ETV Bharat / state

ಸಂತ್ರಸ್ತ ಯುವತಿಗೆ ರಕ್ಷಣೆ ನೀಡುವುದು ಸರ್ಕಾರದ ಮೂಲಭೂತ ಕರ್ತವ್ಯ: ಡಿಕೆಶಿ

ಯುವತಿಯ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಆಕೆಯ ಕುಟುಂಬದ ಭದ್ರತೆ ಹಾಗೂ ಜೀವ ರಕ್ಷಣೆ ಸರ್ಕಾರದ ಹೊಣೆಯಾಗುತ್ತದೆ. ಎಲ್ಲರಿಂದಲೂ ಸಹಕಾರ ಸಿಗುವ ನಿರೀಕ್ಷೆ ಇದೆ. ನಾವೆಲ್ಲರೂ ಕುಳಿತು ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಸಂತ್ರಸ್ತೆಯ ರಕ್ಷಣೆಗೆ ನಾವು ಸದಾ ಸಿದ್ಧರಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್
author img

By

Published : Mar 25, 2021, 8:17 PM IST

ಬೆಂಗಳೂರು: ಸಂತ್ರಸ್ತ ಯುವತಿಗೆ ರಕ್ಷಣೆ ನೀಡುವುದು, ದೌರ್ಜನ್ಯವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಮೂಲಭೂತ ಕರ್ತವ್ಯ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹೇಳಬೇಕಾಗಿರುವುದನ್ನೆಲ್ಲಾ ಸದನದಲ್ಲಿ ಹೇಳಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಮಾಧ್ಯಮಗಳ ಜತೆ ಮಾತನಾಡುತ್ತಾ, ಸಂತ್ರಸ್ತ ಯುವತಿಯ ವಿಡಿಯೋ ನಾನು ನೋಡಿಲ್ಲ. ಜನಪ್ರತಿನಿಧಿ ನ್ಯಾಯಾಲಯದಲ್ಲಿ ಎಕನಾಮಿಕ್ ಅಫೆನ್ಸ್ ಪ್ರಕರಣದ ವಿಚಾರಣೆ ಇತ್ತು. ಅದಕ್ಕೆ ಹಾಜರಾಗಿ ಈಗಷ್ಟೇ ಬಂದಿದ್ದೇನೆ. ಕಳೆದ ಬಾರಿ ಹೋಗಲು ಆಗಿರಲಿಲ್ಲ. ಹೀಗಾಗಿ ಇಂದು ಹೋಗಿ ಬಂದಿದ್ದೇನೆ. ಈ ವಿಡಿಯೋ ಏನು ಎಂಬುದನ್ನು ನೋಡುತ್ತೇನೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​

ಈ ವಿಚಾರದಲ್ಲಿ ನಾನೇನು ಹೇಳಲು ಇಲ್ಲ. ನಾನು ಏನೇನು ಮಾತನಾಡಬೇಕೋ ಅದನ್ನು ಸದನದಲ್ಲಿ ಮಾತನಾಡಿದ್ದೇನೆ. ಮಿಕ್ಕಿದ್ದನ್ನು ವಿಡಿಯೋ ನೋಡಿದ ನಂತರ ನಿರ್ಧರಿಸುತ್ತೇನೆ ಎಂದರು.

ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ, ಅವರ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡುವುದು ಬೇಡ ಎಂದು ಹೇಳಿದವರು ಯಾರು?, ಅದರಲ್ಲಿ ಶಾಕ್ ಆದರೂ ಇರಲಿ, ಏನಾದರೂ ಇರಲಿ. ಅವರಿಗೆ ಒಳ್ಳೆಯದಾಗಲಿ ಪಾಪ ಎಂದರು.

ಯುವತಿಯ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಆಕೆಯ ಕುಟುಂಬದ ಭದ್ರತೆ ಹಾಗೂ ಜೀವ ರಕ್ಷಣೆ ಸರ್ಕಾರದ ಹೊಣೆಯಾಗುತ್ತದೆ. ಎಲ್ಲರಿಂದಲೂ ಸಹಕಾರ ಸಿಗುವ ನಿರೀಕ್ಷೆ ಇದೆ. ನಾವೆಲ್ಲರೂ ಕುಳಿತು ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಸಂತ್ರಸ್ತೆಯ ರಕ್ಷಣೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ಡಿಕೆಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಸವಕಲ್ಯಾಣ ಉಪ ಕದನ : ಹೆಚ್‌ಡಿಕೆ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.