ಬೆಂಗಳೂರು: ಕೆಂಪು ವಲಯ ಜಿಲ್ಲೆಗಳಲ್ಲಿ ಗಾರ್ಮೆಂಟ್ಸ್ ಘಟಕಗಳನ್ನು ತೆರೆಯಲು ರಾಜ್ಯ ಸರ್ಕಾರ ಇದೀಗ ಅನುಮತಿಸಿದೆ. ಈ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಕಂಟೇನ್ಮೆಂಟ್ ಪ್ರದೇಶ ಹೊರಗಿರುವ ಕೆಂಪು ವಲಯಗಳಲ್ಲೂ ಗಾರ್ಮೆಂಟ್ಸ್ ಘಟಕಗಳನ್ನು ತೆರೆಯಬಹುದಾಗಿದೆ ಎಂದು ಸೂಚನೆ ನೀಡಲಾಗಿದೆ. ರಫ್ತು ಬದ್ಧತೆ ಹೊಂದಿರುವ ಉಡುಪು ಘಟಕಗಳು 33% ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯವಾಗಿದೆ. ಆ ಮೂಲಕ ಗಾರ್ಮೆಂಟ್ಸ್ ಘಟಗಳ ನೌಕರರು ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ನೂರಾರು ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಇದೀಗ ಕೆಲ ನಿಬಂಧನೆಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.