ETV Bharat / state

ಹತ್ತರಲ್ಲಿ ಏಳುಮಂದಿಗೆ ಕಾಡುತ್ತಂತೆ ಕೂದಲು ಉದುರುವ ಸಮಸ್ಯೆ : ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆ ಏನು? - ಈಟಿವಿ ಭಾರತ ಕನ್ನಡ

ಬೆಂಗಳೂರಿನ ಕೋರಮಂಗಲದ ಹೇರ್​ಲೈನ್ ಇಂಟರ್​ನ್ಯಾಷನಲ್​ನ ಕೂದಲು ಕಸಿ ಚಿಕಿತ್ಸಕ ಡಾ. ದಿನೇಶ್ ಜಿ.ಜಿ. ಪ್ರಕಾರ, ಕೂದಲು ಉದುರುವಿಕೆ ಸಮಸ್ಯೆಗೆ ಕೂದಲು ಕಸಿ ಮಾತ್ರವೇ ಪರಿಣಾಮಕಾರಿ ಪರಿಹಾರ ಮಾರ್ಗ. ಒಮ್ಮೆ ಕಸಿ ಆದ ಬಳಿಕ ಸಹಜವಾಗಿ ಕೂದಲು ಬೆಳೆಯುತ್ತ ಹೋಗುತ್ತದೆ ಮತ್ತು ಜೀವನ ಪರ್ಯಂತ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

hair-transplant-is-effective-for-hair-loss-problem
ಹತ್ತರಲ್ಲಿ ಏಳುಮಂದಿಗೆ ಕಾಡುತ್ತಂತೆ ಕೂದಲು ಉದುರುವ ಸಮಸ್ಯೆ : ಕಸಿ ಮಾತ್ರವೇ  ಪರಿಹಾರ ಅಂತಾರೆ ವೈದ್ಯರು!
author img

By

Published : Nov 30, 2022, 5:22 PM IST

Updated : Nov 30, 2022, 9:11 PM IST

ಬೆಂಗಳೂರು : ಕೂದಲು ಉದುರುವುದು ಇಂದು ಒಬ್ಬಿಬ್ಬರ ಸಮಸ್ಯೆ ಅಲ್ಲ. ಒಟ್ಟಾರೆ ಜನಸಂಖ್ಯೆಯ ಶೇ.70ರಷ್ಟು ಮಂದಿಯನ್ನು ಈ ಸಮಸ್ಯೆ ಕಾಡುತ್ತಿದೆ. ಯಾವುದೋ ವಿಧದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದ ಒಂದು ಕಾಲಘಟ್ಟದಲ್ಲಿ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ.

ಇದಕ್ಕೆ ಕಾರಣ ಹಲವು. ಶೇ.50ರಷ್ಟು ಮಂದಿಗೆ ಈ ಸಮಸ್ಯೆ ಆನುವಂಶಿಕತೆಯಿಂದ ಕಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇದರ ಜತೆ ಇನ್ನೂ ಹಲವು ಕಾರಣಗಳಿಗೆ ಸಮಸ್ಯೆ ಎದುರಾಗುತ್ತಿದೆ. ಬದಲಾದ ಜೀವನಶೈಲಿ, ಕೆಲಸದ ಒತ್ತಡ, ಆಧುನಿಕತೆಯ ಅಳವಡಿಕೆಯ ಪ್ರಭಾವ, ನೀರು, ಸಾಬೂನುಗಳ ಬಳಕೆಯಿಂದ ಆಗುವ ತೊಂದರೆ ಸೇರಿದಂತೆ ಹಲವು ಕಾರಣಗಳನ್ನು ಕೂದಲು ಉದುರುವ ಸಮಸ್ಯೆಗೆ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಇದಕ್ಕೆ ಪರಿಹಾರವಾಗಿ ಕೂದಲು ಕಸಿ ಅಪಾರ ಪ್ರಮಾಣದಲ್ಲಿ ಜನಪ್ರಿಯವಾಗುತ್ತಿದೆ.

ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಬೊಕ್ಕ ತಲೆ ಇಲ್ಲವೇ, ತಲೆಯ ಕೆಲಭಾಗದಲ್ಲಿ ಉದುರಿದ ಕೂದಲಿನಿಂದಾಗಿ ಸಮಸ್ಯೆ ಎದುರಾಗುತ್ತಿದೆ. ಸೌಂದರ್ಯಹೀನತೆ ತಲೆಗೂದಲು ಉದುರುವಿಕೆಯಿಂದ ಎದುರಾಗಿದೆ ಎಂಬ ಭಾವನೆ ಹಲವರದ್ದು. ಕೂದಲು ಕಸಿ ಒಂದು ಪರಿಣಾಮಕಾರಿ ಪರಿಹಾರವಾಗಿ ಕಳೆದ ಆರೇಳು ವರ್ಷದಿಂದ ಜನಪ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಪರ್ಧೆ ಹೆಚ್ಚಿರುವುದರಿಂದ ಕೂದಲು ಕಸಿ ಮಾಡಿಸುವ ವೆಚ್ಚ ಸಹ ಗಣನೀಯವಾಗಿ ಇಳಿದಿದೆ.

ಹತ್ತರಲ್ಲಿ ಏಳುಮಂದಿಗೆ ಕಾಡುತ್ತಂತೆ ಕೂದಲು ಉದುರುವ ಸಮಸ್ಯೆ : ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆ

ಕೂದಲು ಕಸಿ ವಿವರಣೆ : ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬೋಳು/ಕೂದಲು ಉದುರುವಿಕೆ ಸಮಸ್ಯೆಗೆ ಶೇ. 95ರಷ್ಟು ಫಲಿತಾಂಶ ಆಧಾರಿತ ಚಿಕಿತ್ಸೆಯಾಗಿದ್ದು, ಇದು ಸುಟ್ಟ ಗಾಯಗಳ, ರಸ್ತೆ ಅಪಘಾತದಿಂದ ಕೂದಲು ಕಳೆದುಕೊಂಡ ಮತ್ತಿತರ ರೋಗಿಗಳ ಸ್ನೇಹಿಯಾದ ಚಿಕಿತ್ಸಾ ಕ್ರಮವಾಗಿದೆ. ವಿಶ್ವದಲ್ಲೇ ಸಮಸ್ಯೆ ಬೋಳು ಇಲ್ಲವೇ ಬೊಕ್ಕತಲೆ ಸಮಸ್ಯೆ ನಿವಾರಣೆಗೆ ಇದು ಪ್ರಮುಖ ಪರಿಹಾರ ಮಾರ್ಗವಾಗಿದೆ. ಕೂದಲು ಕಸಿ ಹೊರರೋಗಿ(ಔಟ್ ಪೇಷೆಂಟ್) ಚಿಕಿತ್ಸಾ ವಿಧಾನವಾಗಿದೆ. ಇದು ಕನಿಷ್ಠ ಪ್ರಮಾಣದ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ. ಇದು ಶಸ್ತ್ರಚಿಕಿತ್ಸೆಯಲ್ಲ, ಸರಳವಾಗಿ ಹೇಳುವುದಾದರೆ ಮುಳ್ಳು ತೆಗೆದಷ್ಟೇ ಸುಲಭದ ವಿಧಾನ. ಚಿಕಿತ್ಸೆ ಪಡೆದ ದಿನವೇ ವ್ಯಕ್ತಿ ಹೊರಗೆ ತೆರಳಬಹುದು, ಓಡಾಡಬಹುದಾಗಿದೆ. ಇದಕ್ಕೆ ಯಾವುದೇ ವಿಶ್ರಾಂತಿ ಬೇಕಿಲ್ಲ. ಬ್ಯಾಂಡೇಜ್ ಇಲ್ಲ, ಹೊಲಿಗೆ ಇಲ್ಲ ಮತ್ತು ಇದು ರೋಗಿ ಸ್ನೇಹಿ ಕಾರ್ಯವಿಧಾನವಾಗಿದೆ.

ಚಿಕಿತ್ಸಾ ವಿಧಾನ : ರೋಗಿಗಳು ತಲೆಯ ಹಿಂಭಾಗದಲ್ಲಿ (ಅಂದರೆ ಆಕ್ಸಿಪಿಟಲ್ ಪ್ರದೇಶ) ಕೂದಲನ್ನು ಹೊಂದಿದ್ದರೆ ಈ ದೃಢವಾದ ಕೂದಲುಗಳು ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನ್‌ ನಿರೋಧಕವಾಗಿರುವ ಈ ಪ್ರದೇಶದ ಕೂದಲುಗಳನ್ನು ಯಾವುದೇ ಗಾಯದ ಗುರುತುಗಳಿಲ್ಲದೆಯೇ ನೋವು ರಹಿತವಾಗಿ ತೆಗೆಯಲಾಗುತ್ತದೆ. ಜೊತೆಗೆ ಕೂದಲಿನ ಕೋಶಕ (ಫಾಲಿಕಲ್) ಗಳನ್ನು ತೆಗೆದ ಬಳಿಕ, ಚರ್ಮವು ಯಾವುದೇ ಗಾಯವಿಲ್ಲದೆ ಎರಡು ದಿನಗಳಲ್ಲಿ ಗುಣವಾಗುತ್ತದೆ. ಗಾಯವು ಸಣ್ಣ ಗೀರು ಗಾಯದಂತಿದ್ದು, ಮೂರು ದಿನಗಳಲ್ಲಿ ಗುಣವಾಗುತ್ತದೆ.

ವಯೋಮಿತಿಯ ನಿರ್ಬಂಧವಿಲ್ಲ.. ಈ ಚಿಕಿತ್ಸೆಗೆ ಯಾವುದೇ ವಯೋಮಿತಿಯ ನಿರ್ಬಂಧ ಇಲ್ಲ. 23 ವರ್ಷ ಮೇಲ್ಪಟ್ಟ ಯಾವುದೇ ವಯಸ್ಸಿನವರು ಈ ಚಿಕಿತ್ಸೆ ಪಡೆಯಬಹುದು. ಸುಟ್ಟಗಾಯಗಳು, ಅಪಘಾತ, ಆಘಾತ ಇತ್ಯಾದಿಗಳಿಂದ ಕೂದಲು ಕಳೆದುಕೊಂಡ 23 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಂದಿಯೂ ಚಿಕಿತ್ಸೆ ಪಡೆಯಬಹುದು. ಸಂಪೂರ್ಣ ಕಾರ್ಯವಿಧಾನವನ್ನು ಸ್ಥಳೀಯ ಅನಸ್ತೇಸಿಯಾ ನೀಡುವ ಮೂಲಕ ನೋವುರಹಿತವಾಗಿ ಮಾಡಲಾಗುತ್ತದೆ. ಇದು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಕೂದಲು ತೆಗೆಯಲು ಎರಡು ಗಂಟೆಗಳು, ಆಹಾರ ವಿರಾಮಕ್ಕಾಗಿ ಒಂದು ಗಂಟೆ ಮತ್ತು ಬೋಳು ಸ್ಥಳಗಳಲ್ಲಿ ಕೂದಲನ್ನು ಇರಿಸಲು ಎರಡು ಗಂಟೆಗಳು ಕಾಲಾವಧಿ ಬೇಕಾಗುತ್ತದೆ.

ಕಸಿ ಮಾಡಿದ ಪ್ರದೇಶದಲ್ಲಿರುವ ಸಣ್ಣ ಗೀರುಗಳು 3 ದಿನಗಳಲ್ಲಿ ವಾಸಿಯಾಗುತ್ತದೆ. ಆದರೆ ರೋಗಿಯು ಹತ್ತು ದಿನಗಳವರೆಗೆ ಆ ಜಾಗವನ್ನು ಉಜ್ಜಬಾರದು. 10 ದಿನ ತಲೆ ಸ್ನಾನ ಮಾಡಬಾರದು. ಒದ್ದೆಯಾದ ಸ್ಪಾಂಜ್ ತುಂಡಿನಿಂದ ಆ ಪ್ರದೇಶವನ್ನು ತೇವಗೊಳಿಸಬಹುದು. ಹತ್ತು ದಿನಗಳ ನಂತರ ಸಾಮಾನ್ಯ ತಲೆ ಸ್ನಾನ ಮಾಡಬಹುದಾಗಿದೆ.

ನಿರ್ವಹಣೆಯು ತುಂಬಾ ಸುಲಭ ಮತ್ತು ವಿಟಮಿನ್‌ಗಳು ಸಮೃದ್ಧವಾಗಿರುವ ನೈಸರ್ಗಿಕ ನಿಯಮಿತ ಆಹಾರವನ್ನು ಸೇವಿಸಿದರೆ ಬೆಳವಣಿಗೆಗೆ ನೆರವಾಗುತ್ತದೆ. ಕಸಿ ಮಾಡಿದ ಕೂದಲಿಗೆ ಯಾವುದೇ ವಿಶೇಷ ಆಹಾರ ಅಥವಾ ಆರೈಕೆಯ ಅಗತ್ಯವಿರುವುದಿಲ್ಲ. ಈ ಪ್ರಕ್ರಿಯೆಯು 1998 ರಲ್ಲಿ ಪ್ರಾರಂಭವಾಯಿತು ಮತ್ತು 2000 ರ ನಂತರ ಸುವ್ಯವಸ್ಥಿತವಾಗಿದೆ ಮತ್ತು ಇಲ್ಲಿಯವರೆಗೆ ನಿರಂತರ ಫಲಿತಾಂಶಗಳು ದೊರೆಯುತ್ತವೆ. ಕಸಿ ಮಾಡಿದ ಕೂದಲು ಹೆಚ್ಚು ಕಾಲ ಉಳಿಯುತ್ತದೆ. ಎರಡನೇ ಕಸಿ ತಲೆಯಲ್ಲಿ ಕೂದಲಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. ಗ್ರೇಡ್ 3 ರಿಂದ ಗ್ರೇಡ್ 6 ಗೆ ಎರಡನೇ ಕಸಿ ಅಗತ್ಯವಿರುತ್ತದೆ. ಎರಡನೇ ಕಸಿ 5 ತಿಂಗಳ ಅಂತರದಲ್ಲಿ ಯಾವಾಗ ಬೇಕಿದ್ದರೂ ಮಾಡಬಹುದು.

ಕಸಿ ಮಾಡಿದ ಮೊದಲ ಒಂದು ತಿಂಗಳ ನಂತರ, ಕಸಿ ಮಾಡಿದ ಕೂದಲಿನ 80% ನಷ್ಟು ನಷ್ಟವಾಗುತ್ತದೆ ಮತ್ತು 3ನೇ ತಿಂಗಳಿನಿಂದ ಹೊಸ ಫಾಲಿಕಲ್ ಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, 6 ತಿಂಗಳ ಅಂತ್ಯದ ವೇಳೆಗೆ 50 % ಬೆಳವಣಿಗೆ ಕಂಡುಬರುತ್ತದೆ ಮತ್ತು 9 ನೇ ತಿಂಗಳ ಅಂತ್ಯದಿಂದ 12 ನೇ ತಿಂಗಳ ವೇಳೆಗೆ ಇದು ಪೂರ್ಣಗೊಳ್ಳುತ್ತದೆ. ಉದ್ದ ಕೂದಲು ಬೆಳೆಯುತ್ತದೆ.

ಕೂದಲು ಕಸಿ ನಂ.1 : ನಗರದ ಕೋರಮಂಗಲದ ಹೇರ್​ಲೈನ್ ಇಂಟರ್​ನ್ಯಾಷನಲ್​ನ ಕೂದಲು ಕಸಿ ಚಿಕಿತ್ಸಕ ಡಾ. ದಿನೇಶ್ ಜಿ.ಜಿ. ಪ್ರಕಾರ, ಕೂದಲು ಉದುರುವಿಕೆ ಸಮಸ್ಯೆಗೆ ಕೂದಲು ಕಸಿ ಮಾತ್ರವೇ ಪರಿಣಾಮಕಾರಿ ಪರಿಹಾರ ಮಾರ್ಗ. ಒಮ್ಮೆ ಕಸಿ ಆದ ಬಳಿಕ ಸಹಜವಾಗಿ ಕೂದಲು ಬೆಳೆಯುತ್ತ ಹೋಗುತ್ತದೆ ಮತ್ತು ಜೀವನ ಪರ್ಯಂತ ಇರುತ್ತದೆ. ಇಂದು ಸಾಕಷ್ಟು ಆಧುನಿಕ ಚಿಕಿತ್ಸೆ ಬಂದಿದೆ. ಶೇ.90ರಷ್ಟು ಫಲಿತಾಂಶ ನೀಡುತ್ತಿದ್ದೇವೆ. ಜನರಲ್ಲಿ ಜಾಗೃತಿ ಮೂಡಬೇಕಿದೆ. ಸ್ಪರ್ಧೆ ಸಾಕಷ್ಟು ಇದೆ. ವೈದ್ಯಕೀಯ ಚಿಕಿತ್ಸಾ ಕ್ಷೇತ್ರದಲ್ಲಿ ಕೂದಲು ಕಸಿ ಮಾತ್ರ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ ಎಂಬ ಮಾಹಿತಿ ಇದೆ. ತಲೆಯ ಎಷ್ಟು ಜಾಗದಲ್ಲಿ ಕೂದಲು ಉದುರಿದೆ ಎಂಬುದರ ಮೇಲೆ ಚಿಕಿತ್ಸೆಯ ವೆಚ್ಚ ಹಾಗೂ ಚಿಕಿತ್ಸೆಯ ಹಂತ ನಿರ್ಧಾರವಾಗುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ : ದೇಶದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಮುಖ

Last Updated : Nov 30, 2022, 9:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.