ಹೊಸಕೋಟೆ: ಈ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅಧಿಕಾರ ಸ್ವೀಕರಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಬಿಜೆಪಿ ಸರ್ಕಾರ ದೇಶವನ್ನ ಉನ್ನತಿಯೆಡೆಗೆ ತೆಗೆದುಕೊಂಡು ಹೋಗುತ್ತಿದೆ. ಹೊಸಕೋಟೆಯಲ್ಲಿ ಆನೇಕ ಅಭಿವೃದ್ದಿಗಳನ್ನ ಎಂಟಿಬಿ ನಾಗರಾಜು ಮಾಡಿದ್ದಾರೆ ವಿನಃ ಕಾಂಗ್ರೆಸ್‌ನಿಂದಾಗಿ ಈ ಕ್ಷೇತ್ರದಲ್ಲಿ ಅಭಿವೃದ್ದಿಗಳು ಆಗಿಲ್ಲ. ಹೀಗಾಗಿ ಈ ಬಾರಿಯೂ ಮತದಾರರು ಎಂಟಿಬಿ ನಾಗರಾಜು ಅವರನ್ನೇ ಗೆಲ್ಲಿಸುತ್ತಾರೆ ಎಂದರು.
ಶರತ್ ಬಚ್ಚೇಗೌಡ ಇನ್ನೂ ಚಿಕ್ಕ ಹುಡುಗ : ಶರತ್ ಇನ್ನೂ ಚಿಕ್ಕ ವಯಸ್ಸಿನ ಹುಡುಗ. ಅವರಿಗೆ ಅನುಭವದ ಕೊರತೆ ಇದೆ. ಆತುರಪಟ್ಟು ಈ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕೆ ನಾವು ಅವರ ಮಾತನ್ನು ಪರಿಗಣಿಸಬೇಕಾಗಿಲ್ಲ. ಅವರು ಚುನಾವಣೆಗೆ ನಿಲ್ಲಬಾರದಿತ್ತು, ಆದರೂ ನಿಂತಿದ್ದಾರೆ. ಆದರೆ, ಜನ ಅವರಿಗೆ ಮನ್ನಣೆ ನೀಡಲ್ಲ ಎಂದರು.
ಸಂಸದ ಬಚ್ಚೇಗೌಡರು ಪುತ್ರ ವ್ಯಾಮೋಹ ತೋರಲ್ಲ. ಅವರಿಗೆ ಪಕ್ಷ ನಿಷ್ಠೆ ಇದೆ. ಪುತ್ರ ವ್ಯಾಮೋಹಕ್ಕೆ ಬಿದ್ದು ಪಕ್ಷಕ್ಕೆ ದ್ರೋಹ ಮಾಡಲ್ಲ. ಅವರಿಗೆ ಯಾವಾಗ ಚುನಾವಣಾ ಅಖಾಡಕ್ಕೆ ಇಳಿಯಬೇಕು ಎಂದು ಗೊತ್ತು. ಆಗ ಇಳಿದು ಎಂಟಿಬಿಯನ್ನೇ ಗೆಲ್ಲಿಸುತ್ತಾರೆ ಎಂದರು.