ETV Bharat / state

ಕಾರ್ಮಿಕ ಮಕ್ಕಳಿಗೆ ಉಚಿತ ವಿಮಾನ ಚಾಲನಾ ತರಬೇತಿ ಭಾಗ್ಯ ನೀಡಲು ಮುಂದಾದ ಸರ್ಕಾರ - ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ

ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ 30 ಮಕ್ಕಳಿಗೆ ಉಚಿತವಾಗಿ ವಿಮಾನ ಚಾಲನಾ (ಪೈಲಟ್‌) ತರಬೇತಿ ನೀಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ.

ವಿಮಾನ
ವಿಮಾನ
author img

By

Published : Sep 5, 2022, 6:35 PM IST

ಬೆಂಗಳೂರು: ಕೇವಲ ಶ್ರೀಮಂತರ ಮಕ್ಕಳಿಗಷ್ಟೇ ಸೀಮಿತವಾಗಿದ್ದ ವಿಮಾನ ಚಾಲನಾ ಪರವಾನಗಿ ಭಾಗ್ಯ ಇನ್ನು ಮುಂದೆ ರಾಜ್ಯದ ಕಾರ್ಮಿಕರ ಮಕ್ಕಳಿಗೂ ಸಿಗಲಿದೆ. ಕಾರ್ಮಿಕರ ಮಕ್ಕಳಿಗೆ ಉಚಿತ ಪೈಲಟ್ ತರಬೇತಿ ನೀಡಲು ಮುಂದಾಗಿದೆ.

ವಿಮಾನ ಚಾಲನಾ ಪರವಾನಗಿ ತರಬೇತಿ ಸಾಮಾನ್ಯವಾಗಿ ಶ್ರೀಮಂತರಿಗೆ ಮಾತ್ರ ಸೀಮಿತವಾದ ಕೋರ್ಸ್. ಏಕೆಂದರೆ 18 ತಿಂಗಳ ಅವಧಿಯ ಈ ಕೋರ್ಸ್​ಗೆ ಸುಮಾರು 40 ಲಕ್ಷ ರೂಪಾಯಿ ಖರ್ಚಾಗುತ್ತದೆ‌. ಇಷ್ಟು ದುಬಾರಿ ಶುಲ್ಕ ಭರಿಸಿ, ಬಡ ಮಕ್ಕಳು ಪೈಲಟ್ ತರಬೇತಿ ಪಡೆಯುವುದು ಅಸಾಧ್ಯವಾಗಿದೆ. ಹೀಗಾಗಿ, ಕಾರ್ಮಿಕರ ಮಕ್ಕಳಿಗೂ ಉದ್ಯೋಗ ಖಾತ್ರಿಯ ಈ ಪೈಲೆಟ್ ಕೋರ್ಸ್ ಭಾಗ್ಯ ಕೊಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ.

30 ಕಾರ್ಮಿಕ ಮಕ್ಕಳಿಗೆ ಉಚಿತ ತರಬೇತಿ: ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ 30 ಮಕ್ಕಳಿಗೆ ಉಚಿತವಾಗಿ ವಿಮಾನ ಚಾಲನಾ (ಪೈಲಟ್‌) ತರಬೇತಿ ನೀಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ. ಕಳೆದ ತಿಂಗಳು ನಡೆದ ಮಂಡಳಿಯ ಸಭೆಯಲ್ಲಿ 2022-23ನೇ ಸಾಲಿನಿಂದ ಈ ಯೋಜನೆ ಆರಂಭಿಸಲು ಅನುಮೋದನೆ ನೀಡಲಾಗಿದೆ.

ಈ ಸಂಬಂಧ ಈಗಾಗಲೇ ಜಕ್ಕೂರು ವಿಮಾನ ನಿಲ್ದಾಣದಲ್ಲಿರುವ ಸರ್ಕಾರಿ ವೈಮಾನಿಕ ಶಾಲೆಯ ನಿರ್ದೇಶಕರಿಗೆ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಪಿ ಗುರುಪ್ರಸಾದ್ ಅವರು ಪತ್ರ ಬರೆದಿದ್ದಾರೆ. ಆಗಸ್ಟ್ 23ಕ್ಕೆ ಬರೆದ ಪತ್ರದಲ್ಲಿ ವಾಣಿಜ್ಯ ಪೈಲಟ್ ಪರವಾನಗಿಗೆ (ಸಿಪಿಎಲ್‌) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸೂಕ್ತ ತರಬೇತಿ ನೀಡಲು ಮಂಡಳಿಯು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಈ ಯೋಜನೆಗೆ ತಗಲುವ ಅಂದಾಜು ವೆಚ್ಚದ ಪ್ರಸ್ತಾವನೆ ಕಳುಹಿಸಿಕೊಡುವಂತೆ ಕೋರಿದ್ದಾರೆ.

ಮಂಡಳಿಯು ನೋಂದಾಯಿತ ಫಲಾನುಭವಿಗಳ ಅವಲಂಬಿತರಿಗೆ ವಿವಿಧ ರೀತಿಯ ತರಬೇತಿ ಮತ್ತು ಸೌಲಭ್ಯ ಒದಗಿಸಲು ‘ಶ್ರಮ ಸಂಸಾರ ಸಾಮರ್ಥ್ಯ’ ಯೋಜನೆ ರೂಪಿಸಿದೆ. ಈ ಯೋಜನೆಯಡಿ ಬಜೆಟ್‌ನಲ್ಲಿ ಪ್ರಸಕ್ತ ಸಾಲಿಗೆ 70 ರೂ. ಕೋಟಿ ಮೀಸಲಿಡಲಾಗಿದೆ. ಈ ಯೋಜನೆಯಡಿ ಪೈಲಟ್‌ ತರಬೇತಿ ನೀಡಲು ಮಂಡಳಿ ಉದ್ದೇಶಿಸಿದೆ.

ತರಬೇತಿಗೆ ತಗುಲುವ ವೆಚ್ಚ, ಷರತ್ತು ಏನು?: ಈ ಪೈಲೆಟ್ ಕೋರ್ಸ್ 18 ತಿಂಗಳ ಅವಧಿಯ ತರಬೇತಿಯಾಗಿದೆ. ಪ್ರತಿ ಅಭ್ಯರ್ಥಿಗೆ ಸುಮಾರು 37 ಲಕ್ಷ ರೂ. ವೆಚ್ಚವಾಗುತ್ತದೆ.

ಎರಡು ವರ್ಷ ಅವಧಿಯ ವಾಣಿಜ್ಯ ಪೈಲಟ್‌ ಪರವಾನಗಿ (ಸಿಪಿಎಲ್‌) ಪಡೆಯಲು ದ್ವಿತೀಯ ಪಿಯುಸಿ (ಭೌತವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ) ಉತ್ತೀರ್ಣರಾಗಿರಬೇಕು. ಕನಿಷ್ಠ 18 ವರ್ಷ ವಯೋಮಿತಿ. ಗ್ರೌಂಡ್‌ ತರಗತಿ, 200 ಗಂಟೆಯ ಹಾರಾಟ ತರಬೇತಿ ಮತ್ತು 10 ಗಂಟೆಯ ಸಿಮುಲೇಟರ್‌ ನೀಡಲಾಗುತ್ತದೆ. ಸಿಪಿಎಲ್‌ ತರಬೇತಿಗೆ ಕರ್ನಾಟಕದ ಪ್ರತಿಶಿಕ್ಷಣಾರ್ಥಿಗಳಿಗೆ 37 ಲಕ್ಷ ರೂ. ಹೊರರಾಜ್ಯದವರಿಗೆ 42 ಲಕ್ಷ ರೂ. ಶುಲ್ಕ ವಿಧಿಸಲಾಗುತ್ತದೆ. ಅರ್ಜಿ ಶುಲ್ಕ 400 ರೂ ಕೊಡಬೇಕು.

ಒಂದು ವರ್ಷ ತರಬೇತಿ ಅವಧಿಯ ಖಾಸಗಿ ಪೈಲಟ್‌ ಪರವಾನಗಿ (ಪಿಸಿಎಲ್‌) ಪಡೆಯಲು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. 16 ವರ್ಷ ವಯೋಮಿತಿ. ಗ್ರೌಂಡ್‌ ತರಗತಿಗಳು ಮತ್ತು 40 ಗಂಟೆಯ ಹಾರಾಟ ತರಬೇತಿ ನೀಡಲಾಗುತ್ತದೆ. ಜೊತೆಗೆ ತರಬೇತಿಗೆ ನೇಮಕಗೊಂಡವರು ದೈಹಿಕ ಅರ್ಹತೆಯ ಬಗ್ಗೆ ಡಿಜಿಸಿಎ ಅನುಮೋದಿತ ವೈದ್ಯರಿಂದ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು.

ಓದಿ: ಶಿಕ್ಷಕರಿಗೆ ಶಿಸ್ತಿನ ಪಾಠ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.