ETV Bharat / state

ಏಳನೇ ವೇತನ ಆಯೋಗಕ್ಕೆ 44 ಹುದ್ದೆ ಸೃಷ್ಟಿಸಿ ಸರ್ಕಾರ ಆದೇಶ

ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗಕ್ಕೆ 44 ಹುದ್ದೆಗಳನ್ನು ಸೃಷ್ಟಿಸಿ ಸರ್ಕಾರ ಆದೇಶ ಹೊರಡಿಸಿದೆ. ಆಯೋಗಕ್ಕೆ ಸೃಷ್ಟಿಸಿರುವ ಹುದ್ದೆಗಳು ಆಯೋಗದ ಅವಧಿಯವರೆಗೆ ತಾತ್ಕಾಲಿಕವಾಗಿ ಸೃಷಿಸಲಾಗಿರುತ್ತದೆ.

ಏಳನೇ ವೇತನ ಆಯೋಗಕ್ಕೆ 44 ಹುದ್ದೆ ಸೃಷ್ಟಿಸಿ ಸರ್ಕಾರ ಆದೇಶ
ಏಳನೇ ವೇತನ ಆಯೋಗಕ್ಕೆ 44 ಹುದ್ದೆ ಸೃಷ್ಟಿಸಿ ಸರ್ಕಾರ ಆದೇಶ
author img

By

Published : Dec 2, 2022, 8:28 PM IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸುವ ಸಂಬಂಧ ರಚನೆ ಮಾಡಿರುವ ಏಳನೇ ವೇತನ ಆಯೋಗಕ್ಕೆ 44 ಹುದ್ದೆಗಳನ್ನು ಸೃಷ್ಟಿಸಿ ಸರ್ಕಾರ ಆದೇಶ ಹೊರಡಿಸಿದೆ.

ಐಎಎಸ್ ವೃಂದದ ಕಾರ್ಯದರ್ಶಿ ಹುದ್ದೆ ಸೇರಿದಂತೆ 44 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಕಾರ್ಯದರ್ಶಿ (ಐಎಎಸ್‌ ವೃಂದ) ಒಂದು ಹುದ್ದೆ, ಹೆಚ್ಚುವರಿ/ಜಂಟಿ/ಉಪಕಾರ್ಯದರ್ಶಿ/ವಿಶೇಷಾಧಿಕಾರಿ ಮೂರು ಹುದ್ದೆ, ಜಂಟಿ/ಉಪ/ಸಹಾಯಕ ನಿರ್ದೇಶಕರು (ಅಂಕಿ- ಅಂಶ) ಒಂದು ಹುದ್ದೆ, ಅಧೀನ ಕಾರ್ಯದರ್ಶಿ/ಆಪ್ತ ಕಾರ್ಯದರ್ಶಿ ಆರು ಹುದ್ದೆ, ಶಾಖಾಧಿಕಾರಿ ಎರಡು ಹುದ್ದೆ, ಹಿರಿಯ ಸಹಾಯಕರು/ಸಹಾಯಕರು/ಶೀಘ್ರಲಿಪಿಗಾರರು/ ಕಿರಿಯ ಸಹಾಯಕರು/ ಬೆರಳಚ್ಚುಗಾರರು/ಡಾಟಾ ಎಂಟ್ರಿ ಆಪರೇಟರ್ ಮತ್ತು ಇತರೆ ಗ್ರೂಪ್ ಸಿ ವೃಂದದ ಹುದ್ದೆಗಳು 25, ದಲಾಯತ್ ಆರು ಹುದ್ದೆ ಸೇರಿದಂತೆ 44 ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ವೇತನ ಆಯೋಗವು ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಸ್ವತಂತ್ರವನ್ನು ಕಲ್ಪಿಸಲಾಗಿದೆ. ಏಳನೇ ರಾಜ್ಯ ವೇತನ ಆಯೋಗದ ವೆಚ್ಚವನ್ನು ಕರ್ನಾಟಕ ವೇತನ ಆಯೋಗದಡಿ ಭರಿಸಲಾಗುತ್ತದೆ. ಆಯೋಗಕ್ಕೆ ಸೃಷ್ಟಿಸಿರುವ ಹುದ್ದೆಗಳು ಆಯೋಗದ ಅವಧಿಯವರೆಗೆ ತಾತ್ಕಾಲಿಕವಾಗಿ ಸೃಷಿಸಲಾಗಿರುತ್ತದೆ. ರಾಜ್ಯ ಸರ್ಕಾರದ ಸಚಿವಾಲಯದ ಸೇವೆಯಿಂದ ಅಥವಾ ಸರ್ಕಾರದ ಇತರ ಇಲಾಖೆಗಳಿಂದ ನಿಯೋಜನೆ ಮೇಲೆ ಭರ್ತಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

(ಓದಿ: ಸರ್ಕಾರಿ ನೌಕರರ 7ನೇ ವೇತನ ಆಯೋಗದ ನಿರೀಕ್ಷೆಗಳೇನು?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.