ETV Bharat / state

ಕೈಗಾರಿಕಾ ಉದ್ದೇಶಕ್ಕಾಗಿ ಕೃಷಿ ಭೂಮಿ ಖರೀದಿಸುತ್ತೀರಾ...? ಹೀಗಿದೆ ಭೂ ಪರಿವರ್ತನಾ ಮಾರ್ಗಸೂಚಿ - ಬೆಂಗಳೂರು

ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಕೈಗಾರಿಕೆ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನ ರೈತರಿಂದ ಖರೀದಿಸುವ ಅನುಮೋದಿತ ಪ್ರಸ್ತಾವನೆಗಳ ಭೂ ಪರಿವರ್ತನೆಗೆ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಅವುಗಳ ಸಂಪೂರ್ಣ ವರದಿ ನಿಮಗಾಗಿ

Landforms
ಕೃಷಿ ಭೂಮಿ
author img

By

Published : Jun 17, 2020, 1:57 PM IST

ಬೆಂಗಳೂರು: ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಕೈಗಾರಿಕೆ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ರೈತರಿಂದ ಖರೀದಿಸುವ ಅನುಮೋದಿತ ಪ್ರಸ್ತಾವನೆಗಳ ಭೂ ಪರಿವರ್ತನೆಗೆ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಕೈಗಾರಿಕೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಕೈಗಾರಿಕೆಗಳನ್ನು ಶೀಘ್ರವಾಗಿ ಸ್ಥಾಪಿಸುವ ಉದ್ದೇಶ ಮತ್ತು ಸರಳೀಕರಣ ಮಾಡುವ ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 109(1)(b) ಹಾಗೂ ಅದೇ ಕಾಯ್ದೆಯ ಕಲಂ 109(2)ರ ಉಲ್ಲೇಖಿತ ಅಧಿಸೂಚನೆಯಲ್ಲಿ ತಿದ್ದುಪಡಿ ತರಲಾಗಿದೆ. ಇದರನ್ವಯ ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ/ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗಳು ಅನುಮೋದಿಸಿದ ನಂತರ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 63, 79ಎ,79ಬಿ ಹಾಗೂ 80ರಿಂದ ವಿನಾಯಿತಿ ದೊರೆಯಲಿದೆ.

Guidelines for Landforms
ಭೂ ಪರಿವರ್ತನಾ ಮಾರ್ಗಸೂಚಿ ಪ್ರತಿ

ಈ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿ:

  • ಕೃಷಿ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 109 ರಡಿ ಖರೀದಿಸಲು ಇಚ್ಚಿಸುವ ಕೈಗಾರಿಕೋದ್ಯಮಿಗಳು ಕರ್ನಾಟಕ ಉದ್ಯೋಗ ಮಿತ್ರ ವೆಬ್​ ಪೋರ್ಟಲ್​ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
  • ಕೈಗಾರಿಕೋದ್ಯಮಿಗಳು ಇನ್ವೆಸ್ಟ್​ಮೆಂಟ್​ ಮೆಮೊರಾಂಡಮ್​ (Investment Memorandum)ನಲ್ಲಿ ಕೋರಿಕೆ ಸಲ್ಲಿಸಲಾಗಿರುವ ಜಮೀನಿನ ದಾಖಲೆ/ವಿವರದೊಂದಿಗೆ ಆನ್‌ಲೈನ್ ಮೂಲಕ KUM ಪೋರ್ಟಲ್​ನಿಂದ ಸಂಬಂಧಪಟ್ಟ ಜಿಲ್ಲಾಧಿಕಾರಿ ಸದರಿ ಜಮೀನುಗಳ ವಾಸ್ತವಾಂಶದ ಬಗ್ಗೆ ವರದಿ ಹಾಗೂ ನಿಯಮಾನುಸಾರ ಭೂ ಪರಿವರ್ತನಾ ಶುಲ್ಕ ನಿಗದಿ ಪಡಿಸಿ ನೀಡಲು ಕರ್ನಾಟಕ ಉದ್ಯೋಗ ಮಿತ್ರಕ್ಕೆ ಕಳುಹಿಸತಕ್ಕದ್ದು. ಸದರಿ ವರದಿಯನ್ನು 15 ದಿನಗಳೊಳಗೆ ಜಿಲ್ಲಾಧಿಕಾರಿಗಳು ನೀಡಬೇಕು.
  • ಜಮೀನುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಪಡೆದ ನಂತರ ಅಥವಾ ನಿಗದಿತ ಅವಧಿಯೊಳಗೆ ಮಾಹಿತಿಯು ಬರದಿದ್ದಲ್ಲಿ, KUM ಪೋರ್ಟಲ್​ನಲ್ಲಿರುವ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಲ್ಯಾಂಡ್ ಆಡಿಟ್ ಕಮಿಟಿ ಮುಂದೆ ಮಂಡಿಸಬೇಕು.
  • ಲ್ಯಾಂಡ್ ಆಡಿಟ್ ಕಮಿಟಿ ಅನುಮೋದಿಸಿದ ಪ್ರಸ್ತಾವನೆಯನ್ನು ಕರ್ನಾಟಕ ಉದ್ಯೋಗ ಮಿತ್ರ ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಅಥವಾ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಮುಂದೆ ಮಂಡಿಸಬೇಕು. -ಎಸ್.ಎಲ್.ಎಸ್.ಡಬ್ಲ್ಯೂ.ಸಿ.ಸಿ/ ಎಸ್.ಹೆಚ್.ಎಲ್.ಸಿ.ಸಿ ಸಮಿತಿಗಳಿಂದ ಅನುಮೋದನೆಗೊಂಡ ಪ್ರಸ್ತಾವನೆಗಳಿಗೆ ಹೊರಡಿಸಲಾಗುವ ಸರ್ಕಾರಿ ಆದೇಶ ಅಥವಾ ಆಯುಕ್ತರು, ಕೈಗಾರಿಕಾಭಿವೃದ್ಧಿ ಅವರು ಹೊರಡಿಸಲಾಗುವ ಕಚೇರಿ ಆದೇಶಗಳು ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961ರ ಕಲಂ 109 ರಡಿ ನೀಡುವ ಆದೇಶ ವಾಗಿರುತ್ತದೆ.
  • ಈ ಆದೇಶದ ಆಧಾರದ ಮೇಲೆ ಉಪನೋಂದಣಾಧಿಕಾರಿಗಳು ಭೂಮಿಯನ್ನು ನೋಂದಣಿ ಮಾಡಬೇಕು. ಈ ಸಂಬಂಧ ನೋಂದಣಿ ದಿನಾಂಕ ಗೊತ್ತುಪಡಿಸಲು ಹಾಗೂ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕವನ್ನು KUM ಪೋರ್ಟಲ್​ನಲ್ಲಿ ನಿರ್ವಹಿಸಲು ಅನುವಾಗಲು ಕಾವೇರಿ ಪೋರ್ಟಲ್​ನ ಜೊತೆ ಸಂಯೋಜನೆ ಮಾಡಬೇಕು.
  • ಈ ರೀತಿ ಕಲಂ 109 ರ ಮುಖಾಂತರ ಅನುಮೋದನೆಗೊಂಡ ಜಮೀನುಗಳನ್ನು ಕೈಗಾರಿಕೋದ್ಯಮಿಗಳು ನಿಯಮಾನುಸಾರ ಸಂಬಂಧಪಟ್ಟವರಿಂದ ಖರೀದಿಸಿದ ಮೇಲೆ ಕಂದಾಯ ಇಲಾಖೆಯು ನಿಯಮಾನುಸಾರ ಭೂಮಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಹಕ್ಕು ಬದಲಾವಣೆ [Mutation] ಮಾಡಬೇಕು.
  • ಹಕ್ಕು ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಸಂಬಂಧಿಸಿದ ಜಮೀನಿಗೆ ತಗಲುವ ಭೂ ಪರಿವರ್ತನಾ ಶುಲ್ಕ ಪಾವತಿಸುವಂತೆ ಸದರಿ ಕಂಪನಿಗೆ ಆನ್‌ಲೈನ್ ಪೇಮೆಂಟ್ ಡಿಮ್ಯಾಂಡ್ ನೋಟ್ ಆನ್‌ಲೈನ್ ಮೂಲಕ ಕೂಡಲೇ ಜನರೇಟ್ ಮಾಡಬೇಕು ಹಾಗೂ ಸದರಿ ವಿವರವನ್ನು KUM Portalನ ಮುಖೇನ ಉದ್ದಿಮೆದಾರರು ಪಡೆದುಕೊಂಡು, ಸದರಿ ಶುಲ್ಕವನ್ನು KUM Portal ನಲ್ಲಿ ಪಾವತಿಸಬೇಕು.
  • ಅಂತಿಮವಾಗಿ ಸಂಬಂಧಿಸಿದ ಕಂಪನಿಯ ಭೂ ಪರಿವರ್ತನಾ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿದ ಕೂಡಲೇ ಡಿಜಿಟಲ್ ಸಹಿ ಹಾಕಲ್ಪಟ್ಟ ಭೂ ಪರಿವರ್ತನೆ ಆದೇಶವನ್ನು ಭೂಮಿ ಆನ್ಲೈನ್ ಪೋರ್ಟಲ್ ಮೂಲಕ ಹೊರಡಿಸಬೇಕು

ಈ ಮಾರ್ಗಸೂಚಿಗಳ ಹಿನ್ನಲೆಯಲ್ಲಿ ಭೂಮಿ ತಂತ್ರಾಂಶ, ಕಾವೇರಿ ತಂತ್ರಾಂಶ ಹಾಗೂ ಕರ್ನಾಟಕ ಉದ್ಯೋಗ ಮಿತ್ರ ತಂತ್ರಾಂಶಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.