ಬೆಂಗಳೂರು : ಮೊಮ್ಮಗಳು ಅಜ್ಜಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ಜಾನ್ಞಭಾರತಿ ಪೊಲೀಸ್ ಠಾಣೆಯ ಮಾರುತಿನಗರದಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ಅಜ್ಜಿ ಮತ್ತು ಮೊಮ್ಮಗಳು ವಾಸವಾಗಿದ್ರು.
ಕಳೆದ ಮೂರು ತಿಂಗಳ ಹಿಂದೆ ಮೊಮ್ಮಗಳು ತನ್ನ ಮೂರು ತಿಂಗಳ ಮಗುವನ್ನ ಕಳೆದುಕೊಂಡಿದ್ಳು. ಇದ್ರಿಂದ ಖಿನ್ನತೆಗೊಳಗಾಗಿದ್ದ ಆಕೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಮಾಡ್ತಿದ್ಳು.
ನಿನ್ನೆ ಕೂಡ ಅಜ್ಜಿ ಜೊತೆ ಜಗಳ ಮಾಡಿದ್ದ ಮೊಮ್ಮಗಳು, ಕೋಪದಲ್ಲಿ ಅಜ್ಜಿಯನ್ನ ನೂಕಿದ್ದಾಳೆ. ಇದ್ರಿಂದ ಅಜ್ಜಿಯ ತಲೆಗೆ ಪೆಟ್ಟಾಗಿ, ಅವರು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಪೊಲೀಸ್ ಎಂದು ಹೇಳಿಕೊಂಡು ವರ್ತಕರಿಂದ ಹಣ ವಸೂಲಿ ಮಾಡುತ್ತಿದ್ದ ಟೀ ಮಾರಾಟಗಾರ ಅರೆಸ್ಟ್
ಈ ಘಟನೆಯಿಂದ ಭಯಗೊಂಡ ಮೊಮ್ಮಗಳು, ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊಮ್ಮಗಳ ಗಂಡ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.