ಆನೇಕಲ್: ಇಲ್ಲಿಗೆ ಸಮೀಪದ ಪಿಲ್ಲಕೆತ್ತೂರು ಬಳಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. 20 ರಿಂದ 30 ಆನೆಗಳು ಕೆರೆಯಲ್ಲಿ ಇದ್ದ ದೃಶ್ಯಗಳು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟುಹಾಕಿದೆ. ಕೆರೆ ಅಕ್ಕಪಕ್ಕದ ರಾಗಿ ತೆನೆಗಳನ್ನು ತಿನ್ನುವಲ್ಲಿ ಆನೆಗಳು ನಿರತವಾಗಿವೆ.
ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಸಿಬ್ಬಂದಿಗೆ ಆನೆಗಳ ಹಿಂಡನ್ನು ಕಾಡಿಗೆ ಓಡಿಸುವುದೇ ಒಂದು ಕಾಯಕವಾಗಿದೆ. ಕರ್ನಾಟಕ ಗಡಿಯಿಂದ 20-30 ಕಿ.ಮೀ. ಅಂತರದಲ್ಲಿ ಆನೆ ಪಡೆ ನಾಡಿನ ಕಡೆಗೆ ಬಂದಿದೆ. ಮೊನ್ನೆಯಷ್ಟೇ ಆನೇಕಲ್ ಸುತ್ತಲೂ ಇದ್ದ ಆನೆಗಳನ್ನು ಕಂಡು ಜನ ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದರು.