ETV Bharat / state

ವರಮಹಾಲಕ್ಷ್ಮಿ ಹಬ್ಬ: ಸರ್ಕಾರದಿಂದ ಮಹಿಳೆಯರಿಗೆ ಅರಿಶಿನ, ಕುಂಕುಮ, ಬಳೆ ಉಡುಗೊರೆ

ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಮಹಿಳೆಯರಿಗೆ ಅರಿಶಿನ, ಕುಂಕುಮ ಮತ್ತು ಬಳೆಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

government-will-giving-gifts-to-women-on-varamahalakshmi-festival
ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರದಿಂದ ಮಹಿಳೆಯರಿಗೆ ಅರಿಶಿನ, ಕುಂಕುಮ ಮತ್ತು ಬಳೆ ಉಡುಗೊರೆ
author img

By ETV Bharat Karnataka Team

Published : Aug 21, 2023, 10:00 PM IST

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಾಲಯಗಳಲ್ಲಿ ಅರಿಶಿನ, ಕುಂಕುಮ ಮತ್ತು ಬಳೆಗಳನ್ನು ರಾಜ್ಯದ ಮಹಿಳೆಯರಿಗೆ ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆಗಸ್ಟ್ 25 ರಂದು ವರಮಹಾಲಕ್ಷ್ಮಿ ವ್ರತ ನಡೆಯಲಿದೆ. ಈ ದಿನದಂದು ಎಲ್ಲಾ ಅನುಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರಿಗೆ ಅರಿಶಿನ, ಕುಂಕುಮ ಹಾಗೂ ಬಳೆಗಳನ್ನು ನೀಡಲಾಗುತ್ತದೆ.

Government  will giving  gifts to women on Varamahalakshmi festival
ರಾಜ್ಯ ಸರ್ಕಾರದ ಸುತ್ತೋಲೆ

ಆಯಾ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿನ, ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ದೇವರ ಮುಂದಿಟ್ಟು ಪೂಜಿಸಿ ಗೌರವದಿಂದ ಮಹಿಳೆಯರಿಗೆ ನೀಡುವುದಾಗಿ ಹಾಗೂ ಅದರ ವೆಚ್ಚವನ್ನು ಆಯಾ ದೇವಸ್ಥಾನದಿಂದ ನಿಯಮಾನುಸಾರವೇ ಭರಿಸಲು ಆದೇಶಿಸಲಾಗಿದೆ. ಪ್ರಸಾದ ರೂಪವಾಗಿ ಅರಿಶಿನ, ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯದ ಹೆಸರು ಮುದ್ರಿಸಿ ಲಕೋಟೆ ತಯಾರಿಸಿಕೊಂಡು ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ನೀಡಲು ಸೂಚಿಸಲಾಗಿದೆ.

ಇದನ್ನೂ ಓದಿ: ವಿಶೇಷ ಅನುದಾನ ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.