ETV Bharat / state

ರಾಯಲ್​​ ದಸರೆಗೆ ಹೊರಟ ಐತಿಹಾಸಿಕ ವಿಂಟೇಜ್​​​ ಕಾರುಗಳು‌ - ಮೈಸೂರು ದಸರಾ

ನಾಡ ಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ 50ಕ್ಕೂ ಹೆಚ್ಚು ಕಾರುಗಳು ಮೈಸೂರಿನತ್ತ ಪ್ರಯಾಣ ಬೆಳೆಸಿವೆ.‌

ರಾಯಲ್ ದಸರಾಕ್ಕೆ ಹೊರಟ ಹಿಸ್ಟಾರಿಕಲ್ ವಿಂಟೇಜ್ ಕಾರುಗಳು‌
author img

By

Published : Sep 29, 2019, 9:18 PM IST

ಬೆಂಗಳೂರು: ದಸರಾ ಮಹೋತ್ಸವದ ರಂಗು ಹೆಚ್ಚಿಸಲು ದೇಶದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದಿದ್ದ 50ಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಬೆಂಗಳೂರಿನಿಂದ‌ ಮೈಸೂರಿಗೆ ಪಯಣ ಬೆಳೆಸಿವೆ. ರಾಜ್ಯಪಾಲ ವಜುಭಾಯ್​ ವಾಲಾ ವಿಂಟೇಜ್‌ ಕಾರುಗಳ ಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ರಾಯಲ್ ದಸರಾಕ್ಕೆ ಹೊರಟ ಹಿಸ್ಟಾರಿಕಲ್ ವಿಂಟೇಜ್ ಕಾರುಗಳು‌

ನಾಡಹಬ್ಬ ದಸರಾ ಉತ್ಸವಕ್ಕೆ ತೆರಳುತ್ತಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಈ ಕಾರುಗಳು ಹಲವು ವರ್ಷಗಳಿಂದ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಿವೆ. ಈ ವರ್ಷವೂ ಸಹ ದಸರಾ ಮಹೋತ್ಸವಕ್ಕೆ ಮೆರುಗು ತುಂಬಲು ತಮ್ಮ ಮಾಲೀಕರೊಂದಿಗೆ ಈ ಕಾರುಗಳು ಪಾರಂಪರಿಕ ನಗರಿಗೆ ತೆರಳಿದವು. ದೇಶದ ವಿವಿಧ ರಾಜ್ಯಗಳೂ ಸೇರಿದಂತೆ ನೆರೆಯ ಶ್ರೀಲಂಕಾದಿಂದಲೂ ನೂರಾರು ವರ್ಷಗಳ ಇತಿಹಾಸವಿರುವ ಕಾರುಗಳು ದಸರೆಗೆ ಆಗಮಿಸಿವೆ. ಈ ಕಾರುಗಳ ವೈಶಿಷ್ಟ್ಯವನ್ನು ತಿಳಿದು ಸ್ವತಃ ರಾಜ್ಯಪಾಲರೇ ಕಾರಿನಲ್ಲಿ ಕುಳಿತು ರಾಜಭವನದ ಸುತ್ತಾ ಒಂದು ಸುತ್ತು ಹಾಕಿದರು.‌

ಕೇವಲ ಕಾರುಗಳಷ್ಟೇ ಅಲ್ಲ, ಹಳೇ ಕಾಲದ ರಾಯಲ್ ಎನ್​ಫೀಲ್ಡ್ ಸೇರಿದಂತೆ ವಿವಿಧ ಕಂಪನಿಯ ಬೈಕುಗಳೂ ಕೂಡಾ ಇಲ್ಲಿ ಕಂಡುಬಂದವು. ರಾಜಭವನದಿಂದ ತೆರಳಿದ ಈ ಕಾರು, ಬೈಕುಗಳು ನೇರವಾಗಿ ವಿಧಾನಸೌಧಕ್ಕೆ ಹೋಗಿ, ಅಲ್ಲಿಂದ ಮೈಸೂರಿಗೆ ತಲುಪಿವೆ. ರಾಷ್ಟ್ರಕವಿ ಕುವೆಂಪು ಅವರ ಹಳೆಯ ಕಾರು ಇಲ್ಲಿ ವಿಶೇಷವಾಗಿ ಗಮನ ಸೆಳೆಯಿತು.

Intro:ರಾಯಲ್ ದಸರಾಕ್ಕೆ ಕ್ಲಾಸಿಕ್ ಆಗಿ ಹೊರಟ
ಹಿಸ್ಟಾರಿಕಲ್ ಕಾರ್ ಗಳು.. ‌

ಬೆಂಗಳೂರು: ದಸರಾ ಮಹೋತ್ಸವಕ್ಕೆ ರಂಗು ನೀಡಲು, ದೇಶದ ಮೂಲೆ ಮೂಲೆಗಳಿಂದ ವಿಂಟೇಜ್ ಕಾರುಗಳು ಬಂದಿದ್ದವು.. ಐತಿಹಾಸಿಕ ದಸರಾ ಹಬ್ಬಕ್ಕೆ ಇತಿಹಾಸ ಇರುವ 50 ಕ್ಕೂ‌ಹೆಚ್ಚು ಬಗೆಯ ಕಾರ್ ಗಳು ಇಂದು ಬೆಂಗಳೂರಿನಿಂದ‌ ಮೈಸೂರಿಗೆ ಪಯಣ ಬೆಳೆಸಿತು.. ಇದಕ್ಕೆ ಇಂದು ರಾಜ್ಯಪಾಲರಾದ ವಾಜುಬಾಯಿ ವಾಲಾ ವಿದ್ಯುಕ್ತ ಚಾಲನೆ ನೀಡಿದರು..‌

ನೂರಾರು ವರ್ಷಗಳಿಂದ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಉತ್ಸವಕ್ಕೆ ತೆರಳುತ್ತಿರುವ ಐತಿಹಾಸಿಕ ಹಿನ್ನಲೆವುಳ್ಳ ಈ ಕಾರ್ ಗಳು ಹಲವು ವರ್ಷಗಳಿಂದ ದಸರಾ ಹಬ್ಬದಲ್ಲಿ ಪಾಲ್ಗೋಳ್ಳುತ್ತಿವೆ. ಈ ವರ್ಷವು ಸಹ ದಸರಾ ಮಹೋತ್ಸವಕ್ಕೆ ರಂಗು ನೀಡಲು ತನ್ನ ಮಾಲೀಕರೊಂದಿಗೆ ತೆರಳಿದವು. ನಾನಾ ರಾಜ್ಯ ಸೇರಿದಂತೆ ಶ್ರೀಲಂಕಾದಿಂದಲೂ ಸಹ ಆಗಮಿಸಿದ್ದ ನೂರಾರು ವರ್ಷಗಳ ಇತಿಹಾಸವಿರುವ ಕಾರುಗಳ ವೈಶಿಷ್ಟ್ಯ ವನ್ನ‌ ತಿಳಿದು, ಸ್ವತಃ ರಾಜ್ಯಪಾಲರೇ ಕಾರನಲ್ಲಿ ಕುಳಿತು ರಾಜಭವನದ ಒಂದು ಸುತ್ತು ಹಾಕಿದರು..‌

ಕೇವಲ ಕಾರ್ ಗಳಷ್ಟೇ ಅಲ್ಲ ಹಳೇ ಕಾಲದ ರಾಯಲ್ ಎನ್ ಫೀಲ್ಡ್ ಸೇರಿದಂತೆ ವಿವಿಧ ಕಂಪನಿಯ ಬೈಕ್ ಗಳು ಸಹ ಇದರಲ್ಲಿ ಭಾಗಿಯಾಗಿದ್ದವು. ರಾಜಭವನದಿಂದ ತೆರಳಿದ ಈ ಕಾರ್ ಗಳು ನೇರವಾಗಿ ವಿಧಾನಸೌಧಕ್ಕೆ ಹೋಗಿ, ಅಲ್ಲಿಂದ ನೇರವಾಗಿ ಮೈಸೂರಿಗೆ ತಲುಪಿದವು.. ‌
ಇದರಲ್ಲಿ ಮತ್ತೊಂದು ವಿಶೇಷವೆಂಬಂತೆ ವರಕವಿ ಕುವೆಂಪು ಅವರ ಹಳೆ ಕಾರು ಕೂಡಾ ಭಾಗಿಯಾಗಿತ್ತು.

ಅದೇನೆ‌ ಇರಲಿ ದಸರಾದಲ್ಲಿ ಅಂಬಾರಿ‌ ಸವಾರಿ ನೋಡ್ತಾ, ಮತ್ತೊಂದು ಕಡೆ ಹಿಸ್ಟರಿ ಇರುವ ಈ ಕಾರುಗಳನ್ನ ನೋಡೋದೇ ಚೆಂದ ಅಲ್ವಾ...

KN_BNG_2_DASARA_CAR_VENTAGE_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.