ETV Bharat / state

ಜೆಎಸ್​ಡಬ್ಲ್ಯೂಗೆ ಪ್ರತಿ ಯೂನಿಟ್ ವಿದ್ಯುತ್‌ಗೆ ₹7.25 ಪಾವತಿ: ಹೈಕೋರ್ಟ್​ಗೆ ಮಾಹಿತಿ ನೀಡಿದ ಸರ್ಕಾರ - ಜೆಎಸ್​ಡಬ್ಲ್ಯೂ ಎನರ್ಜಿ ಲಿಮಿಟೆಡ್​

ಜೆಎಸ್​ಡಬ್ಲ್ಯೂ ಕಂಪನಿಯಿಂದ ಖರೀದಿಸಲಾಗುವ ವಿದ್ಯುತ್ ದರದ ಮಾಹಿತಿಯನ್ನು ಸೋಮವಾರ ರಾಜ್ಯ ಸರ್ಕಾರವು ಹೈಕೋರ್ಟ್​ಗೆ ನೀಡಿತು.

High Court
ಹೈಕೋರ್ಟ್
author img

By ETV Bharat Karnataka Team

Published : Nov 7, 2023, 7:18 AM IST

ಬೆಂಗಳೂರು: ಜೆಎಸ್​ಡಬ್ಲ್ಯೂ ಕಂಪನಿಯ ವಿದ್ಯುತ್ ಸರಬರಾಜು ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿ ಇತ್ಯರ್ಥವಾಗುವವರೆಗೂ ಜೆಎಸ್​ಡಬ್ಲ್ಯೂ ಎನರ್ಜಿ ಲಿಮಿಟೆಡ್​​ಗೆ ರಾಜ್ಯ ಸರ್ಕಾರ ಪ್ರತಿ ಯೂನಿಟ್ (ಕಿಲೋ ವ್ಯಾಟ್ ಹವರ್-ಕೆಡಬ್ಲ್ಯೂಎಚ್) ವಿದ್ಯುತ್​ಗೆ 7.25 ರೂಪಾಯಿ ಪಾವತಿಸುತ್ತದೆ ಎಂದು ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ. ಸರ್ಕಾರದ ಆದೇಶದಂತೆ ಹೆಚ್ಚುವರಿ ವಿದ್ಯುತ್ ಅನ್ನು ರಾಜ್ಯದ ಗ್ರಿಡ್​​ಗೆ ಸರಬರಾಜು ಮುಂದುವರಿಸುವಂತೆ ಏಕಸದಸ್ಯ ಪೀಠವು ಅಕ್ಟೋಬರ್ 27ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಜೆಎಸ್​ಡಬ್ಲ್ಯೂ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

ಏಕಸದಸ್ಯ ಪೀಠವು ತನ್ನ ಮುಂದಿರುವ ಅರ್ಜಿಯನ್ನು ಒಂದು ವಾರದಲ್ಲಿ ಇತ್ಯರ್ಥಪಡಿಸಬೇಕು. ವಿದ್ಯುತ್ ಖರೀದಿ ದರ ಸೇರಿದಂತೆ ಎಲ್ಲಾ ವಿವಾದಾತ್ಮಕ ಅಂಶಗಳನ್ನು ಆಲಿಸಲು ಏಕಸದಸ್ಯ ಪೀಠವು ಮುಕ್ತವಾಗಿದೆ. ಏಕಸದಸ್ಯ ಪೀಠದ ಮುಂದೆ ಇರುವ ಅರ್ಜಿಯು ಇತ್ಯರ್ಥವಾಗುವವರೆಗೂ ರಾಜ್ಯ ಸರ್ಕಾರವು ಜೆಎಸ್​ಡಬ್ಲ್ಯೂ ಎನರ್ಜಿ ಲಿಮಿಟೆಡ್​ಗೆ ಪ್ರತಿ ಯೂನಿಟ್ (ಕಿಲೋ ವ್ಯಾಟ್ ಹವರ್-ಕೆಡಬ್ಲ್ಯೂಎಚ್) ವಿದ್ಯುತ್​ಗೆ 7.25 ರೂಪಾಯಿ ಪಾವತಿಸಲಿದೆ. ಹಾಲಿ ವಿದ್ಯುತ್ ಖರೀದಿ ದರವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ವಿಭಾಗೀಯ ಪೀಠ ಹೇಳಿತು.

ಜೆಎಸ್​ಡಬ್ಲ್ಯೂ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟ್ಗಿ, ಅಕ್ಟೋಬರ್ 16ರಂದು ರಾಜ್ಯ ಸರ್ಕಾರವು ಆದೇಶದ ಮೂಲಕ ಪ್ರತಿ ಯೂನಿಟ್​ಗೆ 4.86 ರೂಪಾಯಿಯಂತೆ ಖರೀದಿಸಲಾಗುವುದು ಎಂದಿದೆ. ಆದರೆ, ಈ ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ವಿದ್ಯುಚ್ಛಕ್ತಿ ಕಾಯಿದೆ ಸೆಕ್ಷನ್ 11ರ ಅಡಿ ಕೇಂದ್ರ ಸರ್ಕಾರವು ಫೆಬ್ರವರಿ 20ರಂದು ಮಾಡಿರುವ ಆದೇಶ ಪಾಲಿಸಬೇಕಿದೆ ಎಂದು ಪೀಠಕ್ಕೆ ತಿಳಿಸಿದರು.

ಮಾರುಕಟ್ಟೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ದರಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಅರ್ಧ ಹಣ ಪಾವತಿಸಲಾಗುವುದು ಎಂದು ಹೇಳಲಾಗಿದೆ. ಇದರಿಂದ ಪ್ರತಿ ದಿನ ಜೆಎಸ್​ಡಬ್ಲ್ಯೂಗೆ 10 ಕೋಟಿ ರೂಪಾಯಿ ನಷ್ಟವಾಗಲಿದೆ. ಈ ಮಧ್ಯೆ, ಫೆಬ್ರವರಿ 20ರ ಆದೇಶವನ್ನು ಕೇಂದ್ರ ಸರ್ಕಾರವು 2024ರ ಜೂನ್ 30ರವರೆಗೆ ವಿಸ್ತರಿಸಿದೆ. ಇದನ್ನು ಉಲ್ಲೇಖಿಸಿದರೂ ಏಕಸದಸ್ಯ ಪೀಠವು ಇದನ್ನು ಪರಿಗಣಿಸಿಲ್ಲ ಎಂದು ಹೇಳಿದರು.

ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ವಿದ್ಯುತ್ ಕೊರತೆ ನೀಗಿಸಿಕೊಳ್ಳಲು ರಾಜ್ಯ ಸರ್ಕಾರವು ಈ ಹಿಂದೆಯೂ ವಿದ್ಯುಚ್ಛಕ್ತಿ ಕಾಯಿದೆ ಸೆಕ್ಷನ್ 11 ಅನ್ನು ಜಾರಿಗೊಳಿಸಿದೆ. ಬರ ಪರಿಸ್ಥಿತಿಯಿಂದಾಗಿ ಪ್ರತಿದಿನವೂ ರಾಜ್ಯ ಸರ್ಕಾರ ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ, ರಾಜ್ಯದಲ್ಲಿನ ವಿದ್ಯುತ್ ಉತ್ಪಾದಕರಿಗೆ ವಿದ್ಯುತ್ ಉತ್ಪಾದಿಸಿ ರಾಜ್ಯದ ಗ್ರಿಡ್​ಗೆ ಮಾತ್ರ ವಿದ್ಯುತ್ ಪೂರೈಸಲು ಕಾಯಿದೆ ಸೆಕ್ಷನ್ 11ರ ಅಡಿ ತನ್ನ ವ್ಯಾಪ್ತಿ ಬಳಕೆ ಮಾಡುವುದು ಅನಿವಾರ್ಯ ಎಂದರು.

ಕೆಲವು ಷರತ್ತಿಗೆ ಒಳಪಟ್ಟು ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ವಿದ್ಯುತ್ ಉತ್ಪಾದಕರಿಗೆ ಅಲ್ಲಿ ಉತ್ಪಾದಿಸಲ್ಪಟ್ಟ ವಿದ್ಯುತ್ ಅನ್ನು ರಾಜ್ಯದ ಗ್ರಿಡ್​ಗೆ ಪೂರೈಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್​ಸಿ) ಮುಂದಿರುವ ಪ್ರಕ್ರಿಯೆಗೆ ಒಳಪಟ್ಟು ಎಲ್ಲಾ ಎಸ್ಕಾಂಗಳು ತಾತ್ಕಾಲಿಕವಾಗಿ ಪ್ರತಿ ಯೂನಿಟ್​ಗೆ 4.86 ರೂಪಾಯಿ ಪಾವತಿಸಬೇಕು ಎಂಬುದು ಷರತ್ತುಗಳಲ್ಲಿ ಒಂದಾಗಿತ್ತು. ಈ ಮಧ್ಯೆ, ಅಕ್ಟೋಬರ್ 17ರಂದು ಈ ಹಿಂದೆ ನೀಡಿದ್ದ ಎನ್ಒಸಿ/ಒಪ್ಪಿಗೆಯನ್ನು ಹಿಂಪಡೆದು ಆದೇಶ ಹೊರಡಿಸಿತ್ತು.

ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಆಮದು ಮಾಡಿಕೊಂಡ ಕಲ್ಲಿದ್ದಲು ಆಧಾರಿತ ವಿದ್ಯುಚ್ಛಕ್ತಿ ಘಟಕ ಹೊಂದಿರುವ ಜೆಎಸ್​ಡಬ್ಲ್ಯೂ ಪ್ರತಿ ಯೂನಿಟ್​ಗೆ 7.25 ರೂಪಾಯಿಯಂತೆ ನೀಡಲಾಗುವುದು ಎಂದು ಆಗಸ್ಟ್ 11ರಂದು ರಾಜ್ಯ ಸರ್ಕಾರಕ್ಕೆ ಆಫರ್ ನೀಡಿತ್ತು. ಇದನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟ್ ಮೊರೆ ಹೋಗಿತ್ತು.

ಇದನ್ನೂ ಓದಿ: ಪಂಚ ಗ್ಯಾರಂಟಿ ಹೊರೆ, ಬರದ ಬರೆ ಮಧ್ಯೆ ಆರು ತಿಂಗಳ ರಾಜ್ಯದ ಆರ್ಥಿಕ ಸ್ಥಿತಿಗತಿ ಹೇಗಿದೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.