ಬೆಂಗಳೂರು : ಮೇಲ್ಮನೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬೆಂಬಲಿಸುವ ತೀರ್ಮಾನ ಏಕೆ ಕೈಗೊಂಡರೋ ಗೊತ್ತಿಲ್ಲ ಎಂದು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾಕೆ ಈ ರೀತಿ ತೀರ್ಮಾನ ಕೈಗೊಂಡರೋ ಗೊತ್ತಿಲ್ಲ. ಅದನ್ನ ಅವರನ್ನೇ ಕೇಳಬೇಕು. ಯಾಕೆ ಈ ರೀತಿ ನಿರ್ಧರಿಸಿದ್ರೋ ಗೊತ್ತಿಲ್ಲ. ನಾನು ಅಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿಸಿದರು.
ಓದಿ: ಶಾಲೆ ಪಕ್ಕದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ: ಪರಿಶೀಲಿಸಲು ಡಿಸಿಗೆ ಹೈಕೋರ್ಟ್ ಸೂಚನೆ
ರೈತರು ದೇಶದ ಬೆನ್ನೆಲುಬು. ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸಬೇಕು. ರೈತರ ಚಳವಳಿಗೆ ಕೇಂದ್ರ, ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬಾರದು. ರೈತರ ಬೆಳೆಗಳಿಗೆ ಬೆಲೆಯಿಲ್ಲ. ಕಾಯ್ದೆ ಹಿಂಪಡೆಯುತ್ತೇವೆ ಅಂತಾ ಮೋದಿ, ಶಾ, ಯಡಿಯೂರಪ್ಪ ಹೇಳಬೇಕು ಎಂದು ಆಗ್ರಹಿಸಿದರು.