ಬೆಂಗಳೂರು: ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ RTPCR ಪರೀಕ್ಷೆ ವಿಳಂಬ ತಪ್ಪಿಸಲು ಸರ್ಕಾರ ಹೊಸ ಪ್ಲಾನ್ ಮಾಡಿದೆ. ಕೋವಿಡ್ ಪರೀಕ್ಷೆ ವಿಳಂಬಕ್ಕೆ ಶಿಕ್ಷೆಯೂ ಇದೆ ಹಾಗೇ ವೇಗವಾಗಿ ನಿರ್ವಹಿಸುವವರಿಗೆ ಬಹುಮಾನವೂ ದೊರೆಯಲಿದೆ.
ಹೌದು, 24 ಗಂಟೆಗಳಲ್ಲಿ ಕೋವಿಡ್-19 RTPCR ವರದಿ ನೀಡುವವರಿಗೆ ಶೇ. 10 ಪ್ರೋತ್ಸಾಹ ಧನ ನೀಡಲು ಸರ್ಕಾರ ಮುಂದಾಗಿದೆ. ಹಾಗೂ 48 ಗಂಟೆಗಳಲ್ಲಿ ಕೋವಿಡ್-19 RTPCR ವರದಿ ನೀಡುವವರಿಗೆ ನಿಗದಿತ ಶುಲ್ಕ ಪಾವತಿ ಮಾಡಲಾಗುತ್ತೆ. 48 ಗಂಟೆಗಿಂತ ವಿಳಂಬವಾಗಿ ವರದಿ ನೀಡುವವರಿಗೆ ಶೇ. 10 ರಷ್ಟು ದಂಡ ವಿಧಿಸಲಾಗುತ್ತದೆ. ವರದಿ ನೀಡುವ ಜೊತೆಗೆ ಏಕಕಾಲದಲ್ಲಿ ICMR ಪೋರ್ಟಲ್ ನಲ್ಲೂ ವರದಿ ಅಪ್ಲೋಡ್ ಆಗಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ..
ಖಾಸಗಿ ಲ್ಯಾಬ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಪ್ರೋತ್ಸಾಹಿಸುವ ಹಾಗೂ ಪರೀಕ್ಷೆಯ ಫಲಿತಾಂಶ ವಿಳಂಬವಾಗದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಅನ್ವಯ ಈ ಆದೇಶವನ್ನು ಜಾರಿಗೊಳಿಸಿದೆ.