ETV Bharat / state

ನೆರೆ ಸಂತ್ರಸ್ತರಿಗೆ ಬಿಜೆಪಿ ಸ್ಪಂದನೆ ಹೇಗಿದೆ ಎಂಬುದು ಜಗತ್ತಿಗೆ ಗೊತ್ತು.. ಕುಮಾರಸ್ವಾಮಿ ವ್ಯಂಗ್ಯ

ನೆರೆ ಹಾವಳಿಯ ಜನರಿಗೆ ಬಿಜೆಪಿ ಸರ್ಕಾರ ಯಾವ ರೀತಿ ಸ್ಪಂದಿಸಿದೆ ಅನ್ನೋದು ಜಗತ್ತಿಗೆ ಗೊತ್ತಿದೆ. ಈ ಬಗ್ಗೆಯೇ ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ
author img

By

Published : Oct 9, 2019, 4:53 PM IST

ಬೆಂಗಳೂರು: ನೆರೆಹಾವಳಿಯ ಜನರಿಗೆ ಬಿಜೆಪಿ ಸರ್ಕಾರ ಯಾವ ರೀತಿ ಸ್ಪಂದಿಸಿದೆ ಅನ್ನೋದು ಜಗತ್ತಿಗೆ ಗೊತ್ತಿದೆ. ಈ ಬಗ್ಗೆಯೇ ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಇಂದು ಶಾಸಕರು ಮತ್ತು ಪಕ್ಷದ ಮುಖಂಡರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಕುರಿತು ಇವತ್ತು ಸಭೆ ನಡೆಸುತ್ತಿದ್ದೇವೆ. ನಮ್ಮ ಸರ್ಕಾರದ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಪಕ್ಷ ಸಂಘಟನೆಗೆ ಒತ್ತು ನೀಡುವ ಕುರಿತು ಕೆಲಸ ಮಾಡಬೇಕಿದೆ. ಮೈತ್ರಿ ಸರ್ಕಾರದ ಸಾಧನೆಗಳು, ಬಿಜೆಪಿ ಸರ್ಕಾರದ ವೈಫಲ್ಯವನ್ನು ಇಟ್ಕೊಂಡು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ..

ಕೇಂದ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆ ಇಲ್ಲ:

ನೈಸರ್ಗಿಕ ವಿಕೋಪದಲ್ಲಿ ರಾಜ್ಯಗಳಿಗೆ ಇಟ್ಟಿರುವ ಪಾಲನ್ನು ಮಾತ್ರ ಕೊಡ್ತಾರೆ. ಕೆಲವೊಮ್ಮೆ ಮಾತ್ರ ಕೆಲವು ರಾಜ್ಯಗಳಿಗೆ ಹೆಚ್ಚಿನ ಹಣ ಕೊಡುತ್ತಾರೆ. ಕಳೆದ ಐದು ವರ್ಷದಲ್ಲಿ ಮಹಾರಾಷ್ಟ್ರ, ರಾಜಸ್ಥಾನಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ.ಆದರೆ, ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ಕೊಟ್ಟಿದ್ದಾರೆ.ಈಗಲೂ ಅದೇ ರೀತಿಯ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಇವತ್ತಿನ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಹೆಚ್ಚಿನ ನೆರವಿನ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.

ಸ್ವಿಸ್ ಬ್ಯಾಂಕ್ ಹಣ ಕಷ್ಟದಲ್ಲಿರುವ ಜನರಿಗೆ ಕೊಡಲಿ:

ಸ್ವಿಸ್ ಬ್ಯಾಂಕ್‌ನಿಂದ ಹಣ ತರ್ತಿದ್ದಾರೆ. ಎಲ್ಲರ ಅಕೌಂಟ್‌ಗೆ ಹಾಕೋ ಕಾಲ ಸನ್ನಿಹಿತ ಆಗಿದೆ ಅಂತಿದ್ದಾರೆ. ಆ ₹15 ಲಕ್ಷ ಹಣವನ್ನು ಎಲ್ಲರ ಅಕೌಂಟ್‌ಗೆ ಹಾಕೋದು ಬೇಡ. ಆ ಹಣವನ್ನು ವಾಪಸ್ ತಂದು ಕಷ್ಟದಲ್ಲಿರುವ ಜನರಿಗೆ ಕೊಡಲಿ. ಅದರಲ್ಲಾದರೂ ಸಕ್ಸಸ್ ಆಗಲಿ ಎಂದು ನಾನು ಕೇಂದ್ರ ಸರ್ಕಾರಕ್ಕೆ ಶುಭ ಕೋರುತ್ತೇನೆ ಎಂದು ಟಾಂಗ್ ನೀಡಿದರು.

ವಾಸ್ತವ ನೋಡಿದ್ರೆ ಹೊಸದಾಗಿ ಚುನಾವಣೆಗೆ ಹೋಗೋದು ಒಳ್ಳೇದು:

ಸಿಎಂ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ‌ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಹೇಳೋ ರೀತಿಯಲ್ಲಿ ಬಿಜೆಪಿಯಲ್ಲಿ ವಾಸ್ತವ ಇದ್ರೆ ಚುನಾವಣೆಗೆ ಹೋಗೋದು ಸೂಕ್ತ. ನಮ್ಮ ಮೈತ್ರಿ ಸರ್ಕಾರ ಇದ್ದಾಗ ಅಷ್ಟೋ, ಇಷ್ಟೋ ಕೆಲಸ ಮಾಡಿದ್ದೇವೆ. ಆದರೆ, ಯಡಿಯೂರಪ್ಪ ಬಂದ ನಂತರ ಏನು ಕೆಲಸ ಆಗ್ತಿಲ್ಲ ಎಂಬುದು ಯತ್ನಾಳ್ ಹೇಳಿಕೆಯಿಂದ ತಿಳಿಯುತ್ತಿದೆ. ಅವರ ಹೇಳಿಕೆಯ ಒಂದು ವಾಸ್ತವ ನೋಡಿದ್ರೆ ಹೊಸದಾಗಿ ಚುನಾವಣೆಗೆ ಹೋಗೋದು ಒಳ್ಳೆಯದು. ಅವಾಗ ಜನ ಯಾರನ್ನು ಬೇಕಾದರೂ ಕೈ ಹಿಡಿಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್‌ಗೆ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ:

ಅಧಿವೇಶನದಲ್ಲಿ ಕಾಂಗ್ರೆಸ್ ಜೊತೆಗೂಡಿ ಬಿಜೆಪಿ ವಿರುದ್ಧ ಹೋರಾಟ ವಿಚಾರಕ್ಕೆ ಮಾತನಾಡಿದ ಅವರು, ನನ್ನ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ಕೊಡುವ ಪ್ರಶ್ನೆಯೆ ಇಲ್ಲ. ಸದನದಲ್ಲಿ ಯಾವ ರೀತಿ ಭಾಗವಹಿಸಬೇಕು, ಜನರ ಕಷ್ಟಗಳ ಬಗ್ಗೆ ಯಾವ ರೀತಿ ಚರ್ಚೆ ಮಾಡ್ಬೇಕೋ ಆ ಕೆಲಸ ಮಾಡ್ತೇವೆ. ಅವರಿಗೆ ಬೆಂಬಲ ಕೊಟ್ಟು ಜಂಟಿಯಾಗಿ ಮಾಡ್ಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.

Intro:ಬೆಂಗಳೂರು : ನೆರೆಹಾವಳಿ ಜನರಿಗೆ ಬಿಜೆಪಿ ಸರ್ಕಾರ ಯಾವ ರೀತಿ ಸ್ಪಂದಿಸಿದೆ ಅನ್ನೋದು ಜಗತ್ತಿಗೆ ಗೊತ್ತಿದೆ. ಈ ಬಗ್ಗೆಯೇ ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.Body:ಪಕ್ಷದ ಕಚೇರಿಯಲ್ಲಿ ಇಂದು ಶಾಸಕರು ಮತ್ತು ಪಕ್ಷದ ಮುಖಂಡರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಕುರಿತು ಇವತ್ತು ಸಭೆ ನಡೆಸುತ್ತಿದ್ದೇವೆ. ನಮ್ಮ ಸರ್ಕಾರದ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಪಕ್ಷ ಸಂಘಟನೆಗೆ ಒತ್ತು ನೀಡುವ ಕುರಿತು ಕೆಲಸ ಮಾಡಬೇಕಿದೆ ಎಂದರು.
ಮೈತ್ರಿ ಸರ್ಕಾರದ ಸಾಧನೆಗಳು, ಬಿಜೆಪಿ ಸರ್ಕಾರದ ವೈಫಲ್ಯವನ್ನು ಇಟ್ಕೊಂಡು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ‌ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಹೇಳೋ ರೀತಿಯಲ್ಲಿ ಬಿಜೆಪಿಯಲ್ಲಿ ವಾಸ್ತವ ಇದ್ರೆ ಚುನಾವಣೆಗೆ ಹೋಗೋದು ಸೂಕ್ತ. ನಮ್ಮ ಮೈತ್ರಿ ಸರ್ಕಾರ ಇದ್ದಾಗ ಅಷ್ಟೋ, ಇಷ್ಟೋ ಕೆಲಸ ಮಾಡಿದ್ದೇವೆ. ಆದರೆ ಯಡಿಯೂರಪ್ಪ ಬಂದ ನಂತರ ಏನು ಕೆಲಸ ಆಗ್ತಿಲ್ಲ ಎಂಬುದು ಯತ್ನಾಳ್ ಹೇಳಿಕೆಯಿಂದ ತಿಳಿಯುತ್ತಿದೆ. ಅವರ ಹೇಳಿಕೆಯ ಒಂದು ವಾಸ್ತವ ನೋಡಿದ್ರೆ ಹೊಸದಾಗಿ ಚುನಾವಣೆಗೆ ಹೋಗೋದು ಒಳ್ಳೆಯದು. ಅವಾಗ ಜನ ಯಾರನ್ನು ಬೇಕಾದರೂ ಕೈ ಹಿಡಿಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಉಪ ಚುನಾವಣೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಸಾರ್ವತ್ರಿಕ ಚು‌ನಾವಣೆಯೇ ಬರಬಹುದು ಎಂದು ಕುಮಾರಸ್ವಾಮಿ ಅವರು ಮಧ್ಯಂತರ ಚುನಾವಣೆಯ ಸುಳಿವು ಕೊಟ್ಟರು.
ನೈಸರ್ಗಿಕ ವಿಕೋಪದಲ್ಲಿ ರಾಜ್ಯಗಳಿಗೆ ಇಟ್ಟಿರುವ ಪಾಲನ್ನು ಮಾತ್ರ ಕೊಡ್ತಾರೆ. ಕೆಲವೊಮ್ಮೆ ಮಾತ್ರ ಕೆಲವು ರಾಜ್ಯಗಳಿಗೆ ಹೆಚ್ಚಿನ ಹಣ ಕೊಡುತ್ತಾರೆ. ಕಳೆದ ಐದು ವರ್ಷದಲ್ಲಿ ಮಹಾರಾಷ್ಟ್ರ, ರಾಜಸ್ಥಾನಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ.
ಆದರೆ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ಕೊಟ್ಟಿದ್ದಾರೆ.
ಈಗಲೂ ಅದೇ ರೀತಿಯ ವಾತಾವರಣ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರದ ಇವತ್ತಿನ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಹೆಚ್ಚಿನ ನೆರವಿನ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.
ಸ್ವೀಸ್ ಬ್ಯಾಂಕ್ ನಿಂದ ಹಣ ತರ್ತಿದ್ದಾರೆ, ಎಲ್ಲರ ಅಕೌಂಟ್ ಗೆ ಹಾಕೋ ಕಾಲ ಸನ್ನಿಹಿತ ಆಗಿದೆ ಅಂತಿದ್ದಾರೆ. ಆ 15 ಲಕ್ಷ ಹಣವನ್ನು ಎಲ್ಲರ ಅಕೌಂಟ್ ಗೆ ಹಾಕೋದು ಬೇಡ. ಆ ಹಣವನ್ನು ವಾಪಸ್ ತಂದು ಕಷ್ಟದಲ್ಲಿರುವ ಜನರಿಗೆ ಕೊಡಲಿ. ಅದರಲ್ಲಾದರೂ ಸಕ್ಸಸ್ ಆಗಲಿ ಎಂದು ನಾನು ಕೇಂದ್ರ ಸರ್ಕಾರಕ್ಕೆ ಶುಭ ಕೋರುತ್ತೇನೆ ಎಂದು ಟಾಂಗ್ ನೀಡಿದರು.
ಮಂಡ್ಯ ಬಿಜೆಪಿ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಸಿದ ಕುಮಾರಸ್ವಾಮಿ ಅವರು, ಅದು ಅವರ ವ್ಯಯಕ್ತಿಕ ಅಭಿಪ್ರಾಯ. ಅವರು ಏನು ನಿರ್ಧಾರ ಮಾಡಿಕೊಳ್ತಾರೆ. ಅದರ‌ ಬಗ್ಗೆ ‌ನಾನು ಯಾಕೆ ಮಾತನಾಡಲಿ ಎಂದರು.
ಅಧಿವೇಶನದಲ್ಲಿ ಕಾಂಗ್ರೆಸ್ ಜೊತೆಗೂಡಿ ಬಿಜೆಪಿ ವಿರುದ್ಧ ಹೋರಾಟ ವಿಚಾರಕ್ಕೆ ಮಾತನಾಡಿದ ಅವರು, ನನ್ನ ಪಕ್ಷ ಕಾಂಗ್ರೆಸ್ ಗೆ ಬೆಂಬಲ ಕೊಡುವ ಪ್ರಶ್ನೆಯೆ ಇಲ್ಲ.
ಸದನದಲ್ಲಿ ಯಾವ ರೀತಿ ಭಾಗವಹಿಸಬೇಕು, ಜನರ ಕಷ್ಟಗಳ ಬಗ್ಗೆ ಯಾವ ರೀತಿ ಚರ್ಚೆ ಮಾಡ್ಬೇಕೋ ಆ ಕೆಲಸ ಮಾಡ್ತೇವೆ.
ಅವರಿಗೆ ಬೆಂಬಲ ಕೊಟ್ಟು ಜಂಟಿಯಾಗಿ ಮಾಡ್ಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನಮ್ಮಗಿಂತ ಹೆಚ್ಚಿನ ಶಕ್ತಿ ಇದೆ, ಹೆಚ್ಚಿನ ಸಂಖ್ಯೆ ಸಹ ಇದೆ. ನಮ್ಮ ಶಕ್ತಿಯಿಂದ ಅವರು ಹೋರಾಟ ಮಾಡ್ಬೇಕಿಲ್ಲ. ನಮ್ಮ ಕೆಲಸ ನಾವು ಮಾಡ್ತೀವಿ, ಕಾಂಗ್ರೆಸ್‌ನವರು ಅವರ ಕೆಲಸ ಅವರು ಮಾಡ್ತಾರೆ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.