ETV Bharat / state

ಮಾರಿಷಸ್​ಗೆ ಸುಧಾರಿತ ಲಘು ಹೆಲಿಕಾಪ್ಟರ್ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದ ಹೆಚ್ಎಎಲ್

author img

By

Published : Jan 20, 2022, 12:31 AM IST

ಎಚ್‌ಎಎಲ್‌ನ ಜನರಲ್ ಮ್ಯಾನೇಜರ್ ಬಿ ಕೆ ತ್ರಿಪಾಠಿ ಮಾರಿಷಸ್ ಸರ್ಕಾರದ ಒ ಕೆ ದಾಬಿದಿನ್ ಕಾನ್ಪುರದಲ್ಲಿರುವ ಎಚ್‌ಎಎಲ್‌ ಕಛೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಿದೆ.

ಮಾರಿಷಸ್​ಗೆ ಸುಧಾರಿತ ಲಘು ಹೆಲಿಕಾಪ್ಟರ್ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದ ಹೆಚ್ಎಎಲ್
ಮಾರಿಷಸ್​ಗೆ ಸುಧಾರಿತ ಲಘು ಹೆಲಿಕಾಪ್ಟರ್ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದ ಹೆಚ್ಎಎಲ್

ಬೆಂಗಳೂರು: ವಿದೇಶಗಳಿಗೆ ರಕ್ಷಣಾ ರಫ್ತುಗಳನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಯೋಜನೆಯಂತೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸುಧಾರಿತ ಲಘು ಹೆಲಿಕಾಪ್ಟರ್ ಪೂರೈಸಲು ಮಾರಿಷಸ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ದ್ವೀಪ ರಾಷ್ಟ್ರದ ವಾಯು ಪಡೆ ಈಗಾಗಲೇ ಎಚ್‌ಎಎಲ್ ನಿರ್ಮಿತ ಡೋರ್ನಿಯರ್-228 ವಿಮಾನಗಳನ್ನು ಬಳಸುತ್ತಿದೆ. ಮೂರು ದಶಕಗಳ ಸುದೀರ್ಘ ವ್ಯಾಪಾರ ಸಂಬಂಧಗಳು ಮತ್ತಷ್ಟು ಬಲಗೊಂಡಿದೆ ಎಂದು ರಾಜಧಾನಿಯಲ್ಲಿ ಪ್ರಧಾನ ಕಚೇರಿಯಿಂದ ಬುಧವಾರ ಬಿಡುಗಡೆಯಾದ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಎಚ್‌ಎಎಲ್‌ನ ಜನರಲ್ ಮ್ಯಾನೇಜರ್ ಬಿ ಕೆ ತ್ರಿಪಾಠಿ ಮಾರಿಷಸ್ ಸರ್ಕಾರದ ಒ ಕೆ ದಾಬಿದಿನ್ ಕಾನ್ಪುರದಲ್ಲಿರುವ ಎಚ್‌ಎಎಲ್‌ ಕಛೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಿದೆ. ಬಹು-ಪಾತ್ರ ನಿರ್ವಹಿಸುವ ಎಂಕೆ-III 5.5 ಟನ್ ಭಾರ ಹೊಂದಿದ್ದು, ಭಾರತ ಮತ್ತು ವಿದೇಶಗಳಲ್ಲಿ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಹಲವರ ಜೀವ ಉಳಿಸುವ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ತಿಳಿಸಿದೆ.

ಇಲ್ಲಿಯವರೆಗೆ ಸುಮಾರು 3,40,000 ಹಾರುವ ಗಂಟೆಗಳನ್ನು ಪೂರೈಸಿರುವ 335 ಕ್ಕೂ ಹೆಚ್ಚು ಹೆಲಿಕಾಪ್ಟರ್‌ನ ಗಳನ್ನು ಉತ್ಪಾದಿಸಲಾಗಿದೆ. ಗ್ರಾಹಕರಿಗೆ ತಾಂತ್ರಿಕ ನೆರವು ಮತ್ತು ಬೆಂಬಲವನ್ನು ಸಂಸ್ಥೆ ಸದಾ ಖಾತ್ರಿಪಡಿಸುತ್ತದೆ ಎಂದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.