ETV Bharat / state

ಮಗನ ಆತ್ಮಹತ್ಯೆ, ಸೊಸೆಯ ಕಾಟ: ಕಣ್ಣೀರಲ್ಲಿ ಕೈತೊಳೆಯುತ್ತಿರುವ ಹಿರಿಯ ಜೀವ - ಆತ್ಮಹತ್ಯೆ

ಆಸ್ತಿಗಾಗಿ ತನ್ನ ಮಗನನ್ನು ಕೊಂದು ಜೈಲ್​ಗೆ ಹೋಗಿದ್ದ ಸೊಸೆ ಬೇಲ್​ನಲ್ಲಿ ಹೊರಗೆ ಈಗ ನನಗೂ ಪೀಡಿಸುತ್ತಿದ್ದಾಳೆ ಎಂದು ಅತ್ತೆಯ ಅಳಲು.

harassment
ರೇಣುಕಮ್ಮ
author img

By

Published : Jul 11, 2022, 10:44 PM IST

ಬೆಂಗಳೂರು: ಇಲ್ಲೊಬ್ಬ ಒಬ್ಬ ತಾಯಿ ಇಳಿ ವಯಸ್ಸಿನಲ್ಲಿ ಮಗನನ್ನು ಕಳೆದು ಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೆ. ಸೊಸೆಯ ಗಂಡನ ಆಸ್ತಿಗಾಗಿ ಅತ್ತೆಯನ್ನು ಪೀಡಿಸುತ್ತಿದ್ದಾಳೆ.

ನಗರದ ಕೆಂಗೇರಿ ಬಳಿಯ ಸೂಲಿಕೆರೆಯ ರೇಣುಕಮ್ಮ ಎಂಬುವವರ ಮಗ ಮಂಜುನಾಥ್​ ಜೂನ್ 1 ರಂದು ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಡೆತ್​ ನೋಟ್​ ಬರೆದು ಪ್ರಾಣ ಬಿಟ್ಟಿದ್ದಾನೆ. ಡೆತ್​ ನೋಟ್​ನಲ್ಲಿ ಪ್ರಕಾರ ಮಂಜುನಾಥ್​ನ ಹೆಂಡತಿ ಅನುಸೂಯಾಳನ್ನು ಬಂಧಿಸಿದ್ದರು. ಆದರೆ, ಬೇಲ್​ ಮೇಲೆ ಹೊರಗೆ ಬಂದು ಮತ್ತೆ ಆಸ್ತಿಗಾಗಿ ಕಾಟ ಕೊಡುತ್ತಿದ್ದಾಳೆ ಎಂದು ರೇಣುಕಮ್ಮ ಆರೋಪಿಸುತ್ತಿದ್ದಾರೆ.

ಆಸ್ತಿಗಾಗಿ ಗಂಡನನ್ನು ಕೊಂದವಳು ಅತ್ತೆಗೂ ಕಾಡುತ್ತಿದ್ದಾಳೆ

ಮದುವೆಯಾದ ಮರುದಿನದಿಂದ ಕಿರುಕುಳ: ಕೆಂಗೇರಿ ಬಳಿಯ ರಾಮಸಂದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್, ತನ್ನ ಆಸ್ತಿ, ಹಣ ಯಾವುದನ್ನೂ ಹೆಂಡತಿಗೆ ಕೊಡಬಾರದು, ತಾಯಿಗೆ ಸೇರಬೇಕು. ಖಾಸಗಿ ವಿಡಿಯೋ ಮುಂದಿಟ್ಟುಕೊಂಡು ಪುಡಿ ರೌಡಿಗಳ ಜೊತೆ ಸೇರಿ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ. ಸೈಟು, ಆಸ್ತಿ ತನ್ನ ಹೆಸರಿಗೆ ಬರೆದುಕೊಡುವಂತೆ ಮದುವೆಯ ಮರು ದಿನದಿಂದ ಕಿರುಕುಳ ಕೊಡುತ್ತಿದ್ದಾಳೆ ಎಂದು ಡೆತ್ ನೋಟ್​ನಲ್ಲಿ ಬರೆದಿದ್ದಾರೆ.

ಮಂಜುನಾಥ್​ಗೆ ಎರಡನೇ ಮದುವೆ: ಮಂಜುನಾಥ್ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದ. ಬಳಿಕ ಅನಸೂಯಾಳನ್ನು ವರಿಸಿದ್ದ. ಅನಸೂಯಾಳನ್ನು ಮದುವೆಯಾಗಿ ಕೆಲವೇ ವರ್ಷಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಾಯಿ ರೇಣುಕಮ್ಮ ತಿಳಿಸಿದ್ದಾರೆ.

ಸಹಾಯ ಸಿಗದೇ ವೃದ್ಧೆಯ ತೊಳಲಾಟ: ಈ ಪ್ರಕರಣದಲ್ಲಿ ಅನಸೂಯಾ ಜೈಲಿಗೆ ಹೋಗಿದ್ದಳು. ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಟಾರ್ಗೆಟ್ ಮಾಡಿದ್ದಾಳೆ. ಆಸ್ತಿ, ಹಣ ಎಲ್ಲವನ್ನೂ ತನಗೆ ಕೊಡುವಂತೆ ಕಿರುಕುಳ ಕೊಡುತ್ತಿದ್ದಾಳೆ. ಬೇರೆ ಯಾರ ಸಹಾಯವೂ ತನಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಕೊಟ್ಟಿರುವ ಸಾಲ ಕೇಳಿದ್ದಕ್ಕೆ ತಳ್ಳಿ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.