ETV Bharat / state

ನೆರೆಗೆ ಭಾಗಶಃ ಹಾನಿಗೀಡಾದ ಮನೆಗಳ ಪರಿಹಾರ ಮೊತ್ತ ಕಡಿತಕ್ಕೆ ಸರ್ಕಾರ ಚಿಂತನೆ?

ನೆರೆಗೆ ಸಂಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದ್ದು, ಇದೀಗ ಭಾಗಶಃ ಹಾನಿಗೊಳಗಾದ ಮನೆಗಳಿಗೆ ನೀಡುವ ಮೊತ್ತವನ್ನು ಪರಿಷ್ಕರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

Government thinking to cut 5 lakh compensation for partially damaged houses?
ನೆರೆಗೆ ಭಾಗಶಃ ಹಾನಿಗೀಡಾದ ಮನೆಗಳ 5 ಲಕ್ಷ ಪರಿಹಾರ ಮೊತ್ತ ಕಡಿತಗೊಳಿಸಲು ಸರ್ಕಾರ ಚಿಂತನೆ?
author img

By

Published : Jan 14, 2020, 7:41 AM IST

ಬೆಂಗಳೂರು: ನೆರೆಗೆ ಸಂಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದ್ದು, ಇದೀಗ ಭಾಗಶಃ ಹಾನಿಗೊಳಗಾದ ಮನೆಗಳಿಗೆ ನೀಡುವ ಮೊತ್ತವನ್ನು ಪರಿಷ್ಕರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

ಕಳೆದ‌ ವರ್ಷ ಆಗಸ್ಟ್​ನಲ್ಲಿ ಕರ್ನಾಟಕದಲ್ಲಿ ಸುರಿದ ಮಹಾಮಳೆಗೆ ಲಕ್ಷಾಂತರ ಮನೆಗಳು ಹಾನಿಗೊಳಗಾಗಿವೆ. ಮಳೆಯ ಆರ್ಭಟಕ್ಕೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಪ್ರವಾಹಕ್ಕೆ‌‌ ಮನೆ ಕಳೆದುಕೊಂಡ‌ ನಿರಾಶ್ರಿತರಿಗೆ ಸಿಎಂ‌ ಯಡಿಯೂರಪ್ಪ ಐದು‌ ಲಕ್ಷ ರೂ.‌ ಪರಿಹಾರ ಘೋಷಿಸಿದ್ದರು. ಈ ಪೈಕಿ ಶೇ. 75ಕ್ಕಿಂತ ಹೆಚ್ಚಿಗೆ ಮನೆ ಹಾನಿಯಾದವರಿಗೆ (ಎ ಕೆಟಗರಿ) 5 ಲಕ್ಷ ರೂ.‌ ಪರಿಹಾರ ಘೋಷಿಸಿದ್ದ ಸರ್ಕಾರ ಬಳಿಕ ಶೇ. 25-75ರಷ್ಟು ಮನೆ ಹಾನಿಯಾದವರಿಗೂ (ಬಿ ಕೆಟಗರಿ) ಐದು ಲಕ್ಷ ನೀಡಲು ನಿರ್ಧರಿಸಿತ್ತು. ಆದರೆ ಇದೀಗ ಭಾಗಶಃ ಮನೆ ಹಾನಿಯಾದವರ ಪರಿಹಾರ ಮೊತ್ತವನ್ನು ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೆರೆಗೆ ಭಾಗಶಃ ಹಾನಿಗೀಡಾದ ಮನೆಗಳ 5 ಲಕ್ಷ ಪರಿಹಾರ ಮೊತ್ತ ಕಡಿತಗೊಳಿಸಲು ಸರ್ಕಾರ ಚಿಂತನೆ?

ಪರಿಹಾರ ಮೊತ್ತ ಕಡಿತದ ಚಿಂತನೆ ಏಕೆ?

ನೆರೆಗೆ ಭಾಗಶಃ ಹಾನಿಗೀಡಾದ ಮನೆಗಳಿಗೆ ಸಿಎಂ ಯಡಿಯೂರಪ್ಪರ ಭರವಸೆಯಂತೆ 5 ಲಕ್ಷ ರೂ. ಪರಿಹಾರ ನೀಡಲು ಅಧಿಕಾರಿಗಳು ತಾಂತ್ರಿಕ ಸಂಕೀರ್ಣತೆಯನ್ನು ಎದುರಿಸುತ್ತಿದ್ದಾರೆ.

ಮೊದಲಿಗೆ ಭಾಗಶಃ ಹಾನಿಗೀಡಾದ ಅಂದರೆ ಬಿ ಕೆಟಗರಿ ಮನೆಗಳಿಗೆ ಒಂದು ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ಸಿ ಕೆಟಗರಿ ಅಂದರೆ ಶೇ. 15-25ರಷ್ಟು ಹಾನಿಗೀಡಾದ ಮನೆಗಳಿಗೆ 25,000 ರೂ. ಪರಿಹಾರ ಕೊಡಲು ನಿರ್ಧರಿಸಲಾಗಿದೆ. ಬಳಿಕ ಅಧಿವೇಶನದ ವೇಳೆ ಎ‌ ಮತ್ತು ಬಿ ಕೆಟಗರಿ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದರು.

ಆದರೆ, ವಾಸ್ತವದಲ್ಲಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ಪರಿಹಾರ ನೀಡುವುದು ಕಷ್ಟ ಸಾಧ್ಯವಾಗುತ್ತಿದೆ. ಭಾಗಶಃ ಹಾನಿಯಾದ ಮನೆಗಳಲ್ಲಿ ಗೋಡೆ ಅಥವಾ ಮನೆಯ ಒಂದು ಭಾಗವಷ್ಟೇ ಕುಸಿದಿದ್ದು, ಇಂತಹ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ.

ಸಂಪೂರ್ಣ ಹಾನಿಗೊಳಗಾದ ಎ ಕೆಟಗರಿ ಮನೆಗಳಿಗೆ ಹಂತ ಹಂತವಾಗಿ ಪರಿಹಾರ ವಿತರಿಸಲಾಗುತ್ತಿದೆ. ಮೊದಲ 1 ಲಕ್ಷ ರೂ. ಕಂತನ್ನು ಮನೆ ಫೌಂಡೇಶನ್ ಕಟ್ಟುವಾಗ ನೀಡಲಾಗುತ್ತದೆ. ಉಳಿದಂತೆ ಇತರೆ ಕಂತುಗಳನ್ನು ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. ಪ್ರತಿ ನಿರ್ಮಾಣ ಹಂತಗಳ ಫೋಟೋ ಸಲ್ಲಿಸಿದ ಬಳಿಕ ಮುಂದಿನ ಕಂತನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಭಾಗಶಃ ಹಾನಿಗೊಳಗಾದ ಬಿ ಕೆಟಗರಿ ಮನೆಗಳಿಗೆ ಈ ರೀತಿಯ ಪ್ರಕ್ರಿಯೆ ಅನುಸರಿಸುವುದು ಅಸಾಧ್ಯವಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಹೀಗಾಗಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 3 ಲಕ್ಷ ರೂ. ಪರಿಹಾರ ನೀಡುವುದು ಒಳಿತು ಎಂಬುದು ಅಧಿಕಾರಿಗಳ ಸಲಹೆಯಾಗಿದೆ‌. ಶೇ. 25-50ರಷ್ಟು ಹಾನಿಗೀಡಾದ ಮನೆಗಳಿಗೆ 1.50 ಲಕ್ಷ ರೂ., ಶೇ. 50-75ರಷ್ಟು ಹಾನಿಗೀಡಾದ ಮನೆಗಳಿಗೆ 3 ಲಕ್ಷ ರೂ.‌ ಪರಿಹಾರ ನೀಡಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಸಂಬಂಧ ಸರ್ಕಾರ ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರಲಿದೆ ಎಂದು ಹೇಳಲಾಗಿದೆ.

ನೆರೆಗೆ ಹಾನಿಗೀಡಾದ ಮನೆಗಳ ವಿವರ:

ಎ ಕೆಟಗರಿ ಮನೆ- 7,835,

ಬಿ ಕೆಟಗರಿ ಮನೆ- 25,125

, ಸಿ ಕೆಟಗರಿ ಮನೆ- 82,205

, ಒಟ್ಟು ಮನೆ ಹಾನಿ- 1,17,165

ಡಿಸಿ ಅನುಮೋದಿತ ಮನೆ- 1,16,544

Intro:Body:KN_BNG_03_PARTIALDAMGEDHOUSE_COMPENSATION_SCRIPT_7201951

ನೆರೆಗೆ ಭಾಗಶಃ ಹಾನಿಗೀಡಾದ ಮನೆಗಳ 5 ಲಕ್ಷ ಪರಿಹಾರ ಮೊತ್ತ ಕಡಿತಗೊಳಿಸಲು ಸರ್ಕಾರ ಚಿಂತನೆ?

ಬೆಂಗಳೂರು: ನೆರೆಗೆ ಸಂಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ಐದು ಲಕ್ಷ ರೂ.‌ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿತ್ತು. ಇದೀಗ ಭಾಗಶಃ ಹಾನಿಗೊಳಗಾದ ಮನೆಗಳಿಗೆ ನೀಡುವ ಮೊತ್ತವನ್ನು ಪರಿಷ್ಕರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಕಳೆದ‌ ವರ್ಷ ಆಗಸ್ಟ್ ನಲ್ಲಿ ಕರ್ನಾಟಕದಲ್ಲಿ ಸುರಿದ ಮಹಾ‌ಮಳೆಗೆ ಲಕ್ಷಾಂತರ ಮನೆಗಳು ಹಾನಿಗೊಳಗಾಗಿವೆ. ಮಹಾ‌ ಮಳೆಯ ಆರ್ಭಟಕ್ಕೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಪ್ರವಾಹಕ್ಕೆ‌‌ ಮನೆ ಕಳೆದುಕೊಂಡ‌ ನಿರಾಶ್ರಿತರಿಗೆ ಸಿಎಂ‌ ಯಡಿಯೂರಪ್ಪ ಐದು‌ ಲಕ್ಷ ರೂ.‌ ಪರಿಹಾರ ಘೋಷಿಸಿದ್ದರು. ಈ ಪೈಕಿ 75ಶೇ. ಗಿಂತ ಹೆಚ್ಚಿಗೆ ಮನೆ ಹಾನಿಯಾದವರಿಗೆ (ಎ ಕೆಟಗರಿ) 5 ಲಕ್ಷ ರೂ.‌ ಪರಿಹಾರ ಘೋಷಿಸಿದ್ದ ಸರ್ಕಾರ ಬಳಿಕ 25-75ಶೇ. ಮನೆ ಹಾನಿಯಾದವರಿಗೂ (ಬಿ ಕೆಟಗರಿ) ಐದು ಲಕ್ಷ ನೀಡಲು ನಿರ್ಧರಿಸಿತ್ತು. ಆದರೆ ಇದೀಗ ಭಾಗಶಃ ಮನೆ ಹಾನಿಯಾದವರ ಪರಿಹಾರ ಮೊತ್ತವನ್ನು ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರ ಮೊತ್ತ ಕಡಿತದ ಚಿಂತನೆ ಏಕೆ?:

ನೆರೆಗೆ ಭಾಗಶಃ ಹಾನಿಗೀಡಾದ ಮನೆಗಳಿಗೆ ಸಿಎಂ ಯಡಿಯೂರಪ್ಪರ ಭರವಸೆಯಂತೆ 5 ಲಕ್ಷ ರೂ. ಪರಿಹಾರ ನೀಡಲು ಅಧಿಕಾರಿಗಳು ತಾಂತ್ರಿಕ ಸಂಕೀರ್ಣತೆಯನ್ನು ಎದುರಿಸುತ್ತಿದ್ದಾರೆ.

ಮೊದಲಿಗೆ ಭಾಗಶಃ ಹಾನಿಗೀಡಾದ ಅಂದರೆ ಬಿ ಕೆಟಗರಿ ಮನೆಗಳಿಗೆ ಒಂದು ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ಸಿ ಕೆಟಗರಿ ಅಂದರೆ 15-25ಶೇ. ಹಾನಿಗೀಡಾದ ಮನೆಗಳಿಗೆ 25,000 ರೂ. ಪರಿಹಾರ ಕೊಡಲು ನಿರ್ಧರಿಸಲಾಗಿದೆ. ಬಳಿಕ ಅಧಿವೇಶನದ ವೇಳೆ ಎ‌ ಮತ್ತು ಬಿ ಕೆಟಗರಿ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದರು.

ಆದರೆ, ವಾಸ್ತವದಲ್ಲಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ಪರಿಹಾರ ನೀಡುವುದು ಕಷ್ಟ ಸಾಧ್ಯವಾಗುತ್ತಿದೆ. ಭಾಗಶಃ ಹಾನಿಯಾದ ಮನೆಗಳಲ್ಲಿ ಗೋಡೆ ಅಥವಾ ಮನೆಯ ಒಂದು ಭಾಗವಷ್ಟೆ ಕುಸಿದಿದ್ದು, ಇಂಥ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ.

ಸಂಪೂರ್ಣ ಹಾನಿಗೊಳಗಾದ ಎ ಕೆಟಗರಿ ಮನೆಗಳಿಗೆ ಹಂತ ಹಂತವಾಗಿ ಪರಿಹಾರ ವಿತರಿಸಲಾಗುತ್ತಿದೆ. ಮೊದಲ 1 ಲಕ್ಷ ರೂ. ಕಂತನ್ನು ಮನೆ ಫೌಂಡೇಶನ್ ಕಟ್ಟುವಾಗ ನೀಡಲಾಗುತ್ತದೆ. ಉಳಿದಂತೆ ಇತರ ಕಂತುಗಳನ್ನು ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. ಪ್ರತಿ ನಿರ್ಮಾಣ ಹಂತಗಳ ಫೋಟೋವನ್ನು ಸಲ್ಲಿಸಿದ ಬಳಿಕ ಮುಂದಿನ ಕಂತನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಭಾಗಶಃ ಹಾನಿಗೊಳಗಾದ ಬಿ ಕೆಟಗರಿ ಮನೆಗಳಿಗೆ ಈ ರೀತಿಯ ಪ್ರಕ್ರಿಯೆ ಅನುಸರಿಸುವುದು ಅಸಾಧ್ಯವಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಹೀಗಾಗಿ ಭಾಗಶಃ ಹಾನಿಗೊಳಗಾದ ಮನೆಗಳಿಗೆ 3 ಲಕ್ಷ ರೂ. ಪರಿಹಾರ ನೀಡುವುದು ಒಳಿತು ಎಂಬುದು ಅಧಿಕಾರಿಗಳ ಸಲಹೆಯಾಗಿದೆ‌. 25-50ಶೇ. ಹಾನಿಗೀಡಾದ ಮನೆಗಳಿಗೆ 1.50 ಲಕ್ಷ ರೂ., 50-75ಶೇ. ಹಾನಿಗೀಡಾದ ಮನೆಗಳಿಗೆ 3 ಲಕ್ಷ ರೂ.‌ ಪರಿಹಾರ ನೀಡಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಸಂಬಂಧ ಸರ್ಕಾರ ಶೀಘ್ರದಲ್ಲೇ ಒಂದು ನಿರ್ಧಾರಕ್ಕೆ ಬರಲಿದೆ ಎಂದು ಹೇಳಲಾಗಿದೆ.

ನೆರೆಗೆ ಹಾನಿಗೀಡಾದ ಮನೆಗಳ ವಿವರ:

ಎ ಕೆಟಗರಿ ಮನೆ- 7,835

ಬಿ ಕೆಟಗರಿ ಮನೆ- 25,125

ಸಿ ಕೆಟಗರಿ ಮನೆ- 82,205

ಒಟ್ಟು ಮನೆ ಹಾನಿ- 1,17,165

ಡಿಸಿ ಅನುಮೋದಿತ ಮನೆ- 1,16,544Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.