ETV Bharat / state

ವರ್ಷದಿಂದ ಉಳುಮೆ ಮಾಡುವ ರೈತರಿಗೆ ಭೂಮಿ ಬಿಟ್ಟುಕೊಡಲು ಸರ್ಕಾರ ಕ್ರಮ : ಅಶೋಕ್ - ವರ್ಷದಿಂದ ಉಳುಮೆ ಮಾಡುವ ರೈತರಿಗೆ ಭೂಮಿ ಬಿಟ್ಟುಕೊಡಲು ಸರ್ಕಾರ ಕ್ರಮ

ಮೊನ್ನೆ ಸಂಪುಟದಲ್ಲಿ ಈ ವಿಷಯ ಚರ್ಚೆಸಲಾಗಿದೆ. ನನ್ನ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಆ ಸಮಿತಿ ಸಭೆ ನಡೆಸಿ, ಕಾನೂನು ಪ್ರಕಾರ ರೈತರಿಗೆ ಭೂಮಿಯನ್ನು ನೀಡಲು ಪರಿಶೀಲಿಸಲಿದೆ. ಮಲೆನಾಡು ಭಾಗದ ಭೂಮಿಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಪರಿಶೀಲಿಸಲಾಗುತ್ತಿದೆ..

farmers land
ಕಂದಾಯ ಸಚಿವ ಆರ್.ಅಶೋಕ್
author img

By

Published : Mar 30, 2022, 6:01 PM IST

ಬೆಂಗಳೂರು : ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸರ್ಕಾರ ಕ್ರಮಕೈಗೊಳ್ಳಲಿದೆ. ಬ್ರಿಟಿಷರ ಕಾಲದಿಂದಲ್ಲೂ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ರೈತರಿಗೆ ಭೂಮಿ ನೀಡುವಂತೆ ಸೂಚನೆ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ಕೆ. ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ ಭಾಗದಲ್ಲಿ ಕುಮ್ಕಿ ಭಾಣಿ ಭೂಮಿಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಟ್ಟ, ಹಾಡಿಗಳಿವೆ, ಮೈಸೂರು ಭಾಗದಲ್ಲಿ ಕಾನು ಮತ್ತು ಸೊಪ್ಪಿನ ಬೆಟ್ಟ ಭೂಮಿಗಳು, ಕೊಡಗಿನಲ್ಲಿ ಜಮ್ಮಾ ಮತ್ತು ಭಾಣಿ, ಹೈದರಾಬಾದ್ ಪ್ರದೇಶದಲ್ಲಿ ತರಿಗ ಭೂಮಿಗಳ ಬಗೆಗಿನ ವಿಶೇಷಾಧಿಕಾರಿಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದರು.

ರಾಜ್ಯಾದ್ಯಂತ ಈ ರೀತಿ ಲಕ್ಷಾಂತರ ಎಕರೆ ಭೂಮಿ ಇದೆ. ಚಿಕ್ಕಮಗಳೂರಿನಲ್ಲಿ 45 ಸಾವಿರ ಎಕರೆ, ಹಾಸನದಲ್ಲಿ 35 ಎಕರೆ ಇದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿಲ್ಲ. ರೈತರಿಗೂ ಇಲ್ಲ ಎಂಬಂತಾಗಿದೆ. ಅದಕ್ಕಾಗಿ ಈ ಭೂಮಿಗಳನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ನೀಡಬೇಕು ಎಂಬ ಮನಸ್ಥಿತಿಯಲ್ಲಿ ನಮ್ಮ ಸರ್ಕಾರ ಇದೆ ಎಂದರು.

ಕಾನೂನಿನಂತೆ ಕ್ರಮ : ಮೊನ್ನೆ ಸಂಪುಟದಲ್ಲಿ ಈ ವಿಷಯ ಚರ್ಚೆಸಲಾಗಿದೆ. ನನ್ನ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಆ ಸಮಿತಿ ಸಭೆ ನಡೆಸಿ, ಕಾನೂನು ಪ್ರಕಾರ ರೈತರಿಗೆ ಭೂಮಿಯನ್ನು ನೀಡಲು ಪರಿಶೀಲಿಸಲಿದೆ. ಮಲೆನಾಡು ಭಾಗದ ಭೂಮಿಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಪರಿಶೀಲಿಸಲಾಗುತ್ತಿದೆ.

ಅದಕ್ಕೆ ರೈತರಿಂದ ಎಷ್ಟು ಹಣ ಸಂಗ್ರಹಿಸಬೇಕು ಎಂಬ ಬಗ್ಗೆ ನಾನೇ ಖುದ್ದಾಗಿ ಮಲೆನಾಡು, ಚಿಕ್ಕಮಗಳೂರು ಹಾಗೂ ಇತರ ಪ್ರದೇಶಗಳಿಗೆ ಹೋಗಿ ರೈತರ ಜೊತೆ ಸಮಾಲೋಚನೆ ಮಾಡುತ್ತೇನೆ ಎಂದರು. ಗೋಮಾಳ ಭೂಮಿಯನ್ನು ಉಳಿಸಿಕೊಳ್ಳುವ ಮನಸ್ಥಿತಿ ನಮ್ಮದು. ನೈಜ್ಯವಾದ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮಾಡಲು ಸರ್ಕಾರ ಬದ್ಧ- ಸಿಎಂ ಬಸವರಾಜ ಬೊಮ್ಮಾಯಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.