ETV Bharat / state

ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಎನ್​ಐಎ ತನಿಖೆಗೆ ವಹಿಸಲು ಸರ್ಕಾರದ ನಿರ್ಧಾರ - Praveen nettars murder case

ಪ್ರವೀಣ್ ಹತ್ಯೆ ಸಂಘಟಿತ ಅಪರಾಧವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಈ ಪ್ರಕರಣವು ಅಂತಾರಾಜ್ಯ ವಿಚಾರವಾಗಿದೆ. ಇದರ ಸಂಪೂರ್ಣವಾದ ಮಾಹಿತಿಯನ್ನೂ ಸಂಗ್ರಹಿಸಲು ಹೇಳಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ಧಾರೆ.

governments-decision-to-handover-the-praveen-nettars-murder-case-to-nia-investigation
ಪ್ರವೀಣ್​ ಹತ್ಯೆ ಪ್ರಕರಣ ಎನ್​ಐಎ ತನಿಖೆಗೆ ವಹಿಸಲು ಸರ್ಕಾರದ ನಿರ್ಧಾರ
author img

By

Published : Jul 29, 2022, 3:00 PM IST

Updated : Jul 29, 2022, 3:34 PM IST

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​​ಐಎ)ಕ್ಕೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾಹಿತಿ ನೀಡಿದ್ದಾರೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಕುರಿತಂತೆ ಡಿಜಿ-ಐಜಿ ಜೊತೆಗೆ ಚರ್ಚೆ ಮಾಡಿದ್ದೇನೆ. ಪ್ರವೀಣ್ ಹತ್ಯೆ ಸಂಘಟಿತ ಅಪರಾಧವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಈ ಪ್ರಕರಣವು ಅಂತಾರಾಜ್ಯ ವಿಚಾರವಾಗಿದೆ. ಇದರ ಸಂಪೂರ್ಣವಾದ ಮಾಹಿತಿಯನ್ನೂ ಸಂಗ್ರಹಿಸಲು ಹೇಳಿದ್ದೇನೆ.

ತನಿಖೆಯು ತ್ವರಿತಗತಿಯ ಪ್ರಗತಿಯಲ್ಲಿದ್ದು, ಎಲ್ಲ ಮಾಹಿತಿ ಪಡೆದ ಮೇಲೆ ಎನ್​​ಐಎಗೆ ಪತ್ರ ಬರೆಯುಲು ತಿಳಿಸಿದ್ದೇನೆ. ಎನ್ಐಎಗೆ ವಹಿಸಲು ನಾವು ತೀರ್ಮಾನಿಸಿದ್ದು, ಅಂತಿಮವಾಗಿ ಕೇಂದ್ರ ಗೃಹ ಇಲಾಖೆ ನಿರ್ಧರಿಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಎನ್​ಐಎ ತನಿಖೆಗೆ ವಹಿಸಲು ಸರ್ಕಾರದ ನಿರ್ಧಾರ

ದ-ಕಗೆ ಕೆಎಸ್ಆರ್​​ಪಿಯ ಇನ್ನೊಂದು ಬೆಟಾಲಿಯನ್​ ಸ್ಥಳಾಂತರ: ಕೇರಳ ಬಾರ್ಡರ್​​​ನಲ್ಲಿ​ ಸಂಪೂರ್ಣವಾಗಿ ಸಿಸಿಟಿವಿ ಮೂಲಕ ಕಣ್ಗಾವಲು ವಹಿಸಲಾಗುವುದು. ಎರಡು ರಾಜ್ಯಗಳ ಸಂಪರ್ಕ ಇರುವ ಕಡೆ ಚೆಕ್​ ಪೋಸ್ಟ್ ಹಾಕಬೇಕು. ಸೂಕ್ಷ್ಮ ಊರುಗಳಲ್ಲಿ ಪೊಲೀಸರು ತಾತ್ಕಾಲಿಕ ಕ್ಯಾಂಪ್ ಮಾಡಬೇಕು. ಜೊತೆಗೆ ರಾತ್ರಿ ಗಸ್ತು ಹೆಚ್ಚಳ ಸೇರಿದಂತೆ ಹಲವು ಕ್ರಮಗಳಿಗೆ ಪೊಲೀಸ್​ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: 'ಜನಪ್ರತಿನಿಧಿಗಳ ಹತ್ತಿರ ನಾವು ಮಾತನಾಡಬಾರದಂತೆ': ಪ್ರವೀಣ್ ಸಂಬಂಧಿಯ ಆಕ್ರೋಶ

ಇದೇ ವೇಳೆ, ಗೃಹ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕೂಡ ನಿರ್ಧರಿಸಲಾಗಿದೆ. ಕೆಎಸ್ಆರ್​​ಪಿಯ ಇನ್ನೊಂದು ಬೆಟಾಲಿಯನ್​ ಅನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರ ಮಾಡಲಾಗುವುದು ಎಂದೂ ಬೊಮ್ಮಾಯಿ ಮಾಹಿತಿ ನೀಡಿದರು.

ಫಾಜಿಲ್​ ಹತ್ಯೆ ಕೇಸ್​​ ತನಿಖೆ ತೀವ್ರ: ನಿನ್ನೆ ಸುರತ್ಕಲ್​ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣವೂ ತೀವ್ರಗತಿಯಲ್ಲಿ ತನಿಖೆ ಆಗಬೇಕು, ತಪ್ಪಿತಸ್ಥರನ್ನ ಬಂಧಿಸಬೇಕು. ಅದಕ್ಕೂ ಕೂಡ ವಿಶೇಷ ತಂಡಗಳನ್ನು ಮಾಡಿ ತನಿಖೆ ಮಾಡಲು ನಿರ್ಣಯ ಮಾಡಿದ್ದೇವೆ. ಅಲ್ಲದೇ, ಎಲ್ಲ ಧಾರ್ಮಿಕ ಮುಖಂಡರನ್ನು ಕರೆದು ಜಿಲ್ಲಾ ಮಟ್ಟದಲ್ಲಿ ಶಾಂತಿ ಸಭೆಯನ್ನೂ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.

ಹಿರಿಯ ಅಧಿಕಾರಿಗಳೊಂದಿಗೆ ಸಭೆ: ಇದಕ್ಕೂ ಮುನ್ನ ಕೋಮು‌ ಕೊಲೆಗಳು ಆಗದಂತೆ ಕಟ್ಟೆಚ್ಚರ ವಹಿಸಲು ಸಿಎಂ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಗಳ ಸಭೆ ನಡೆಸಿದರು. ರೇಸ್ ಕೋರ್ಸ್​​ ರಸ್ತೆಯ ಶಕ್ತಿಭವನದಲ್ಲಿ‌ ನಡೆದ ಸಭೆಯಲ್ಲಿ ಡಿಜಿ - ಐಜಿಪಿ ಪ್ರವೀಣ್ ಸೂದ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: ಸುರತ್ಕಲ್: ಹುಟ್ಟೂರು ಮಂಗಳಪೇಟೆಯಲ್ಲಿ ಯುವಕ ಫಾಜಿಲ್​ ಅಂತ್ಯಕ್ರಿಯೆ

Last Updated : Jul 29, 2022, 3:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.