ETV Bharat / state

ಹರ್ಷ ಕೊಲೆ ಪ್ರಕರಣ: ಆರೋಪಿಗಳನ್ನು ಎನ್ಐಎ ವಶಕ್ಕೆ ನೀಡಿದ ಕೋರ್ಟ್ - ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ

ಫೆಬ್ರುವರಿ 20ರಂದು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ನಡೆದಿತ್ತು. ಈ ಪ್ರಕರಣದ ಐವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ನಗರದ ವಿಶೇಷ ನ್ಯಾಯಾಲಯ, ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿದೆ. ಮೇ 9ರ ಮಧ್ಯಾಹ್ನದವರೆಗೆ ಎನ್‌ಐಎ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.

Murder of Hindu activist Harshan in Shimoga
ಹರ್ಷ ಕೊಲೆ ಪ್ರಕರಣ
author img

By

Published : May 4, 2022, 9:36 PM IST

ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ನಗರದ ವಿಶೇಷ ನ್ಯಾಯಾಲಯವು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸಿದೆ. ಈ ಕುರಿತಂತೆ ಎನ್‌ಐಎ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶ ಬಿ.ಜಿ. ಪ್ರಮೋದ್‌ ಬುಧವಾರ ವಿಚಾರಣೆ ನಡೆಸಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡಲು ಆದೇಶಿಸಿದ್ದಾರೆ.

ಆರೋಪಿಗಳಾದ ಶಿವಮೊಗ್ಗದ ಟ್ಯಾಂಕ್‌ ಮೊಹಲ್ಲಾದ ಅಬ್ದುಲ್‌ ಆಫ್ವಾನ್‌ (21), ಅಬ್ದುಲ್‌ ಖಾದರ್ ಜಿಲಾನ್‌ (25), ಇಲ್ಯಾಸ್‌ ನಗರದ ಫರಜ್‌ ಪಾಷಾ (24), ಜೆ.ಪಿ ನಗರದ ಸೈಯದ್‌ ನದೀಂ (20) ಮತ್ತು ಜಾಫರ್ ಸಾದಿಕ್‌ (50) ಅವರನ್ನು ಮೇ 9ರ ಮಧ್ಯಾಹ್ನದವರೆಗೆ ಎನ್‌ಐಎ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ. 2022ರ ಫೆಬ್ರುವರಿ 20ರಂದು ರಾತ್ರಿ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದ್ದು, ಈವರೆಗೆ ಹತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಎನ್ಐಎ ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಅನುಮಾನಾಸ್ಪದ ಪ್ರಯಾಣಿಕ ಬಿಟ್ಟೋದ ಬ್ಯಾಗ್​ನಲ್ಲಿ ಸಿಕ್ತು ಲ್ಯಾಪ್ ಟಾಪ್- ಮೊಬೈಲ್: ಕರ್ತವ್ಯನಿಷ್ಠೆ ಮೆರೆದ ಸಿಬ್ಬಂದಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.