ETV Bharat / state

ಗುಜರಾತ್ ಫಲಿತಾಂಶ ನೋಡಿ ರಾಜ್ಯದಲ್ಲಿ 12 ಶಾಸಕರು ಬಿಜೆಪಿ ಸೇರಲಿದ್ದಾರೆ: ಸಚಿವ ಆರ್​ ಅಶೋಕ್ - ETV Bharath Kannada

ಕಾಂಗ್ರೆಸ್​ನ 10 ರಿಂದ 12 ಜನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಗುಜರಾತ್​ ಫಲಿತಾಂಶ ಕರ್ನಾಟಕ್ಕೆ ನೆರವಾಗಲಿದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.

Etv Bharat
ಸಚಿವ ಆರ್.ಅಶೋಕ್ ಮತ್ತು ಕೆ.ಗೋಪಾಲಯ್ಯ
author img

By

Published : Dec 8, 2022, 1:26 PM IST

ಬೆಂಗಳೂರು: ಗುಜರಾತ್ ಫಲಿತಾಂಶ ನೋಡಿ ರಾಜ್ಯದಲ್ಲಿ ಸುಮಾರು 10 ರಿಂದ 12 ಶಾಸಕರು ಬಿಜೆಪಿ ಸೇರಲಿದ್ದಾರೆ. ನಾಯಕತ್ವ ಇಲ್ಲದ ಕಾಂಗ್ರೆಸ್ ಜೊತೆ ಹೋದರೆ ಭವಿಷ್ಯ ಏನು ಎಂಬ ಆತಂಕ ಕೆಲವರಲ್ಲಿ ಇದೆ. ಕೆಲ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಸಾಕಷ್ಟು ಜನರು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ. ಸಾಕಷ್ಟು ಜನರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ನಾಯಕತ್ವ ಇಲ್ಲದ ಕಾಂಗ್ರೆಸ್ ಜೊತೆ ಹೋದರೆ ಭವಿಷ್ಯ ಏನು ಎಂಬ ಆತಂಕ ಕೆಲವರಲ್ಲಿ ಇದೆ. 10 ರಿಂದ12 ಜನ‌ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಜೊತೆ ಮಾತನಾಡುತ್ತಿದ್ದೇವೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

ಗುಜರಾತ್ ಫಲಿತಾಂಶ ನೋಡಿ ರಾಜ್ಯದಲ್ಲಿ 12 ಶಾಸಕರು ಬಿಜೆಪಿ ಸೇರಲಿದ್ದಾರೆ

ಕಾಂಗ್ರೆಸ್ ಸೋಲಿಸಲು ಆಮ್ ಆದ್ಮಿ ಪಕ್ಷ ಸಾಕು: ಬಿಜೆಪಿ ಪರವಾದ ಫಲಿತಾಂಶ ಗುಜರಾತ್​ನಲ್ಲಿದೆ. ಇವೆಲ್ಲವೂ ಕರ್ನಾಟಕದ ಮುಂದಿನ ಚುನಾವಣೆಗೆ ದಾರಿದೀಪವಾಗಿದೆ. ದೇಶದ ಜನರು ಕಾಂಗ್ರೆಸ್ ತಿರಸ್ಕಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಇದ್ದ ಕಡೆ ಆಪ್ ಅವರ ಸ್ಥಳ ತುಂಬುತ್ತಿದೆ. ಕಾಂಗ್ರೆಸ್​ಗೆ ದೇಶದಲ್ಲಿ ಭವಿಷ್ಯ ಇಲ್ಲ. ಕಾಂಗ್ರೆಸ್ ಸೋಲಿಸಲು ಆಮ್ ಆದ್ಮಿ ಪಕ್ಷ ಸಾಕು ಎಂಬ ಸಂದೇಶ ಈ ಚುನಾವಣೆಯಲ್ಲಿ ಸಿಕ್ಕಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ವೋಟ್ ಶೇರಿಂಗ್ ಅಪ್‌ ಕಡೆ ಶಿಫ್ಟ್ ಆಗುತ್ತಿದೆ. ಕರ್ನಾಟಕದಲ್ಲಿ ಇದೇ ಸ್ಥಿತಿ ನಿರ್ಮಾಣ ಆಗಲಿದೆ. ಆಪ್ 4% ಓಟ್ ಪಡೆದುಕೊಂಡರೆ ಕಾಂಗ್ರೆಸ್ ಧೂಳಿಪಟವಾಗಲಿದೆ. ಕಾಂಗ್ರೆಸ್ ಅವರು ಗಂಟುಮೂಟೆ ಕಟ್ಟಿ ಮನೆಗೆ ಹೋಗಲು ತಯಾರು ಆಗಿರಬೇಕು. ಹಳೆ ಸಿದ್ಧಾಂತ ಹಳೆ ಸ್ಟೈಲು ಮುಗಿದ ಅಧ್ಯಾಯ. ಎರಡು ಚುನಾವಣೆ ಕಾಂಗ್ರೆಸ್ ಬಾಗಿಲನ್ನು ಮುಚ್ಚಿದೆ ಎಂದು ಹೇಳಿದರು.

ಕರ್ನಾಟಕ ಮಾಡೆಲ್ ತರುತ್ತೇವೆ: ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಸರ್ವೇ ನೋಡಿ ಟಿಕೆಟ್ ಹಂಚಿಕೆ ಮಾಡಲಾಗುತ್ತೆ. ಯಾರು ಗೆಲ್ಲಲ್ಲ ಎಂಬುದನ್ನು ಕೇಂದ್ರ ನಾಯಕರು ಗಮನ ಹರಿಸುತ್ತಾರೆ. ಗೆಲುವಿಗೆ ಏನು ಸ್ಟ್ರಾಟಜಿ ಮಾಡಬೇಕು ಅದನ್ನು ಜನವರಿಯಿಂದ ಮಾಡಲಾಗುತ್ತದೆ. ಗುಜರಾತ್ ಮಾದರಿ ಅಂತಲ್ಲ, ಕರ್ನಾಟಕ ಮಾಡೆಲ್​ನಲ್ಲಿ ಗೆಲ್ಲಲು ತೀರ್ಮಾನ ಕೈಗೊಳ್ಳಲಾಗುವುದು. ಎರಡನೇ ಸರ್ವೇ ವರದಿ ಆಧಾರದಲ್ಲಿ ಟಿಕೆಟ್ ಹಂಚಿಕೆ ನಿರ್ಧಾರ ಮಾಡಲಾಗುತ್ತದೆ ಎಂದರು.

ಭಾರತ್ ಚೋಡೋ ಸಾಬೀತು ಆಗಿದೆ: ಗುಜರಾತ್ ಫಲಿತಾಂಶ ರಾಜ್ಯದಲ್ಲಿನ ಪರಿಣಾಮ ಬೀರಲ್ಲ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಟೋಪಿ ಹಾಕೋದರಲ್ಲಿ ಎಕ್ಸ್ ಪರ್ಟ್. ಸೋಲನ್ನು ಒಪ್ಪುವ ಮಾನಸಿಕ ಧೈರ್ಯವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಅವರ ರಾಷ್ಟ್ರೀಯ ಅಧ್ಯಕ್ಷರೇ ಗುಜರಾತ್ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿಲ್ಲ. ಕರ್ನಾಟಕ ಚುನಾವಣೆಯಲ್ಲೂ ಭಾಗಿಯಾಗ್ತಾರಾ ಗೊತ್ತಿಲ್ಲ. ಭಾರತ್ ಜೋಡೋ ಭಾರತ್ ಚೋಡೋ ಆಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲೂ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ

ರಾಜ್ಯದಲ್ಲೂ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಗುಜರಾತಿನ ಜನತೆ ಭಾರತೀಯ ಜನತಾ ಪಾರ್ಟಿಯನ್ನು ಒಪ್ಪಿಕೊಂಡಿದ್ದಾರೆ. ನಿರೀಕ್ಷೆಗೂ ಮೀರಿ ಗುಜರಾತ್ ಜನತೆ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಅಬಕಾರಿ ಸಚಿವರು ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಮಾಚಲ ಪ್ರದೇಶದಲ್ಲಿಯೂ ಸಹ ನಾವೇ ಅಧಿಕಾರವನ್ನು ನಡೆಸುತ್ತಿದ್ದೇವೆ. ಎರಡು ರಾಜ್ಯದಲ್ಲಿಯೂ ಸಹ ನಮ್ಮ ಪಕ್ಷ ಬರುತ್ತದೆ ಎಂದು ಹೇಳಿದ್ದೆವು ಇಂದು ಜನರು ತೀರ್ಪನ್ನು ಕೊಟ್ಟಿದಾರೆ ಇದನ್ನು ವಿರೋಧ ಪಕ್ಷಗಳು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ: ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.