ETV Bharat / state

ಸಚಿವ ಸ್ಥಾನಕ್ಕಾಗಿ ಯಾರ ಬಾಗಿಲಿಗೂ ಹೋಗುವ ವ್ಯಕ್ತಿಯಲ್ಲ: ಹೆಚ್​ ವಿಶ್ವನಾಥ್​ - ಕೆಕೆ.ಗೆಸ್ಟ್​ಹೌಸ್​​

ನೂತನ ಸಿಎಂ ಆಗಿ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಸಚಿವ ಸಂಪುಟ ಮಾತುಕತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಮಾತನಾಡಿರುವ ಹೆಚ್​ ವಿಶ್ವನಾಥ್​, ಹಳಬರು ಹೊಸಬರನ್ನು ಮಿಕ್ಸ್ ಮಾಡಿ ಮಂತ್ರಿಮಂಡಲ ಮಾಡುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.

h-vishwanath
ಹೆಚ್​ ವಿಶ್ವನಾಥ್​
author img

By

Published : Jul 28, 2021, 12:09 PM IST

ಬೆಂಗಳೂರು: ನಾನು ಸಚಿವ ಸ್ಥಾನಕ್ಕಾಗಿ ಯಾರ ಬಾಗಿಲಿಗೂ ಹೋಗುವ ವ್ಯಕ್ತಿಯಲ್ಲ. ಹಳಬರು - ಹೊಸಬರನ್ನು ಮಿಕ್ಸ್ ಮಾಡಿ ಮಂತ್ರಿಮಂಡಲ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಕೆ. ಕೆ.ಗೆಸ್ಟ್​ಹೌಸ್​​ನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡಿದವರಿಗೆ ನೀಡುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೇಂದ್ರದಲ್ಲಿ ಮೋದಿ ಯಾವ ಫಾರ್ಮುಲಾ ಇಟ್ಟುಕೊಂಡು ಸಂಪುಟ ರಚನೆ ಮಾಡಿದ್ದಾರೋ, ಅದೇ ರೀತಿ ಮಾಡಲಿ ಎಂದಿದ್ದಾರೆ.

ಈ ಹಿಂದೆ ಸಚಿವರಾದವರು ತ್ಯಾಗ ಮಾಡಲು ರೆಡಿಯಾಗಿದ್ದರು. ಆದರೆ, ಅವರ ಮಕ್ಕಳು, ಮರಿ ಮಕ್ಕಳು, ಹೆಂಡತಿ ಬಿಡುವುದಿಲ್ಲ ಬೇಕು ಬೇಕು ಅಂತಾರೆ ಎಂದು ಸೂಚ್ಯವಾಗಿ ನುಡಿದಿದ್ದಾರೆ. ಯಡಿಯೂರಪ್ಪ ಅವರು ಸ್ವಯಂ ಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗ ಆ ಸ್ಥಾನಕ್ಕೆ ಬೊಮ್ಮಾಯಿ ಅವರನ್ನು ತಂದಿದ್ದಾರೆ.

ಸಚಿವ ಸ್ಥಾನಕ್ಕಾಗಿ ಯಾರ ಬಾಗಿಲಿಗೂ ಹೋಗುವ ವ್ಯಕ್ತಿಯಲ್ಲ: ಹೆಚ್​ ವಿಶ್ವನಾಥ್​

ಇದನ್ನು ಸ್ವಾಗತ ಮಾಡಬೇಕು. ಬೊಮ್ಮಾಯಿ ಹಲವಾರು ಖಾತೆ ನಿಭಾಯಿಸಿದ್ದಾರೆ. ಅವರಿಂದ ಒಳ್ಳೆಯ ಆಡಳಿತ ನಿರೀಕ್ಷೆ ಇದೆ. ಮೋದಿ ಅವರು ಎಲ್ಲ ಜಾತಿ, ಸಮುದಾಯಕ್ಕೆ ಅವಕಾಶ ನೀಡಿದ್ದಾರೆ‌. ಬೊಮ್ಮಾಯಿ ಸಂಪುಟದಲ್ಲಿ ಹೆಚ್ಚು ಯುವಕರಿಗೆ ಅವಕಾಶ ನೀಡಲಿ. ಸರ್ಕಾರದ ಧ್ಯೇಯ ಅಕ್ಷರ, ದಾಸೋಹ ಆಗಬೇಕು ಎಂದರು. ಸಚಿವ ಸಂಪುಟದಲ್ಲಿ ಯಾರಿಗೆಲ್ಲ ಅವಕಾಶ ನೀಡುತ್ತಾರೆ ನೋಡೋಣ. ನಾನು ಸಚಿವ ಸ್ಥಾನಕ್ಕಾಗಿ ಯಾರ ಬಾಗಿಲಿಗೂ ಹೋಗುವ ವ್ಯಕ್ತಿಯಲ್ಲ ಎಂದಿದ್ದಾರೆ.

ಓದಿ: ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಬಸವರಾಜ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.