ETV Bharat / state

Guarantee scheme: ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಅಂತಲೇ ನಾವು ಜನರ ಅಕೌಂಟ್​ಗೆ ದುಡ್ಡು ಹಾಕ್ತಿದ್ದೇವೆ: ಎಂ ಬಿ ಪಾಟೀಲ್​ - ಬಿಜೆಪಿ ಸರ್ಕಾರದ ಹಗರಣ

ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಎಸ್​ಐಟಿ ತನಿಖೆ ಬಗ್ಗೆ ಕಾನೂನು ಸಚಿವರೊಂದಿಗೆ ಚರ್ಚೆ ಮಾಡ್ತಿದ್ದೇವೆ. ನೀರಾವರಿ ಕೋವಿಡ್ ಸೇರಿ ಎಲ್ಲ ಹಗರಣಗಳ ತನಿಖೆ ಆಗುತ್ತೆ. ನಾವು ಗ್ಯಾರಂಟಿ ಕೊಡ್ತೀವಿ, ಎಲ್ಲಾ ಹಗರಣ ತನಿಖೆ ಆಗುತ್ತೆ: ಸಚಿವ ಎಂ ಬಿ ಪಾಟೀಲ್​

Minister MB Patil
ಸಚಿವ ಎಂ ಬಿ ಪಾಟೀಲ್​
author img

By

Published : Jun 29, 2023, 5:24 PM IST

ಬೆಂಗಳೂರು: ಬಿಜೆಪಿಯವರನ್ನು ಜನ ತಿರಸ್ಕಾರ ಮಾಡಿದ್ದಾರೆ. ಜನ ಶಿಕ್ಷೆ ಕೊಟ್ಟಿದ್ದಾರೆ, ಪಾಠ ಕಲಿಸಿದ್ದಾರೆ ಎಂದು ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಒಂದೇ ಒಂದು ಮನೆ ಕಟ್ಟಿಲ್ಲ. ಅವರಿಗೆ ಈಗ ಕೆಲಸ ಇಲ್ಲ ಹೀಗಾಗಿ ಟೀಕೆ ಮಾಡ್ತಿದ್ದಾರೆ. ಮೊದಲು ಅಕ್ಕಿ ಕೊಡ್ತೀವಿ ಅಂತ ಹೇಳಿ ಮೋಸ ಮಾಡಿದರು. ಅಕ್ಕಿಯನ್ನು ಯಾವ ಬೆಲೆಯಲ್ಲಿ ತೆಗೆದುಕೊಳ್ತೀವಿ, ಆ ದುಡ್ಡನ್ನು ನಾವು ಕೊಡ್ತೀವಿ ಎಂದರು.

ಇದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅಕ್ಕಿ ಕೊಡಲಾಗದಿದ್ರೆ ಹಣ ಕೊಡಿ ಅಂತಿದ್ರು. ಈಗ ಹಣ ಕೊಟ್ಟರೆ ಅಕ್ಕಿ ಕೊಡಿ ಅಂತಿದ್ದಾರೆ. ಛತ್ತೀಸಗಢದವರು ಒಂದೇ ತಿಂಗಳಿಗೆ ಅಕ್ಕಿ ಕೊಡ್ತೀವಿ ಅಂದ್ರು. ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಅಂತಲೇ ನಾವು ಜನರ ಅಕೌಂಟ್ ಗೆ ದುಡ್ಡು ಹಾಕ್ತಿದ್ದೇವೆ. ಜನರಿಗೆ ತೊಂದರೆ ಇಲ್ಲ, ಬಿಜೆಪಿಯವರಿಗೆ ತೊಂದರೆ ಅಷ್ಟೇ ಎಂದು ಎಂಬಿಪಿ ವ್ಯಂಗ್ಯವಾಡಿದರು.

ಜನ ಬಿಜೆಪಿಯವರ ನಾಟಕವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಜನರು ಖುಷಿಯಾಗಿದ್ದಾರೆ, ಬಿಜೆಪಿಯವರಿಗೆ ಕೆಲಸ ಇಲ್ಲ ಅಷ್ಟೇ. ನಾವು ಬಿಜೆಪಿಯಿಂದ ಮೋಸ ಹೋದ್ವಿ, ಅದಕ್ಕಾಗಿ ನಾವು ಪರ್ಯಾಯ ಮಾಡಿದ್ದೇವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಹಣ ಹಾಕಿ ಅಂದ್ರು. ಈಗ ಪುಂಗಿ ಊದುತ್ತೀರಾ? ಕೇಂದ್ರ ಸರ್ಕಾರ ಮೋಸ ಮಾಡಿದ್ದಕ್ಕೆ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಜನ ಖುಷಿಯಾಗಿದ್ದಾರೆ ಎಂದರು.

ಬಿಜೆಪಿಯವರು ಬ್ಲ್ಯಾಕ್ ಮಾರ್ಕೆಟರ್ಸ್: ಕೇಂದ್ರ ಸರ್ಕಾರ ಮೋಸ ಮಾಡಿ, ಬಡವರ ಅನ್ನದಲ್ಲಿ ರಾಜಕೀಯ ಮಾಡಿದ್ರು. ಅದಕ್ಕೆ ಅನಿವಾರ್ಯವಾಗಿ ಹಣ ಕೊಡ್ತಿದ್ದೀವಿ. ಬಿಜೆಪಿಯವರು ಬ್ಲ್ಯಾಕ್ ಮಾರ್ಕೆಟರ್ಸ್. ಕೆಜಿ ಅಕ್ಕಿ 60 ರೂಪಾಯಿ ಎಂದ್ರೆ ಇವ್ರು ಬ್ಲ್ಯಾಕ್ ಮಾರ್ಕೆಟರ್ಸ್. ಬಿಜೆಪಿಯವರು ಅಕ್ಕಿಯನ್ನು ಶೇಖರಿಸಿಟ್ಟಿರಬಹುದು ಎಂದು ಎಂ ಬಿ ಪಾಟೀಲ್​ ಹರಿಹಾಯ್ದರು.

ಬಿಜೆಪಿಯವರನ್ನು ಜನ ತಿರಸ್ಕಾರ ಮಾಡಿದ್ದಾರೆ. ಸರಿಯಾದ ಪಾಠ ಕಲಿಸಿದ್ದಾರೆ, ಶಿಕ್ಷೆ ಕೊಟ್ಟಿದ್ದಾರೆ. 40% ಕಮಿಷನ್ ಹೊಡೆಯೋದು ಬಿಟ್ಟು ಬೇರೇನೂ ಮಾಡಿಲ್ಲ. ಈಗ ಅವರಿಗೆ ಕೆಲಸ ಇಲ್ಲ. ಅಕ್ಕಿ ಇದ್ರೂ ಕೇಂದ್ರ ಕೊಡ್ಲಿಲ್ಲ. ಅದಕ್ಕೆ ಪ್ರತಿಯೊಬ್ಬರಿಗೆ 170 ರೂ. ಕೊಡ್ತಿದ್ದೀವಿ. ಈಗ ನಾವು ಹಣವನ್ನೇ ಕೊಡ್ತಿದ್ದೀವಿ. ರಾಗಿ, ಜೋಳ ಯಾವುದು ಬೇಕೋ ಅದನ್ನ ತೆಗೆದುಕೊಳ್ತಾರೆ ಎಂದು ಸಚಿವರು ವಿವರಿಸಿದರು.

ಎಂ ಬಿ‌ ಪಾಟೀಲ್ ಫ್ರಾಡ್ ಅಂತಾ ಹೇಳಕ್ಕಾಗುತ್ತಾ?: ಯತೀಂದ್ರ ಹೆಸರು ಯಾಕೆ ತರ್ತೀರಿ. ಅವ್ರ ಮೇಲೆ ಯಾಕೆ ಗೂಬೆ ಕೂರಿಸೋದು. ಪ್ರೂವ್ ಮಾಡಲಿ ಅದನ್ನು. ಯತೀಂದ್ರ ಎಂಎಲ್ ಎ ಆಗಿದ್ದಾರಾ? ನೀವು ಹೋದ್ರೂ, ಅವ್ರು ಹೋದ್ರೂ ಕೊಟ್ಟಿರ್ತಾರೆ. ಎಂಎಲ್ ಎಗಳು ಹೋದಾಗ ಶಿಫಾರಸು ಪತ್ರ ಕೊಟ್ಟಿರುತ್ತಾರೆ. ಅದಕ್ಕೆ ಹಣ ಲೇಪ ಕೊಡೋದು ಸರಿಯಲ್ಲ. ಕುಮಾರಸ್ವಾಮಿ ಎರಡೆರಡು ಲೆಟರ್ ಕೊಟ್ಟಿರಲಿಲ್ವಾ. ನಾನು ಕೂಡ ಆಗ ಸರ್ಕಾರದ ಭಾಗ ಆಗಿದ್ದೆ. ಎಲ್ಲಾ ಸರ್ಕಾರದ ಅವಧಿಯಲ್ಲೂ ಆಗಿರುತ್ತೆ. ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಿ ಅಂತಾ ಬರೆದಿರುತ್ತೇವೆ. ಎಂ. ಬಿ‌ ಪಾಟೀಲ್ ಫ್ರಾಡ್ ಅಂತಾ ಹೇಳಕ್ಕಾಗುತ್ತಾ? ಎಂದು ಪ್ರಶ್ನಿಸಿದರು.

ಕಾಸಿಗಾಗಿ ವರ್ಗಾವಣೆ ನಡೆದಿಲ್ಲ: ಹೆಚ್ ಡಿಕೆ ಟ್ವೀಟ್ ವಿಚಾರ ಮಾತನಾಡಿ, ನಮ್ಮ ಸರ್ಕಾರದಲ್ಲಿ ಕಾಸಿಗಾಗಿ ವರ್ಗಾವಣೆ ನಡೆದಿಲ್ಲ. ಪಾರದರ್ಶವಾಗಿ ನಡೆಯುತ್ತಿದೆ. ಟೆಂಡರ್ ಕೂಡ ನಾವು ಇನ್ನೂ ಕರೆದಿಲ್ಲ. ಕುಮಾರಸ್ವಾಮಿ ಬಹಳ ಆತುರರಾಗಿದ್ದಾರೆ. ಅವ್ರ ಸರ್ಕಾರ ಇದ್ದಾಗ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂದು ತೋರಿಸುತ್ತಿದ್ದಾರೆ. ಸಿಎಂ ಕಚೇರಿಯಲ್ಲಿ ಏನೂ ನಡೆದಿಲ್ಲ. ಈಗ ಸೆಟ್ಲ್ ಆಗ್ತಾ ಇದ್ದೀವಿ. ಸತ್ಯಾಂಶ ಇಲ್ಲ ಎಂದು ಹೇಳಿದರು.

ಬಿಜೆಪಿ ದಿಕ್ಕು ಆಗಿದೆ. ಕಟೀಲ್, ನಿರಾಣಿ, ಯತ್ನಾಳ್ ಕಾರಣ ಅಂತಾರೆ. ಬೊಮ್ಮಾಯಿ ಖಾಲಿ ಕುರ್ಚಿಯಲ್ಲಿ ಕೂತಿದ್ದಾರೆ ಅಂತಾರೆ. ಬಿಜೆಪಿ ಪಕ್ಷ ಛಿದ್ರ ಛಿದ್ರ ಆಗಿದೆ. ಒಂದಲ್ಲ ಇಪ್ಪತ್ತು ಗುಂಪು ಆಗಿವೆ. ಜೋಡಿಸಿದ್ರೂ ಜೋಡಿಸೋದಕ್ಕೆ ಆಗಲ್ಲ. ಆ ರೀತಿ ಛಿದ್ರ ಛಿದ್ರ ಆಗಿದೆ. ಬಿಜಾಪುರದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿ ಹೊಡೆದಾಟ ಆಗ್ತಿದೆ. ಬಿಜೆಪಿ ಅಂತಿಮ ಘಟ್ಟ ತಲುಪಿದೆ. ಬಿಜೆಪಿಗೆ ಫೆವಿಕಲ್ ಹಚ್ಚಿದ್ರೂ ಅಂಟಲ್ಲ ಎಂದು ಸಚಿವ ಎಂ ಬಿ ಪಾಟೀಲ್​ ಲೇವಡಿ ಮಾಡಿದರು.

ನೀವೇ ತಾನೇ ಹಣ ಕೊಡಿ ಅಂತಾ ಕೇಳಿದ್ದು. ಕ್ಷಮೆ ಯಾಕೆ ಕೇಳಬೇಕು? ನಮಗೆ ಹಿಂಟ್ ಕೊಟ್ಟಿದ್ದೇ ಇವ್ರು. ಬೊಮ್ಮಾಯಿ ಹೇಳಿಕೆಗೆ ಎಂ ಬಿ ಪಾಟೀಲ್ ಟಾಂಗ್ ಕೊಟ್ಟರು. ಬಿಜೆಪಿ ಹಗರಣಗಳ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಹಿಟ್ ಅಂಡ್ ರನ್ ಮಾಡಲ್ಲ. ಎಸ್ ಐಟಿ ತನಿಖೆ ಬಗ್ಗೆ ಕಾನೂನು ಸಚಿವರೊಂದಿಗೆ ಚರ್ಚೆ ಮಾಡ್ತಿದ್ದೇವೆ. ನೀರಾವರಿ, ಕೋವಿಡ್ ಸೇರಿ ಎಲ್ಲಾ ಹಗರಣಗಳ ತನಿಖೆ ಆಗುತ್ತೆ. ನಾವು ಗ್ಯಾರಂಟಿ ಕೊಡ್ತೀವಿ, ಎಲ್ಲಾ ಹಗರಣ ತನಿಖೆ ಆಗುತ್ತೆ. ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗ್ತೀವಿ ಎಂದು ಹೇಳಿದರು.

ಇದನ್ನೂ ಓದಿ:Bakrid: ನಮ್ಮನಮ್ಮಲ್ಲೇ ದ್ವೇಷ ವೈರತ್ವ ಹುಟ್ಟುಹಾಕುವ ಶಕ್ತಿಗಳಿಗೆ ಬೆಲೆ ಕೊಡಬೇಡಿ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.