ETV Bharat / state

ಬೆಂಗಳೂರು: ಪ್ರಿಯತಮೆ ಕೈಕೊಟ್ಟಳು ಅಂತ ನೊಂದ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣು - bengaluru Gym trainer suicide

ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ ಯುವಕನೋರ್ವ ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

gym-trainer-committed-suicide-in-bengaluru
ಪ್ರಿಯತಮೆ ಕೈಕೊಟ್ಟಳು ಅಂತ ನೊಂದ ಜಿಮ್ ಟ್ರೈನರ್ ಆತ್ಮಹತ್ಯೆಗೆ ಶರಣು
author img

By

Published : Oct 24, 2021, 2:25 PM IST

Updated : Oct 24, 2021, 2:45 PM IST

ಬೆಂಗಳೂರು: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ನೊಂದ ಯುವಕನೋರ್ವ ವಿಡಿಯೋ ಮೂಲಕ ನೋವು ತೋಡಿಕೊಂಡು, ಬಳಿಕ ನೇಣಿಗೆ ಶರಣಾದ ಘಟನೆ ಇಲ್ಲಿನ ರಾಜರಾಜೇಶ್ವರಿನಗರದ ಮಾರಪ್ಪ ಲೇಔಟ್​​ನಲ್ಲಿ ಶನಿವಾರ ರಾತ್ರಿ ನಡೆದಿದೆ.

29 ವರ್ಷದ ಕಾರ್ತಿಕ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಈತ ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ. ಆದರೆ ಇತ್ತೀಚೆಗೆ ಯುವತಿಯು ದೂರವಾಗಿದ್ದರಿಂದ ಕಾರ್ತಿಕ್​ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.

ಮದುವೆಗೆ ತಯಾರಿ:

ಪ್ರೇಮ ವೈಫಲ್ಯದ ಬಗ್ಗೆ ಕಾರ್ತಿಕ್ ಆಪ್ತರ ಬಳಿ ಹೇಳಿಕೊಂಡಿದ್ದು, ಈ ವಿಚಾರ ತಿಳಿದ ಪೋಷಕರು ಮಗನಿಗೆ ಮದುವೆ ಮಾಡಲು ಮುಂದಾಗಿದ್ದರು. ಹೀಗಾಗಿ ಇಂದು ಕಾರ್ತಿಕ್​ಗೆ​ ಹೆಣ್ಣು ನೋಡುವ ಶಾಸ್ತ್ರಕ್ಕೆ ಪೋಷಕರು ತೆರಳಬೇಕಿತ್ತು. ಅದರೆ ನಿನ್ನೆ ರಾತ್ರಿ ಮನೆಯ ಶೀಟ್ ಹ್ಯಾಂಗರ್‌ಗೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮುನ್ನ ಕಾರ್ತಿಕ್​​ ಪ್ರೇಮ ವೈಫಲ್ಯದ ಬಗ್ಗೆ ತನ್ನ ಮೊಬೈಲ್​ನಲ್ಲಿ ವಿಡಿಯೋ ಸೆರೆಹಿಡಿದು ನೋವು ತೋಡಿಕೊಂಡಿದ್ದಾನೆ.

gym-trainer-committed-suicide-in-bengaluru
ಜಿಮ್ ಟ್ರೈನರ್ ಕಾರ್ತಿಕ್​

ಮಾಹಿತಿ ತಿಳಿದ ರಾಜರಾಜೇಶ್ವರಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಸದ್ಯ ಕಾರ್ತಿಕ್ ಮೊಬೈಲ್‌ ಜಪ್ತಿ ಮಾಡಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಮೂವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಜಿಗಿದ ತಾಯಿ; ಮೂವರು ಸಾವು, ಓರ್ವ ಬಾಲಕಿ ರಕ್ಷಣೆ

Last Updated : Oct 24, 2021, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.