ಬೆಂಗಳೂರು: ಬಿಬಿಎಂಪಿ ಹೆಚ್ಎಎಲ್ ನಲ್ಲಿ ನಿರ್ಮಾಣ ಮಾಡಿರುವ ಕೋವಿಡ್ ಕೇರ್ ಸೆಂಟರ್ಗೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ (ಕೆಪಿಟಿಸಿಎಲ್) ಹಾಗೂ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ. ಜನರಲ್ ಬೆಡ್ಗೆ ಸೀಮಿತವಾಗಿದ್ದ ಸಿಸಿಸಿ ಕೇಂದ್ರದಲ್ಲಿ ಈಗ 50 ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳು ಲಭ್ಯ ಇವೆ.
ಆಮ್ಲಜನಕ, ಐಸಿಯು, ವೆಂಟಿಲೇಟರ್ ಬೆಡ್ಗಳ ಬೇಡಿಕೆ ಹೆಚ್ಚಿರುವುದರಿಂದ ಕೆಪಿಟಿಸಿಎಲ್ ಈ ಸಿಸಿಸಿ ಕೇಂದ್ರದಲ್ಲಿ 40 ಆಮ್ಲಜನಕ ಸೌಲಭ್ಯವಿರುವ ಹೆಚ್ ಡಿಯು ಬೆಡ್ ನಿರ್ಮಾಣ ಮಾಡಿಕೊಟ್ಟಿದೆ. ಕೇವಲ 12 ದಿನದಲ್ಲಿ ನಿಮಿಷಕ್ಕೆ 330 ಲೀಟರ್ ವೈದ್ಯಕೀಯ ಆಕ್ಸಿಜನ್ ಉತ್ಪಾದಿಸುವ ಪಿಎಸ್ ಎ ಪ್ಲಾಂಟ್ (PSA- Pressure Swing Adsorption) ನಿರ್ಮಾಣ ಮಾಡಿ, 40 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆಯ ಪೈಪ್‌ಲೈನ್ ಅಳವಡಿಸಿ, ಜನರೇಟರ್ ವ್ಯವಸ್ಥೆ, ವೈದ್ಯರನ್ನು ಸಹ ನೀಡಿದೆ. ಇದಕ್ಕೆ ಒಟ್ಟು 73.28 ಲಕ್ಷ ವೆಚ್ಚವಾಗಿದ್ದು, ಸಿಎಸ್ಆರ್ ಫಂಡ್ನಿಂದ 21.50 ಲಕ್ಷ ಸಂಗ್ರಹಿಸಲಾಗಿದೆ. ವಿವಿಧ ಉದ್ಯಮಿಗಳು, ಬೆಸ್ಕಾಂ, ಅಧಿಕಾರಿಗಳು, ಸ್ನೇಹಿತರು ಕೂಡಾ ಕೈಜೋಡಿಸಿದ್ದಾರೆ ಎಂದು ಕೆಪಿಟಿಸಿಎಲ್ ತಿಳಿಸಿದೆ.
ಡಾಕ್ಟರ್ಸ್ ಫಾರ್ ಯು ಖಾಸಗಿ ಸಂಸ್ಥೆಯೂ ವೈದ್ಯರ ಅವಶ್ಯಕತೆಯನ್ನು ಪೂರೈಸಲು ಸಿದ್ಧವಿದೆ. ಬಿಬಿಎಂಪಿ ಆಕ್ಸಿಜನ್ ವ್ಯವಸ್ಥೆಯೂ ಸೇರಿದಂತೆ ಹೆಚ್ಎಲ್ ಸಿಸಿಸಿ ಕೇಂದ್ರದಲ್ಲಿ ಒಟ್ಟು 50 ಹೆಚ್ಡಿಯು ಬೆಡ್ ಸೌಲಭ್ಯ ಇಂದಿನಿಂದ ಆರಂಭವಾಗಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಮಂಜುಳಾ ತಿಳಿಸಿದ್ದಾರೆ.