ಬೆಂಗಳೂರು: ರಾಮನಗರ ಜಿಲ್ಲೆ ವ್ಯಾಪ್ತಿಯ ರೇಷ್ಮೆ ರೀಲರ್‌ಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಹೆಚ್ .ಡಿ. ಕುಮಾರಸ್ವಾಮಿ ಅವರು ವಿಡಿಯೋ ಸಂವಾದ ನಡೆಸಿದರು.
ತಮ್ಮ ನಿವಾಸದಿಂದಲೇ ಇಂದು ಕುಮಾರಸ್ವಾಮಿ ಅವರು, ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ರೇಷ್ಮೆ ರೀಲರ್‌ಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸರ್ಕಾರ ತಮ್ಮ ಕಡೆ ನೋಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ರೀಲರ್‌ಗಳ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ, ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ರೇಷ್ಮೆ ರೀಲರ್‌ಗಳಾದ ಮುಹೀಬ್ ಪಾಷಾ, ಡಿ.ಆರ್. ರಮೇಶ್, ನಾಸೀರ್ ಬೇಗ್, ರಮೇಶ್, ಫರ್ವೀಜ್, ಮೌಸೀನ್ ಪಾಷಾ ಸೇರಿದಂತೆ ಹಲವರು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.