ಬೆಂಗಳೂರು: ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಗರದಲ್ಲಿ ಡೆಪ್ಯೂಟಿ ಕಮಿಷನರ್ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎನ್ ಸಂತೋಷ್ ಬಾಬುರನ್ನು ರಾಮನಗರ ಎಸ್ಪಿಯಾಗಿ, ಕೆ ಪರಶುರಾಮ್ ರನ್ನು ಚಿತ್ರದುರ್ಗ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯಲ್ಲಿದ್ದ ಜಿ. ರಾಧಿಕಾರನ್ನು ಬಿಎಂಟಿಸಿ ಡೈರೆಕ್ಟರ್ ಆಗಿ ಮತ್ತು ರಾಮನಗರ ಸೂಪರಿಡೆಂಟ್ ಆಫ್ ಪೊಲೀಸ್ ಆಗಿದ್ದ ಎಸ್. ಗಿರೀಶ್ರನ್ನು ವೈಟ್ ಫೀಲ್ಡ್ ಡಿಸಿಪಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.