ಇಷ್ಟೇನಾ ಪೆಟ್ರೋಲ್ ಬಂದಿದ್ದು ಅಂತ ಕೋಟ್ಯಾಂತರ ಜನರು ಅದರಲ್ಲೂ ಮಧ್ಯಮ ವರ್ಗದ ಜನರು ಕೊರಗುತ್ತಲೇ ಇದ್ದಾರೆ.
— Dr H.C.Mahadevappa (@CMahadevappa) January 29, 2021
ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 100 ಡಾಲರ್ ಇದ್ದಾಗ ಯುಪಿಎ ಸರ್ಕಾರ 70 ರಿಂದ 75 ರೂಪಾಯಿಯಲ್ಲಿ ತೈಲ ಪೂರೈಕೆ ಮಾಡುತ್ತಿತ್ತು.
1/2 pic.twitter.com/h5ikDK17QJಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಅರೆ ಇಷ್ಟೇನಾ ಪೆಟ್ರೋಲ್ ಬಂದಿದ್ದು ಅಂತ ಕೋಟ್ಯಾಂತರ ಜನರು ಅದರಲ್ಲೂ ಮಧ್ಯಮ ವರ್ಗದ ಜನರು ಕೊರಗುತ್ತಲೇ ಇದ್ದಾರೆ.
— Dr H.C.Mahadevappa (@CMahadevappa) January 29, 2021
ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 100 ಡಾಲರ್ ಇದ್ದಾಗ ಯುಪಿಎ ಸರ್ಕಾರ 70 ರಿಂದ 75 ರೂಪಾಯಿಯಲ್ಲಿ ತೈಲ ಪೂರೈಕೆ ಮಾಡುತ್ತಿತ್ತು.
1/2 pic.twitter.com/h5ikDK17QJ
ನಮ್ಮ ದೇಶದ ಪ್ರಧಾನಿಗಳು 18 ಗಂಟೆ ಕೆಲಸ ಮಾಡುತ್ತಿರುವುದೇ ನಿಜವಾಗಿದ್ದಿದ್ದರೆ ಅವರಿಗೆ ಇಂದಿನ ಪೆಟ್ರೋಲ್ ಬೆಲೆ ಎಷ್ಟು? ಇಂದಿನ ಡೀಸೆಲ್ ಬೆಲೆ ಎಷ್ಟು? ಅಡುಗೆ ಅನಿಲದ ಬೆಲೆಯಾದರೂ ಎಷ್ಟು? ಎಂಬ ವಿಷಯ ತಿಳಿದಿರಬೇಕಿತ್ತು ಎಂದಿದ್ದಾರೆ.
ಕೋಮುವಾದದ ಪೊರೆಯಿಂದ ರೈತರ ಹೋರಾಟವನ್ನು ನೋಡುತ್ತಿರುವ ಕೋಮುವಾದಿ ಬಿಡಾರವು ರೈತರ ಹೋರಾಟವನ್ನು ದಿಕ್ಕು ತಪ್ಪಿಸಲು ಕುತಂತ್ರಗಳನ್ನು ಮಾಡುತ್ತಿದ್ದು, ಅವರನ್ನು ಭಯೋತ್ಪಾದಕರು ಎನ್ನುವಷ್ಟರ ಮಟ್ಟಿಗೆ ಧಾಷ್ಟ್ಯವನ್ನು ಪ್ರದರ್ಶಿಸುತ್ತಿವೆ. ರೈತರು ಭವಿಷ್ಯದಲ್ಲಿ ಆಟವಾಡುವ ಈ ಕೋಮುವಾದಿಗಳು ಮತ್ತು ಅವರನ್ನು ಬೆಂಬಲಿಸುವ ಬಿಜೆಪಿಗರು ಅಪಾಯಕಾರಿಗಳು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಕೌನ್ಸಲರ್ಗಳ ಸಂಖ್ಯೆ ನಿಗದಿ : ರಾಜ್ಯಪತ್ರ ಹೊರಡಿಸಿದ ಸರ್ಕಾರ