ETV Bharat / state

ನೆಬರ್ ಹುಡ್ ವಾಚ್ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ

author img

By

Published : Jan 29, 2020, 8:32 PM IST

ಬೆಂಗಳೂರು ನಗರ ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಸೆಪಟ್ ಕಟೋಚ್ ಅವರ‌ ನೇತೃತ್ವದಲ್ಲಿ ಅನುಷ್ಠಾನಗೊಳಿಸಿದ್ದ ನೆಬರ್ ಹುಡ್ ವಾಚ್ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

banglore
ನೆಬರ್ ಹುಡ್ ವಾಚ್ ಯೋಜನೆ

ಬೆಂಗಳೂರು: ಗಣನೀಯವಾಗಿ ಅಪರಾಧ ಪ್ರಮಾಣ‌ವನ್ನು ಕಡಿಮೆಗೊಳಿಸಲು ಹಾಗೂ ಜನಸ್ನೇಹಿ ಪೊಲೀಸ್ ವಾತಾವರಣ ಮೂಡಿಸಲು‌ ನಗರ ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಸೆಪಟ್ ಕಟೋಚ್ ಅವರ‌ ನೇತೃತ್ವದಲ್ಲಿ ಅನುಷ್ಠಾನಗೊಳಿಸಿದ್ದ ನೆಬರ್ ಹುಡ್ ವಾಚ್ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕಳೆದ ಅಕ್ಟೋಬರ್​​ನಲ್ಲಿ ಈ ಯೋಜನೆಯನ್ನು ದಕ್ಷಿಣ ವಿಭಾಗದ 17 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಜಾರಿಗೆ ತಂದಿದ್ದರು. ಪೊಲೀಸರ ಸಹಯೋಗದಲ್ಲಿ ಸಾರ್ವಜನಿಕರು ಭಾಗಿಯಾಗುವಂತೆ ಆಹ್ವಾನ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಸುಮಾರು 300ಕ್ಕೂ ಹೆಚ್ಚು ಜನರು‌ ಮುಂದೆ ಬಂದು ಕಾರ್ಯ ನಿರ್ವಹಿಸಿದ್ದಾರೆ.‌ ವಿಶೇಷವೆಂದರೆ ಮಹಿಳೆಯರು ಸಹ ಮುಂದೆ ಬಂದಿರುವುದು ಶಾಘ್ಲನೀಯವಾಗಿದೆ.

ಡಿಸಿಪಿ ಡಾ.ರೋಹಿಣಿ ಸೆಪಟ್ ಕಟೋಚ್

ಈ ಬಗ್ಗೆ ಮಾತನಾಡಿದ ಡಿಸಿಪಿ ಡಾ.ರೋಹಿಣಿ, ಬಂದೋಬಸ್ತ್ ನೈಟ್ ಬೀಟ್ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಪೊಲೀಸರೊಂದಿಗೆ ಕಾರ್ಯನಿರ್ವಹಿಸಲು ಈ ತಂಡವು ನೆರವಾಗಿದೆ. ಹೊಸ ವರ್ಷ ಸಂಭ್ರಮಾಚರಣೆ ಭದ್ರತೆ ವೇಳೆ ಸ್ವಯಂಪ್ರೇರಿತವಾಗಿ ಮುಂದೆ ಬಂದು ಭದ್ರತೆಯ ಕೆಲಸ ನೋಡಿಕೊಂಡಿದ್ದರು. ಈ ಮೂಲಕ‌ ಸಾರ್ವಜನಿಕರಲ್ಲಿ ಪೊಲೀಸ್ ಬಗ್ಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಲು ಕಮ್ಯೂನಿಟಿ ಪೊಲೀಸ್ ಯೋಜನೆ ಉತ್ತಮವಾಗಿದೆ ಎಂದರು.

ಇನ್ನು ಈ ಯೋಜನೆಗೆ ನೀವೂ ಸಹ ಭಾಗಿಯಾಗಬೇಕಾದರೆ ಆಯಾ ಪೊಲೀಸ್ ಠಾಣೆಗಳ ಇನ್​ಸ್ಪೆಕ್ಟರ್​​ಗಳನ್ನು ಭೇಟಿಯಾಗಿ ಅರ್ಜಿ ತುಂಬಿ ಯೋಜನೆಗೆ ಕೈ ಜೋಡಿಸಬಹುದು ಎಂದು ಡಿಸಿಪಿ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.